ಆನೇಕಲ್ ತಾಂಡ ಶಾಲೆಗೆ ಅತಿಥಿ ಶಿಕ್ಷಕರಿಂದ ಸೈರನ್ (ಬೆಲ್) ದೇಣಿಗೆ

ಹಗರಿಬೊಮ್ಮನಹಳ್ಳಿ, ಮಾ.24: ತಾಲೂಕಿನ ಆನೇಕಲ್ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಅತಿಥಿ ಶಿಕ್ಷಕರು ಶಾಲೆಗೆ ಸೈರನ್ (ಬೆಲ್) ದೇಣಿಗೆ ನೀಡಿದ್ದಾರೆ.
ಶಾಲೆಯ ಅತಿಥಿ ಶಿಕ್ಷಕರಾದ ಎಲ್ ದೇವೇಂದ್ರ ನಾಯಕ್, ಶಿವರಾಜ್ ಚೌಹಾಣ್ ಮತ್ತು ಯೋಗೇಶ್ ಅವರು ಸುಮಾರು ಐದು ಸಾವಿರ ರೂ.‌ಮೌಲ್ಯದ ಸೈರನ್ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.


ಎಸ್.ಡಿ.ಎಮ್.ಸಿ ಅಧ್ಯಕ್ಷ ಕೊಟ್ರೇಶ್ ನಾಯಕ್, ಮುಖ್ಯ ಗುರು ಕೆ ಮಂಜುನಾಥ, ವಿಜ್ಞಾನ ಶಿಕ್ಷಕ ಉಸ್ಮಾನ್ ದೊಡ್ಡಮನಿ ಮತ್ತಿತರರು ದೇಣಿಗೆ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.
*****

Leave a Reply

Your email address will not be published. Required fields are marked *