ಕೆಎಂಎಫ್ ಅದ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಅವಿರೋಧ ಆಯ್ಕೆ

ಬೆಂಗಳೂರು, ಜೂ.21: ಕೆಎಂಎಫ್ ನೂತನ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಭೀಮನಾಯ್ಕ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.


ಭೀಮನಾಯ್ಕ ಅವರು ಆಯ್ಕೆಯಾಗುತ್ತಿದ್ದಂತೆ ಇವರ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಸಂಭ್ರಮ‌ ಮೇರೆ ಮೀರಿತ್ತು. ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಹಬ್ಬದ ವಾತಾವರಣವಿದ್ದು ಪಟಾಕಿ ಸಿಡಿಸಿ ಖುಷಿಪಟ್ಟರು.
ಹಗರಿಬೊಮ್ಮನಹಳ್ಳಿಯಲ್ಲೂ ಸಂಭ್ರಮ: ಭೀಮನಾಯ್ಕ ಅವರ ತವರೂರು ಹಗರಿಬೊಮ್ಮನಹಳ್ಳಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಬೆಂಬಲಿಗರ ಸಂಭ್ರಮ ವ್ಯಕ್ಯಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಅಕ್ಕಿ ತೋಟೇಶ್, ಹುಡೇದ ಗುರುಬಸವರಾಜ್, ಹಂಪಾಪಟ್ಟಣ ಸಿ.ಹಾಲೇಶ್ ಮತ್ತಿತರರು ಭೀಮಾನಾಯ್ಕ ಅವರನ್ನು ಅಭಿನಂದಿಸಿದ್ದಾರೆ.
*****

Leave a Reply

Your email address will not be published. Required fields are marked *