Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಕೂಡ್ಲಿಗಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Fri, 31 Oct 2025 16:39:20 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕೂಡ್ಲಿಗಿ – Karnataka Kahale https://www.karnatakakahale.com 32 32 ಮೌನತಪಸ್ವಿ ಸಿದ್ದರಾಮ ಹಿರೇಮಠರು -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ https://www.karnatakakahale.com/news/21133 Fri, 31 Oct 2025 16:39:20 +0000 https://www.karnatakakahale.com/?p=21133 ಶುಕ್ರವಾರ (ಅ.31) ವಯೋ‌ ನಿವೃತ್ತಿ ಹೊಂದಿದ ಪ್ರಾಚಾರ್ಯ, ಸಾಹಿತಿ, ಪತ್ರಕರ್ತ ಕೂಡ್ಲಿಗಿಯ ಶ್ರೀ ಸಿದ್ಧರಾಮ ಹಿರೇಮಠ ಅವರ ಕುರಿತು ನಿವೃತ್ತ ಡಿಡಿಪಿಐ ಮಹಿಮ ಅವರು ಹಿರೇಮಠ ರವರೊಂದಿಗಿನ ಸ್ನೇಹ,  ವ್ಯಕ್ತಿತ್ವವನ್ನು ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದಲ್ಲಿದ್ದು ಸದಾ ಮಾರ್ಗದರ್ಶನ…

The post ಮೌನತಪಸ್ವಿ ಸಿದ್ದರಾಮ ಹಿರೇಮಠರು -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ appeared first on Karnataka Kahale.

]]>
ಶುಕ್ರವಾರ (ಅ.31) ವಯೋ‌ ನಿವೃತ್ತಿ ಹೊಂದಿದ ಪ್ರಾಚಾರ್ಯ, ಸಾಹಿತಿ, ಪತ್ರಕರ್ತ ಕೂಡ್ಲಿಗಿಯ ಶ್ರೀ ಸಿದ್ಧರಾಮ ಹಿರೇಮಠ ಅವರ ಕುರಿತು ನಿವೃತ್ತ ಡಿಡಿಪಿಐ ಮಹಿಮ ಅವರು ಹಿರೇಮಠ ರವರೊಂದಿಗಿನ ಸ್ನೇಹ,  ವ್ಯಕ್ತಿತ್ವವನ್ನು ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದಲ್ಲಿದ್ದು ಸದಾ ಮಾರ್ಗದರ್ಶನ ಮಾಡುತ್ತಿರುವ ಶ್ರೀ ಸಿದ್ಧರಾಮ‌ ಹಿರೇಮಠ ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.                                      (ಸಂಪಾದಕರು)

ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠ ಪಿಯು ಕಾಲೇಜ್ ನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಶುಕ್ರವಾರ (ಅ.31) ವಯೋನಿವೃತ್ತರಾದವರು,
ನಮ್ಮ ಹೆಮ್ಮೆಯ ಗುರುಗಳು,ಆತ್ಮೀಯರು, ಹೃದಯವಂತರಾದ ಶ್ರೀ ಸಿದ್ಧರಾಮ ಹಿರೇಮಠ ಅವರ ಹಾಗೂ ನನ್ನ ಮಧ್ಯೆ ಇರುವ ಅವಿನಾಭಾವ ಸಂಬಂಧಗಳು ಅವರ ನಿವೃತ್ತಿ ವಿಷಯ ತಿಳಿದಾಗ ಮತ್ತೆ ಗರಿಕೆದರಿದವು.

ನಾನು ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ಕಂಡ ,ಮೊದಲನೆಯ ಹಾಗೂ ಕಟ್ಟಕಡೆಯ ಭಾವನಾ ಜೀವಿ ಸಿದ್ಧರಾಮ ಹಿರೇಮಠರು‌.
ಸೂಕ್ಷ್ಮ ಸಂವೇದಿ,ಮಿತಭಾಷಿ,ಒಡಲ ತುಂಬ ಮಮತೆ,ನಿಷ್ಕಲ್ಮಶವಾಷ ನೋಟ,ಅಕಾರಣವಾದ ಪ್ರೀತಿ ಅವರಲ್ಲಿ ನಾನು ಕಂಡಿದ್ದೇನೆ..
ಇವರು ಕವಿ….. ಗಜಲ್ ಸಾಹಿತ್ಯದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯುವ,ವ್ಯಾಖ್ಯಾನಿಸುವ,ಗಜಲ್ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಪಾಂಡಿತ್ಯವನ್ನು ಸಿದ್ಧರಾಮ ಹಿರೇಮಠರು ಹೊಂದಿದ್ದಾರೆ.
ಮಾತುಗಳು ಅಷ್ಟು ಮೃದುವಾಗಿದ್ದರು, ಅವರು ಯಾರಿಗೂ ಸೊಪ್ಪು ಹಾಕಿದವರಲ್ಲ,ಕೈ ಕಟ್ಟಿ ನಿಂತವರಲ್ಲ..ಜೀ ಜೀ ಅಂದವರಲ್ಲ.ತಮಗೆ ಒಪ್ಪವಾಗದುದ್ದನ್ನು ಸಮಯ ಬಂದಾಗ ನೇರವಾಗಿ ಎರಡೇ ಎರಡು ಮಾತುಗಳಲ್ಲಿ ಕಟುವಾಗಿ ಹೇಳಬಲ್ಲ ಛಾತಿಯುಳ್ಳ ಹಿರೇಮಠರು ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗ ಸ್ಥಿತಿಗೇರಿದ್ದರೂ ,ಅವರ ಈ ನೇರ ನುಡಿಗಳಿಂದ ಸಾಹಿತ್ಯ ಕ್ಷೇತ್ರವನ್ನು ವಶಪಡಿಸಿಕೊಂಡ ರೀತಿಯಲ್ಲಿ ವರ್ತಿಸುವ ಕೆಲ ಸ್ವಘೋಷಿತ ಸಾಹಿತಿಗಳು ಅವರ ಬಗ್ಗೆ ಮೂಗು ಮುರಿದುಕೊಂಡ ಹಲವಾರು ಉದಾಹರಣೆಗಳಿವೆ.
ಅವರು ಪಿ.ಹೆಚ್ .ಡಿ ಗೆ ಎಲ್ಲಾ ತಯಾರಿ ಮಾಡಿಕೊಂಡಾಗ ಅವರ ಪಾಪಿ ಸಹೋದ್ಯೋಗಿಯೊಬ್ಬ ಅವರ ಆಸೆಗೆ ತಣ್ಣೀರೆಚಿದ್ದು ಸರ್ವವಿದಿತವಾದ ವಿಷಯ..
ಖಂಡಿತವಾದಿ ಲೋಕ ವಿರೋಧಿ ಎನ್ನುವ ಮಾತು ಹಿರೇಮಠರಿಗೆ ಅಕ್ಷರಶಃ
ಒಪ್ಪುತ್ತದೆ..ಇದ್ದದ್ದನ್ನು ಇದ್ದ ಹಾಗೆ ಹೇಳುವ ನಮ್ಮ ಗಜಲ್ ಕಿಂಗ್ ನನಗಂತೂ ಬಹಳ ಇಷ್ಟವಾಗುತ್ತಾರೆ..
ನಾನು ಅವರು ಸಾಕಷ್ಟು ಸಲ ಭೇಟಿಯಾದಾಗ ನಾವು‌ ಮಾತನಾಡಿದ್ದು ಬಹಳ ಕಡಿಮೆ..ಎದುರು ಬದಿರಾಗಿ ಕುಳಿತಾಗ ,ಅಕ್ಕ ಪಕ್ಕದಲ್ಲಿ ಕುಳಿತಾಗ ನಾವಿಬ್ಬರೂ ಕಂಗಳ ಮೂಲಕ, ಮುಗುಳ್ನಗುವಿನ ಮೂಲಕ ಮಾತನಾಡಿದ್ದೇ ಹೆಚ್ಚು..
ಈ ಮಗುವಿನಂತಹ ಮನಸ್ಸಿನ ಮನುಷ್ಯನನ್ನು ಕೆಲವೇ ಕೆಲವು ಮನಸುಗಳ ಮಾತ್ರ ಅರ್ಥ ಮಾಡಿಕೊಂಡಿರಬಲ್ಲವು ಎನ್ನುವುದು ನನ್ನ‌ ಅನಿಸಿಕೆ…

ಅವರು ತಮ್ಮ ತಂದೆಯವರನ್ನು ನೆನೆದಾಗ ಅವರ ಕಂಗಳು ಒದ್ದೆಯಾಗುತ್ತವೆ..ಅವರ ತಂದೆಯವರ ಕೊನೆಯ ದಿನ ನಡೆದ ಘಟನೆಯನ್ನು ನೆನೆದುಕೊಂಡಾಗ ಇಂದಿಗೂ ಅವರು ಮಗುವಿನಂತೆ ಅತ್ತುಬಿಡುತ್ತಾರೆ..ಅಪ್ಪನ ಮಮತೆ,ಅಪ್ಪನ ಪ್ರೀತಿಯನ್ನುಂಡು ಬೆಳೆದ ಈ ಸೂನು ಒಮ್ಮೆ ತಮ್ಮ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ರಾಯಚೂರಿಗೆ ಬಂದಿದ್ದರು.. ಅಂದ ಹಾಗೆ ಈ ಹುಲಿ ಜನಿಸಿದ್ದು ನನ್ನ ಹೆಮ್ಮೆಯ ರಾಯಚೂರಿನಲ್ಲಿಯೇ…. ರಾಯಚೂರಿನ ಪ್ರಖ್ಯಾತ ಕವಿ ಶ್ರೀ ವೀರ ಹನುಮಾನ್ ರವರನ್ನು ಭೇಟಿಯಾಗಲು ಹಮ್ ದರ್ದ್ ಶಾಲೆಯ ಕಡೆ ಹೊರಟೆವು.‌.
ಹಮ್ ದರ್ದ್ ಶಾಲೆಗೆ ಹೋಗಿ ಅಲ್ಲಿದ್ದ ವೀರಹನುಮಾನ್ ರವರನ್ನು ಭೇಟಿಯಾದೆವು.‌ಭೇಟಿಯಾಗಿ ಹೊರಬಂದಾಗ ನನ್ನನ್ನುದ್ದೇಶಿಸಿ,”ಗುರುಗಳೇ,ನನ್ನ ದೊಡ್ಡಪ್ಪ ಶಾಂತರಸರು ಇದೇ ತರಗತಿ ಕೋಣೆಯಲ್ಲಿ ಪಾಠ ಮಾಡುತ್ತಿದ್ದರು” ಅಂದವರೇ ಆ ತರಗತಿ ಕೋಣೆಯ ಮುಂದೆ ನಿಂತುಕೊಂಡು ಇಲ್ಲದ ದೊಡ್ಡಪ್ಪನನ್ನು ಮನಸ್ಸಿನಲ್ಲಿ ಹುಡುಕಿಕೊಂಡು ಭಾವುಕರಾದರು.‌ interval ನಲ್ಲಿ ಎದುರುಗಿದ್ದ ಶಾಲೆಯಿಂದ ನಾನು ಓಡೋಡಿ ದೊಡ್ಡಪ್ಪನ ಬಳಿ ಬರುತ್ತಿದ್ದೆ.ಅವರು ಪ್ರೀತಿಯಿಂದ ಕೆಲ ನಾಣ್ಯಗಳನ್ನು ಕೊಟ್ಟು ಐಸ್ ತಿನ್ನಬೇಡ ಎಂದು ಹೇಳುತ್ತಿದ್ದರು..ಹೊರಬಂದು ಅದೇ ಐಸ್ ತಿನ್ನುತ್ತಿದ್ದೆ ಅಂದರು.‌

ತಾವು ಓದುತ್ತಿದ್ದ ಹಮ್ ದರ್ದ್ ಪ್ರೌಢ ಶಾಲೆಯ ಗೇಟಿನ ಮುಂದೆ ನಿಂತು ಗೇಟಿನ ಮೂಲಕ‌ ಇಣುಕಿ ತಮ್ಮ ಪೂರ್ವಾಶ್ರಮದ ವಿದ್ಯಾಲಯವನ್ನು ಕಣ್ತುಂಬಿಕೊಂಡರು‌‌..ಆ ಶಾಲೆಯ ಗೇಟ್ ಮುಂದೆಯೂ ನಾನು ಒಂದು ಫೋಟೋ ಕ್ಲಿಕ್ಕಿಸಿದೆ..ಅಂದು‌ಭಾನುವಾರ ಶಾಲೆಗೆ ರಜೆ ಇತ್ತು.

ಈ ಎರಡು ದೃಶ್ಯಗಳನ್ನು ಕಣ್ಣಾರೆ ಕಂಡು ನನ್ನ ಕಂಗಳೂ ಸಹ ಹನಿಗೂಡಿದವು.‌ಕರುಳ ಸಂಬಂಧ ಅಂದರೆ ಇದೇ ಅಲ್ಲವೇ?

ಅವರು ಅವರ ತಂದೆ ತಾಯಿಯೊಡನೆ ವಾಸವಾಗಿದ್ದ ಬಾಲ್ಯದ ಮನೆ ಅಕಸ್ಮಾತ್ ನಮ್ಮ ಕಣ್ಣಿಗೆ ಬಿತ್ತು..
“ಇದೇ ಮನೆಯಲ್ಲಿ ನಾನು ಬೆಳೆದದ್ದು,ಇಲ್ಲಿಯೇ ಅಪ್ಪ…..” ಮಾತುಗಳು ಮೌನವಾದವು…

ರಾಯಚೂರಿನಲ್ಲಿ ಜನಿಸಿದ ಸಿದ್ಧರಾಮರು ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಿತ್ರರ ಸಹಕಾರದೊಂದಿಗೆ ರಾಯಚೂರಿನ ಕನ್ನಡ ಭವನದಲ್ಲಿ ತಮ್ಮ ಕವನ ಸಂಕಲನ ‌ಲೋಕಾರ್ಪಣೆಗೊಳಿಸಿದರು..
ಆ ಸಮಾರಂಭದಲ್ಲಿ ಮಾತನಾಡುತ್ತಾ” ಬದುಕು ತೀರಾ ಅತ್ಯಲ್ಪ ,ನಮಗೆ ಬದುಕು ಅರ್ಥವಾಗುವಷ್ಟರಲ್ಲಿ ನಮ್ಮ ಬದುಕು ಮುಗಿಯುವ ಹಂತಕ್ಕೆ ಬಂದಿರುತ್ತದೆ” ಎಂದು ಅವರು ಹೇಳಿದ ಮಾತುಗಳು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ಉಳಿದಿವೆ..ಎಂತಹ ಮಾರ್ಮಿಕವಾದ ಮಾತಲ್ಲವೇ?

ಯಾವ ಪ್ರಚಾರವನ್ನು,ಹೊಗಳಿಕೆಯನ್ನು ಬಯಸದ ಅವರ ಮನಸ್ಸು ಅಂತಹದ್ದೇ ಮನಸ್ಥಿತಿ ಹೊಂದಿದವರನ್ನು ಸೂಜಿಗಲ್ಲಿ‌ನಂತೆ ಸೆಳೆದುಬಿಡುತ್ತದೆ..

ನನ್ನ” ನಿರಾಕಾರಿ ” ಕಥಾ ಸಂಕಲನಕ್ಕೆ ಮುನ್ನುಡಿ ಬರೆದುಕೊಡಿ ಗುರುಗಳೇ ಅಂತ ವಿನಂತಿಸಿಕೊಂಡಾಗ ಅವರು ಬಹಳ ಅನಂದದಿಂದ ಪುಸ್ತಕಕ್ಕೆ ಮುನ್ನುಡಿ ಬರೆದುಕೊಟ್ಟರು.‌ಆ ಮುನ್ನುಡಿಯನ್ನು ಓದಿದ ಹಲವಾರು ಅಕ್ಷರ ಪ್ರೇಮಿಗಳು ಅವರು ಬರೆದ ಒಂದೊಂದು ಸಾಲನ್ನು ಸವಿದು ನನ್ನೊಡನೆ ಮಾತನಾಡಿದ್ದುಂಟು..

ನಾನು ಪ್ರೀತಿಯಿಂದ ಗಜಲ್ ಕಿಂಗ್ ಎಂದು ಕರೆಯುವ ನಮ್ಮ ಗಜಲ್ ದೊರೆಗಳು ನಾಳೆ ವಯೋನಿವೃತ್ತ ರಾಗಲಿದ್ದಾರೆ..ವಯಸ್ಸಾದುದು ಅವರಿಗಲ್ಲ ,ಅವರ ಜನ್ಮದಿನಾಂಕಕ್ಕೆ..
ಈ ಮೌನತಪಸ್ವಿಯ ವಿಶ್ರಾಂತ ಬದುಕು ಆನಂದಮಯವಾಗಿರಲಿ..ಅವರಿಗೆ ಸರ್ವಶಕ್ತನು ಆಯುರಾರೋಗ್ಯವನ್ನು ದಯಪಾಲಿಸಲಿ…

ಮಗುವಿನ ಮನದ ಸಿದ್ಧರಾಮರು ಸೊನ್ನಲಿಗೆಯ ಸಿದ್ಧರಾಮ ನಂತೆ ಘಟ್ಟಿಗರು..
ಸಾಹಿತ್ಯ ಕ್ಷೇತ್ರದಲ್ಲಿ ಅವರು ಇನ್ನೂ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ..
ನೆನಪಿರಲಿ,ಅವರೊಬ್ಬ ಅದ್ಭುತ ಛಾಯಾಗ್ರಾಹಕರು…!!

ಗುರುಗಳೇ ತಮಗೆ ಶುಭವಾಗಲಿ

ನಿಮ್ಮವನಾದ
-ಮಹಿಮ, ಬಳ್ಳಾರಿ

The post ಮೌನತಪಸ್ವಿ ಸಿದ್ದರಾಮ ಹಿರೇಮಠರು -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ appeared first on Karnataka Kahale.

]]>
ಕೆಯೂಡಬ್ಲ್ಯೂಜೆ ವೇದಿಕೆಯಲ್ಲಿ ‘ಕೂಡ್ಲಿಗಿ ವಿಸ್ಮಯ’ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ -ರವಿ ಹೆಗಡೆ https://www.karnatakakahale.com/news/20391 Tue, 12 Aug 2025 11:29:55 +0000 https://www.karnatakakahale.com/?p=20391 ಬೆಂಗಳೂರು, ಆ.12: ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು ಕೂಡಾ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ ಎಂದು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಅಭಿಪ್ರಾಯಪಟ್ಟರು. ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ)…

The post ಕೆಯೂಡಬ್ಲ್ಯೂಜೆ ವೇದಿಕೆಯಲ್ಲಿ ‘ಕೂಡ್ಲಿಗಿ ವಿಸ್ಮಯ’ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ -ರವಿ ಹೆಗಡೆ appeared first on Karnataka Kahale.

]]>

ಬೆಂಗಳೂರು, ಆ.12: ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು ಕೂಡಾ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ ಎಂದು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ಆಶ್ರಯದಲ್ಲಿ ನಡೆದ
ಪತ್ರಕರ್ತ ಭೀಮಣ್ಣ ಗಜಾಪುರ ಅವರು ರಚಿಸಿದ ‘ಕೂಡ್ಲಿಗಿ ವಿಸ್ಮಯ-ಅಭಿವೃದ್ಧಿ ಪತ್ರಿಕೋದ್ಯಮ” ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪರ್ತಕರ್ತರೂ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಇವತ್ತಿನ ಕಾಲಘಟ್ಟಕ್ಕೆ ತಮ್ಮ ಬುದ್ದಿಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.                          ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ತಿಳಿಸಿದರು.    ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಸಲಹೆ‌ ನೀಡಿದರು.

ಗ್ರಾಮೀಣ ಮಟ್ಟದ ಪತ್ರಕರ್ತರ ಸಾಮಥ್ಯ೯ವನ್ನು ಗುರುತಿಸಿ ಮುನ್ನೆಲೆಗೆ ತರುತ್ತಿರುವ ನಿಟ್ಟಿನಲ್ಲಿ ತಗಡೂರು ಅವರ ನೇತೃತ್ವದ ಕೆ.ಯೂ.ಡಬ್ಲ್ಯೂ.ಜೆ ತಂಡ ಮಾಡುತ್ತಿರುವ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ
ಶಿವಾನಂದ ತಗಡೂರು, ಗ್ರಾಮೀಣ ಸಮಸ್ಯೆಗಳಿಗೆ ಕನ್ನಡಿಯಂತಿರುವ ವಿಶೇಷ ವರದಿಗಾರಿಕೆ ಕೂಡಾ ಇಂದು ಪತ್ರಿಕೋದ್ಯಮಕ್ಕೆ ಅತ್ಯಗತ್ಯ ಎಂದರು.                    ಸುದ್ದಿಯ ವಿವಿಧ ಆಯಾಮಗಳನ್ನು ಕಂಡುಕೊಳ್ಳುವಲ್ಲಿ ಭೀಮಣ್ಣ ಗಜಾಪುರ ಅವರು ನಿಜಕ್ಕೂ ನಿಷ್ಣಾತರು ಎಂಬುದನ್ನು ಅವರ ಈ ಕೃತಿ ತಿಳಿಸಿಕೊಡುತ್ತದೆ ಶ್ಲಾಘಿಸಿದರು.

ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಲ್ಲಿ ವಿಷಯಗಳಿಗೆ ಪೂರಕವಾಗಿ ಅಧ್ಯಯನಶೀಲತೆ ಹೆಚ್ಚಾದ್ದಲ್ಲಿ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಕೆಯೂಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮಾತನಾಡಿ, ಪತ್ರಕರ್ತ ಭೀಮಣ್ಣ ಗಜಾಪುರ ಸ್ವಸಾಮಥ್ಯ೯ದಿಂದ ವೃತ್ತಿಯಲ್ಲಿ ಗುರುತಿಸಿಕೊಂಡವರು ಎಂದರು.

ಕೃತಿಯ ಕರ್ತೃ ಭೀಮಣ್ಣ ಗಜಾಪುರ ಮಾತನಾಡಿ,
ತಾನು ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಸಮಾಜದ ವ್ಯವಸ್ಥೆಗೆ ಪೂರಕವಾಗಿರುವ ಪತ್ರಿಕೋದ್ಯಮ ವೃತ್ತಿ ಆಯ್ಕೆ ಮಾಡಿಕೊಂಡಿರುವ ಕಾರಣ ಬಹಳಷ್ಟು ಅನುಭವ ಪಾಠವನ್ನು ಕಲಿಯುವಂತಾದೆ ಎಂದರು.

ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.                  ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ಕಾರ್ಯದರ್ಶಿ ಮತ್ತೀಕೆರೆ ಜಯರಾಮ,, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿದ್ದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ
ಎಸ್. ಸೋಮಶೇಖರ ಗಾಂಧಿ, ಆರ್. ದೇವರಾಜ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ
ಕೆ. ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷರಾದ ಎನ್. ಶ್ರೀನಾಥ್, ಕೆ.ಎಂ.‌ ಜಿಕ್ರಿಯಾ, ಕಾರ್ಯದರ್ಶಿ ಬಸವರಾಜು, ಸಮಿತಿ ಸದಸ್ಯ‌ ಎ.ಬಿ. ಶಿವರಾಜು ಸೇರಿದಂತೆ ಹಲವು ಸದಸ್ಯರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್ ಮತ್ತು ಕೂಡ್ಲಿಗಿ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.                                        ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು ಸ್ವಾಗತಿಸಿದರು.  ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ಪತ್ರಕರ್ತ ಕೂಡ್ಲಿಗಿಯ ಹುಡೇಂ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಅಗಲಿದ ಪತ್ರಕರ್ತರಿಗೆ ಶ್ರದ್ದಾಂಜಲಿ: ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಮೈಸೂರುಮಿತ್ರ ಸಂಪಾದಕ ಗಣಪತಿ, ಅರಸೀಕೆರೆಯ ಕನ್ನಡಪ್ರಭ ವರದಿಗಾರ ಶಾಂತಕುಮಾರ್ ಸೇರಿದಂತೆ ಹಲವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

The post ಕೆಯೂಡಬ್ಲ್ಯೂಜೆ ವೇದಿಕೆಯಲ್ಲಿ ‘ಕೂಡ್ಲಿಗಿ ವಿಸ್ಮಯ’ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ -ರವಿ ಹೆಗಡೆ appeared first on Karnataka Kahale.

]]>
ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ…… ಲಘು ಬರಹ: ಸಿದ್ಧರಾಮ ಕೂಡ್ಲಿಗಿ https://www.karnatakakahale.com/news/20079 Thu, 10 Jul 2025 02:55:49 +0000 https://www.karnatakakahale.com/?p=20079 ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ…… ಇತ್ತೀಚೆಗೆ ನನ್ನ ಮಗಳು ಅವಳು ಕೆಲಸ ಮಾಡುವ ಕಂಪನಿಯ ವತಿಯಿಂದ ಹೆಚ್ಚಿನ ತರಬೇತಿಗಾಗಿ ಗ್ರೀಸ್ ದೇಶಕ್ಕೆ ಹೋಗಿಬಂದಳು. ಅಲ್ಲಿಯ ಜನಜೀವನ, ಆಹಾರ ಪದ್ಧತಿಯ ಬಗ್ಗೆ ಹೇಳುತ್ತಾ “ಅಲ್ಲಿ ನಾವು ಕಾಫಿಗೆ ಸಕ್ಕರೆ ಹಾಕಿಕೊಳ್ಳೋದು ನೋಡಿ ಅಲ್ಲಿಯ…

The post ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ…… ಲಘು ಬರಹ: ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>
ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ……

ಇತ್ತೀಚೆಗೆ ನನ್ನ ಮಗಳು ಅವಳು ಕೆಲಸ ಮಾಡುವ ಕಂಪನಿಯ ವತಿಯಿಂದ ಹೆಚ್ಚಿನ ತರಬೇತಿಗಾಗಿ ಗ್ರೀಸ್ ದೇಶಕ್ಕೆ ಹೋಗಿಬಂದಳು. ಅಲ್ಲಿಯ ಜನಜೀವನ, ಆಹಾರ ಪದ್ಧತಿಯ ಬಗ್ಗೆ ಹೇಳುತ್ತಾ “ಅಲ್ಲಿ ನಾವು ಕಾಫಿಗೆ ಸಕ್ಕರೆ ಹಾಕಿಕೊಳ್ಳೋದು ನೋಡಿ ಅಲ್ಲಿಯ ಜನ ಹೌಹಾರಿದರು ಅಪ್ಪಾಜಿ… ಅವರು ಎಳ್ಳಷ್ಟೂ ಸಕ್ಕರೆ ಬಳಸೋದೇ ಇಲ್ಲ. ಪೂರ್ತಿ ಸಪ್ಪಗೇ ಇರುತ್ತದೆ” ಎಂದಳು. ಗ್ರೀಸ್ ದೇಶದ ಜನರೇನಾದರೂ ಸ್ವಲ್ಪ ನಮ್ಮ ಉತ್ತರ ಕರ್ನಾಟಕದ ಹಳ್ಳಿಯ ಕ್ಯಾಂಟೀನ್ ಗಳಿಗೆ ಹೋಗಿ ಚಹಾ ಕುಡಿದರೆ ಎದೆ ಒಡೆದುಕೊಳ್ತಾರೋ ಏನೋ.
ನಾನು ಸಾಕಷ್ಟು ಹಳ್ಳಿಗಳ ಮನೆಯ ಚಹಾ ಕುಡಿದಿದೀನಿ, ಹಾಲು, ಚಹಾಪುಡಿಗಿಂತಲೂ ಸಕ್ಕರೆಯೇ ಮುಂದು. ಅತ್ಯಂತ ಸಿಹಿಯಾದ ಚಹಾ ಕುಡಿಯದಿದ್ದರೆ ನಮ್ಮ ಮಂದಿಗೆ ಅದು ಚಹಾ ಅನಿಸಿಕೊಳ್ಳಲಿಕ್ಕೇ ಯೋಗ್ಯವಲ್ಲದ್ದು.

ನೀವು ನಮ್ಮ ಉತ್ತರ ಕರ್ನಾಟಕದ ಯಾವುದೇ ಗ್ರಾಮೀಣ ಭಾಗದ ತಟ್ಟಿ ಗುಡಿಸಲು ರೀತಿ ಇರುವ ಕ್ಯಾಂಟೀನ್ ಗೆ ಹೋಗಿ ಚಹಾ ಕುಡಿಯಿರಿ, ಸಿಹಿ ಅಂಶದಿಂದ ನಿಮ್ಮ ತುಟಿಗಳು ಒಂದಕ್ಕೊಂದು ಅಂಟಿಕೊಳ್ಳದಿದ್ದರೆ ಕೇಳಿ. ಅಷ್ಟು ಸಕ್ಕರೆಯನ್ನು ಚಹಾಕ್ಕೆ ಬಳಸುತ್ತಾರೆ.
ನಗರ ಪ್ರದೇಶಗಳಲ್ಲಿ ನಾಲ್ಕು ಹರಳು ಸಕ್ಕರೆಯನ್ನು ಚಹಾಕ್ಕೆ ಹಾಕಿದರೂ ಗಾಬರಿಯಾಗುವ ಜನರಿದ್ದಾರೆ. ಆದರೆ ನಮ್ಮ ಭಾಗಕ್ಕೆ ಬಂದು ನೋಡಿ ಎಷ್ಟು ಸಕ್ಕರೆ ಹಾಕುತ್ತಾರೆಂದರೆ ಚಹಾಪುಡಿ ಹಾಕದೇ ಇದ್ದರೆ ಬಹುಶ: ಅದರಲ್ಲಿಯೇ ಉಂಡೆ ಕಟ್ಟಬಹುದೇನೋ.
ವೈದ್ಯರೋ ಹೆಚ್ಚು ಸಿಹಿ ತಿಂಡಿ, ಸಕ್ಕರೆ ತಿನ್ನಬೇಡಿ ಎನ್ನುತ್ತಾರೆ. ನಮ್ಮ ಭಾಗದ ಹಳ್ಳಿಯ ಜನರಿಗೋ ಸಿಹಿ ಅಂದರೆ ತುಂಬಾ ಪ್ರೀತಿ. ಸಕ್ಕರೆ ಕಾಯಿಲೆಯ ಮುಖಕ್ಕೆ ಹೊಡೆಯುವ ಹಾಗೆ ಸಕ್ಕರೆ, ಸಿಹಿ ತಿಂಡಿಗಳನ್ನು ಬಳಸುತ್ತಾರೆ. ಮದುವೆ ಸಮಾರಂಭಗಳಲ್ಲಿ ಬಳಸುವ ಬೂಂದಿ ಲಾಡು, ಗೋಧಿ ಹುಗ್ಗಿ, ಇತರೆ ಸಿಹಿ ಪದಾರ್ಥಗಳನ್ನು ಉಂಡು ನೋಡಿ, ಸಕ್ಕರೆಯನ್ನು ಎಷ್ಟು ಬಳಸುತ್ತಾರೆ, ಹೇಗೆ ಊಟ ಮಾಡುತ್ತಾರೆ ಎಂಬುದು ನಿಮಗೇ ಗೊತ್ತಾಗುತ್ತೆ. ಬೇಸಗೆಯಲ್ಲಿ ಅದೆಂಥ ರಣಬಿಸಿಲು ಇದ್ದರೂ ಸುಡುಸುಡುವ ಚಹಾ ಬೇಕು ಅದೂ ಸಕ್ಕರೆಯ ಅಂಶ ಜಾಸ್ತಿ ಇರಬೇಕು.
ಹಳ್ಳಿಯ ಚಹಾ ಹೋಟೆಲ್ ಗಳಲ್ಲಿ ನೋಡಬೇಕು ನೀವು. ಚಹಾ ಅಂಗಡಿಯವನು ಎಷ್ಟೇ ಸಿಹಿಯಾದ ಚಹಾ ಮಾಡಿದ್ದರೂ “ಏನ್ ಚಹಾ ಮಾಡೀಲೇ, ಸಕ್ಕರೀನ ಆಗಿಲ್ಲ, ಒಂದಷ್ಟ್ ಸಕ್ಕರಿ ಹಾಕು” ಎಂದು ಮೇಲೆ ಸಕ್ಕರೆ ಹಾಕಿಸಿಕೊಂಡು ಕುಡಿಯುವವರ ದೃಶ್ಯ ಸಾಮಾನ್ಯ.

ನನ್ನ ಮಗಳು ಚಿಕ್ಕವಳಿದ್ದಾಗ ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. “ಅಪ್ಪಾಜಿಯ ಮೇಲೆ ಪ್ರೀತಿ” ಅಂತ ಅವಳ ಪ್ರತಿ ಅಡುಗೆಯ ರುಚಿಗೂ ನಾನು ಬಲಿಪಶುವಾಗಿದ್ದೆ. “ಅಪ್ಪಾಜಿ ಚಾ ಮಾಡ್ತೀನಿ” ಎಂದಳು. ಸರಿ ಎಂದೆ. ಸ್ವಲ್ಪ ಹೊತ್ತಿಗೆ ಚಹಾ ಮಾಡಿಕೊಂಡು ಬಂದಳು. ಮೊದಲಿಗೆ ನನಗೆ ಕೊಟ್ಟು ಹೇಗಾಗಿದೆ ? ಎಂದು ಎದುರಿಗೆ ಕುತೂಹಲದಿಂದ ನಿಂತಳು. ನಾನು ಒಂದು ಗುಟುಕು ಕುಡಿದು ತೆಪ್ಪಗೆ ಮುಖ ಮಾಡಿಕೊಂಡು ಸುಮ್ಮನೆ ಕುಳಿತೆ. “ಏನಾಯ್ತು ? ಅಪ್ಪಾಜಿ” ಎಂದಳು. ನಾನು ತಲೆ ಅಡ್ಡ ಅಲ್ಲಾಡಿಸಿದೆ. “ಹೇಳ್ರಿ ಹೇಳ್ರಿ ಚಾ ಚೊಲೋ ಆಗಿಲ್ಲಾ ?” ಎಂದು ಮತ್ತೆ ಮತ್ತೆ ಕೇಳಿದಳು. ” ತಡೀಯಮಾ, ತುಟಿ ಅಂಟ್ಕೋಂಡಾವ ” ಎಂದೆ. ಮಗಳು “ಅಯ್ಯೋ ಬಹುಶ: ಮರೆತು ಎರಡ್ ಸಲ ಸಕ್ಕರಿ ಹಾಕೀನಿ” ಎಂದಳು. “ಮಗಳು ಮಗಳು ಅಂತ ತಲೀ ಮ್ಯಾಲೆ ಕೂಡಿಸಿಕೊಂಡೀರಲ ನಿಮಗ ಹಂಗ ಆಗಬೇಕು” ಎಂದು ಮನೆಯಾಕೆ ಕುಟುಕಿದಳು.
ಮಗಳೇನೋ ಮರೆತು ಸಕ್ಕರಿ ಎರಡು ಸಲ ಹಾಕಿದ್ದಳು, ಆದರೆ ನಮ್ಮ ಹಳ್ಳಿಯ ಚಹಾ ಹೋಟೆಲ್ ಗಳಲ್ಲಿ ಮರೀಲಾರ್ದೆ ಎರಡೆರಡು ಸಲ ಸಕ್ಕರಿ ಹಾಕುವರು.
ನನ್ನ ಅಮ್ಮನಿಗೂ ಸಿಹಿ ಅಂದರೆ ತುಂಬಾ ಪ್ರೀತಿ. ಪ್ರತಿ ಅಡುಗೆಯಲ್ಲೂ ಸ್ವಲ್ಪ ಸಿಹಿ ಮುಂದು. ಸಾರು ಸಹ ಕೆಲವೊಮ್ಮೆ ಎಷ್ಟು ಸಿಹಿಯಾಗಿರುತ್ತಿತ್ತೆಂದರೆ, ನಾನು ಊಟ ಮಾಡುವಾಗ “ಅಮ್ಮಾ, ಅನ್ನದ ಪಾಯಸ ಛೋಲೋ ಆಗೇತಿ” ಎನ್ನುತ್ತಿದ್ದೆ. “ಏ ಎಷ್ಟ್ ಫಸ್ಟ್ ಕ್ಲಾಸ್ ಆಗ್ಯದ, ಸುಳ್ಳ ಹೇಳ್ತೀಯಲ” ಎಂದು ಬೈಯುತ್ತಿದ್ದಳು. ನಾನು ನಗುತ್ತಿದ್ದೆ.
ಅಮ್ಮನಿಗೂ ಚಹಾ ಕುಡಿಯುವ ರೂಢಿ ಇತ್ತು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ತುಂಬಾ ಖುಷಿ. ಅವರ ಹೆಸರಿನಲ್ಲಿ ತಾನೂ ಚಹಾ ಕುಡೀಬಹುದು ಅಂತ. ಅಮ್ಮನ ಚಹಾ ಸಹ ತುಂಬಾ ಸಿಹಿಯಾಗಿರುತ್ತಿತ್ತು. ಹಾಲಿನ ಅಂಶ ಕಡಿಮೆ ಇರುತ್ತಿತ್ತು. ನಾನು “ಅಮ್ಮಾ ಚಾ ಭಾಳ ಸೀ ಆಗೇತಿ” ಎಂದರೆ. ತಾನು ಕುಡಿದು ನೋಡಿ “ಇಲ್ಲಲ ಕರೆಕ್ಟ್ ಆಗೇತಿ” ಎನ್ನುತ್ತಿದ್ದಳು.
83 ವರ್ಷಗಳವರೆಗೆ ಬದುಕಿದ್ದ ಅಮ್ಮನನ್ನು ಕೊನೆಯ ದಿನಗಳಲ್ಲಿ ಎಲ್ಲ ಬಗೆಯ ಚೆಕಪ್ ಮಾಡಿದ ಡಾಕ್ಟರೇ ಗಾಬರಿಯಾಗಿದ್ದರು. “ಏನ್ರೀ ಇವರಿಗೆ ಬಿಪಿ ಇಲ್ಲ, ಶುಗರ್ ಇಲ್ಲ, ಹೆಮೊಗ್ಲೋಬಿನ್ ಪ್ರಮಾಣ ಅತ್ಯಂತ ನಿಖರವಾಗಿದೆ” ಎಂದು ಹೇಳಿದ್ದು ಇಂದಿಗೂ ನೆನಪಿದೆ. ರಿಪೋರ್ಟ್ “ನಾರ್ಮಲ್” ಎಂದೇ ಇತ್ತು.
ಏನೇ ಅನ್ನಿ ನಮ್ಮ ಉತ್ತರ ಕರ್ನಾಟಕದ ಹಳ್ಳಿ ಜನ ಸಕ್ಕರೆ ಜಾಸ್ತಿ ಇರುವ ಚಹಾ ಕುಡಿಯುವುದು ನೋಡಿದರೆ (ದಿನಕ್ಕೆ ಎಷ್ಟು ಸಲವೋ ಲೆಕ್ಕ ಇರುವುದಿಲ್ಲ) ಸಕ್ಕರೆ ಕಾಯಿಲೆಯೇ ಹೆದರಿ ಓಡಿ ಹೋಗಬೇಕು ಆ ರೀತಿ ಇರುತ್ತದೆ.

-ಸಿದ್ಧರಾಮ ಕೂಡ್ಲಿಗಿ
(ಚಹ ಕುಡಿಯುವವರ ಚಿತ್ರ : ಅಂತರ್ಜಾಲದ್ದು)

The post ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ…… ಲಘು ಬರಹ: ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>
ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ https://www.karnatakakahale.com/news/19983 Fri, 04 Jul 2025 08:29:49 +0000 https://www.karnatakakahale.com/?p=19983 ಕಾಲೇಜಿನಿಂದ ಬಂದೊಡನೆ ’ನೀರಲಹಣ್ಣು ತೊಗೊಂಡಿದೀನಿ ತಿಂತೀರಾ ?’ ಎಂದು ಮನೆಯಾಕೆ ಕೇಳಿದೊಡನೆ ಬಾಯಲ್ಲಿ ನೀರು ಬಂತು. ನನಗೆ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಇದೂ ಒಂದು. ನೀರಲ ಹಣ್ಣುಗಳನ್ನು ಒಂದು ಡಬ್ಬಿಯಲ್ಲಿ ಹಾಕಿ ಅವುಗಳೊಂದಿಗೆ ಒಂದಷ್ಟು ಹರಳು ಉಪ್ಪನ್ನೂ ಹಾಕಿ ಕುಲುಕಿಬಿಟ್ಟರೆ ತಿನ್ನಲು ರುಚಿಯಾದ…

The post ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>
ಕಾಲೇಜಿನಿಂದ ಬಂದೊಡನೆ ’ನೀರಲಹಣ್ಣು ತೊಗೊಂಡಿದೀನಿ ತಿಂತೀರಾ ?’ ಎಂದು ಮನೆಯಾಕೆ ಕೇಳಿದೊಡನೆ ಬಾಯಲ್ಲಿ ನೀರು ಬಂತು. ನನಗೆ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಇದೂ ಒಂದು. ನೀರಲ ಹಣ್ಣುಗಳನ್ನು ಒಂದು ಡಬ್ಬಿಯಲ್ಲಿ ಹಾಕಿ ಅವುಗಳೊಂದಿಗೆ ಒಂದಷ್ಟು ಹರಳು ಉಪ್ಪನ್ನೂ ಹಾಕಿ ಕುಲುಕಿಬಿಟ್ಟರೆ ತಿನ್ನಲು ರುಚಿಯಾದ ನೀರಲಹಣ್ಣು ಸಿದ್ಧ. ಉಪ್ಪು ಸವರಿದ ನೀರಲಹಣ್ಣನ್ನು ಬಾಯಲ್ಲಿರಿಸಿಕೊಂಡು ಮೆಲ್ಲಗೆ ಕಚ್ಚಿದರೆ ಬಾಯತುಂಬೆಲ್ಲ ನೀರಲಹಣ್ಣಿನ ಸ್ವಲ್ಪ ಒಗರು, ಸಿಹಿ, ಉಪ್ಪು ಸೇರಿ ಆಹಾ ! ಎಂಥ ಮಧುರ ಅನುಭವ. ಹಾಗೆಯೇ ಹಲ್ಲಿನಿಂದ ಗೀರಿ ಗೀರಿ ಬೀಜವನ್ನು ಸ್ವಚ್ಛಗೊಳಿಸುವವರೆಗೂ ನಾಲಗೆಗೆ ಕೆಲಸ. ನೀರಲಹಣ್ಣನ್ನು ತಿಂದವರಿಗೇ ಗೊತ್ತು ಅದರ ಸವಿ.

ಸ್ವಲ್ಪ ಒಗರು, ಸಿಹಿ ತುಂಬಿದ ಈ ಹಣ್ಣು ಹೆಸರಿಗೆ ತಕ್ಕಂತೆ ನೇರಳೆ ಬಣ್ಣ. ಬಣ್ಣದ ಗಾಢತೆ ನೋಡಿದರೂ ಸಾಕು ಯಾರಿಗಾದರೂ ಬಾಯಲ್ಲಿ ನೀರೂರದೇ ಇರದು. ಗಾಢ ನೀಲಿ ಹಣ್ಣನ್ನು ತಿಂದೊಡನೆ ನಾಲಗೆಯ ಮೇಲೆ ನೀಲಿ ಬಣ್ಣವೇ ಬರುತ್ತದೆ. ಅಷ್ಟು ಬಣ್ಣ ಇದರದ್ದು. ಆದರೆ ನೈಸರ್ಗಿಕವಾಗಿಯೂ, ಯಾವುದೇ ರಾಸಾಯನಿಕ ಗೊಬ್ಬರ, ಔಷಧಿ ಸಿಂಪರಣೆ ಇಲ್ಲದಿರುವುದರಿಂದಲು ಈ ಹಣ್ಣು ಆರೋಗ್ಯಕ್ಕೆ ತುಂಬಾ ಹಿತಕರ.

ಪ್ರತಿವರ್ಷ ಹಣ್ಣುಗಳ ಸೀಸನ್ ಇದು. ಆಯಾ ಸೀಸನ್ ಗೆ ತಕ್ಕಂತೆ ನಾವೂ ಸಹ ಹಣ್ಣುಗಳನ್ನು ಸಮೃದ್ಧವಾಗಿಯೇ ತಿನ್ನುತ್ತೇವೆ. ಈಗ ಪ್ರತಿದಿನವೂ ಮನೆಯ ಬಳಿ ನೀರಲ ಹಣ್ಣು ಬರುತ್ತವೆ. ಧಂಡಿಯಾಗಿ ಆಯಾ ಸೀಸನ್ ಗೆ ತಕ್ಕಂತೆ ಹಣ್ಣು ತಿಂದುಬಿಡುತ್ತೇವೆ.

ನಾವು ಚಿಕ್ಕವರಿದ್ದಾಗ ಶಾಲೆಯ ಬಳಿ ಪುಟ್ಟಿಯಲ್ಲಿ ಕಡುನೀಲಿ ಬಣ್ಣದ ಈ ನೀರಲಹಣ್ಣನ್ನು ಮಾರಲು ಹೆಣ್ಣುಮಕ್ಕಳು ಬರುತ್ತಿದ್ದರು. ಐದು ಪೈಸೆಯೋ ಹತ್ತು ಪೈಸೆಯೋ ಕೊಟ್ಟರೆ, ಒಂದು ಕೊಳವೆಯೊಳಗೆ ನೀರಲಹಣ್ಣುಗಳನ್ನೂ, ಉಪ್ಪನ್ನು ಹಾಕಿ ಕುಲುಕಿ ಒಂದು ಕಾಗದದಲ್ಲಿ ಹಾಕಿಕೊಡುತ್ತಿದ್ದರು. ಅದೆಂಥ ರುಚಿ, ಸವಿ.

ನೇರಳೇ ಹಣ್ಣಿನಲ್ಲಿ ಔಷಧೀಯ ಗುಣವಿದೆ, ಸಕ್ಕರೆ ಕಾಯಿಲೆಗೆ ಒಳ್ಳೆಯದು ಎಂದು ವೈದ್ಯರೂ ಹೇಳಿರುವುದರಿಂದಲೇ ಈಗ ನೇರಳೆ ಹಣ್ಣಿಗೆ ಇನ್ನಿಲ್ಲದ ಬೇಡಿಕೆ. ಇಲ್ಲದಿದ್ದಲ್ಲಿ ನೇರಳೆಹಣ್ಣಿಗೆ ಅಷ್ಟೊಂದು ಬೇಡಿಕೆಯಿರಲಿಲ್ಲ. ಕೇವಲ 20ರಿಂದ 30 ರೂ.ಗಳಿಗೆ ಕೆ.ಜಿಯಂತೆ ಕೊಡುತ್ತಿದ್ದರು. ಈಗ 200 ರೂ.ಗಳಿಗೂ ಮಿಕ್ಕು ಕೆ.ಜಿಯಂತೆ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಕಾರಣ ವೈದ್ಯರು. ಇದೇ ರೀತಿಯಲ್ಲಿಯೇ ಉಳಿದ ಕಾಡುಹಣ್ಣುಗಳಿಗೂ ವೈದ್ಯರು ಹೇಳಿಬಿಟ್ಟರೆ ಅವುಗಳಿಗೂ ಬೇಡಿಕೆ ಹೆಚ್ಚಿದರೆ ಅಶ್ಚರ್ಯವೇನಿಲ್ಲ.

ಅಧರಕ್ಕೂ ಉದರಕ್ಕೂ ಸಿಹಿಯಾಗಿರುವ ನೇರಳೆಹಣ್ಣು ಜೂನ್ ತಿಂಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಈಗ ನಮ್ಮ ಭಾಗದಲ್ಲಿ ಸಾಕಷ್ಟು ಹಣ್ಣು ದೊರೆಯುತ್ತಿದೆ.

ನಮ್ಮ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ, ಸೂಲದಹಳ್ಳಿಗಳಲ್ಲಿ ಹೇರಳವಾಗಿ ನೇರಳೆಹಣ್ಣುಗಳು ದೊರೆಯುತ್ತವೆ. ಇದರ ಹಿಂದೆ ಲಕ್ಷಾಂತರ ರೂ.ಗಳ ವಹಿವಾಟೂ ಇದೆ.

ಸುಮಾರು 30 ಮೀಟರ್‌ಗಳಷ್ಟು ಎತ್ತರ ಬೆಳೆಯುವ ನೇರಳೆಹಣ್ಣಿನ ಮರ ಸಿಜಿಗಿಯಮ್ ಕುಮಿನಿ ಎಂಬ ಸಸ್ಯವರ್ಗಕ್ಕೆ ಸೇರಿದುದು. ಈ ಮರ 100 ವರ್ಷಗಳವರೆಗೆ ಬಾಳುತ್ತದೆ. ಮೊದಲೆಲ್ಲ ರೈತರು ತಮ್ಮ ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತ್ದಿದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿದೆ. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ, ಎಪ್ರಿಲ್‌ನಲ್ಲಿ ನೇರಳೆಮರ ಹೂ ಬಿಡಲಾರಂಭಿಸುತ್ತದೆ. ನಂತರ ಹಸಿರು ಬಣ್ಣದ ಪುಟ್ಟಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತಿಳಿಗುಲಾಬಿ ಬಣ್ಣಕ್ಕೆ ತಿರುಗುವ ಕಾಯಿಗಳು ಬೆಳೆದು ಹಣ್ಣಾಗತೊಡಗಿದಂತೆ ಗಾಢ ನೀಲ ಬಣ್ಣವನ್ನು ಹಾಗೂ ತೀವ್ರ ಹೊಳಪನ್ನು ಹೊಂದುತ್ತವೆ. ಮರದಲ್ಲಿಯೇ ಹಣ್ಣಾಗುವ ನೇರಳೆಹಣ್ಣುಗಳನ್ನು ಕೂಲಿಯಾಳುಗಳಿಂದ ಬಿಡಿಸಲಾಗುತ್ತದೆ.

ನಮ್ಮ ತಾಲೂಕಿನ ಕಕ್ಕುಪ್ಪಿಯೊಂದರ‍ಲ್ಲೇ ಸುಮಾರು 50 ಮರಗಳಿವೆ. ಜೂನ್ ತಿಂಗಳಾದ್ಯಂತ ಹಣ್ಣು ಕೊಡುವ ಒಂದು ಮರ ಒಟ್ಟು 2 ಕ್ವಿಂಟಾಲ್‌ನಷ್ಟು ಹಣ್ಣುಗಳನ್ನು ಕೊಡುತ್ತದೆ. ಪ್ರತಿದಿನವೂ 120-140 ಕೆ.ಜಿಯಷ್ಟು ಹಣ್ಣನ್ನು ಒಂದು ಮರ ಕೊಡುತ್ತದೆ. ಇತ್ತೀಚೆಗೆ ಮಳೆ ಕಡಿಮೆಯಾಗುತ್ತಿರುವುದರಿಂದ, ರೈತರು ಪರ್ಯಾಯ ಬೆಳೆಯಾಗಿ ನೇರಳೆಹಣ್ಣನ್ನು ಬೆಳೆಯಬಹುದಾಗಿದೆ.

ನೇರಳೆಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮವಾದುದಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆಹಣ್ಣುಗಳನ್ನು ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದೆಂದು ವೈದ್ಯವಿಜ್ಞಾನ ತಿಳಿಸುತ್ತದೆ. ಸವಿ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ.

-ಸಿದ್ಧರಾಮ ಕೂಡ್ಲಿಗಿ,  ವಿಜಯನಗರ ಜಿಲ್ಲೆ.

The post ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>
ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ‌ ಹಿರೇಮಠ https://www.karnatakakahale.com/news/19556 Thu, 29 May 2025 04:49:09 +0000 https://www.karnatakakahale.com/?p=19556 “ಓದು ಇರದೆ” ಕನ್ನಡದ ಬಗ್ಗೆ ವಾದ ಮಾಡಲಾಗದು ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆಯಾಗಿದೆ. ತಮಿಳರು ಭಾಷಾ ವಿಷಯದಲ್ಲಿ ಅತ್ಯಂತ ದುರಭಿಮಾನಿಗಳು. ಸಾಹಿತಿ ಬಿ.ಜಿ.ಎಲ್.ಸ್ವಾಮಿಯವರೇ ತಮ್ಮ ಅನುಭವವನ್ನು ಕೃತಿಯೊಂದರಲ್ಲಿ ದಾಖಲಿಸುತ್ತಾ “ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಎಷ್ಟು…

The post ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ‌ ಹಿರೇಮಠ appeared first on Karnataka Kahale.

]]>
“ಓದು ಇರದೆ” ಕನ್ನಡದ ಬಗ್ಗೆ ವಾದ ಮಾಡಲಾಗದು

ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆಯಾಗಿದೆ. ತಮಿಳರು ಭಾಷಾ ವಿಷಯದಲ್ಲಿ ಅತ್ಯಂತ ದುರಭಿಮಾನಿಗಳು.

ಸಾಹಿತಿ ಬಿ.ಜಿ.ಎಲ್.ಸ್ವಾಮಿಯವರೇ ತಮ್ಮ ಅನುಭವವನ್ನು ಕೃತಿಯೊಂದರಲ್ಲಿ ದಾಖಲಿಸುತ್ತಾ “ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆಯೆಂದರೆ, ತಮಿಳಿನ ಪ್ರಾಚೀನತೆಯ ಬಗ್ಗೆ ಹೀಗೆ ಹೇಳುತ್ತಾರೆ, ’ಶಿವ ಕೈಲಾಸದಲ್ಲಿ ಡಮರುಗ ಬಾರಿಸಿದಾಗ ಒಂದು ಕಡೆಯಿಂದ ಸಂಸ್ಕೃತವೂ ಮತ್ತೊಂದು ಕಡೆಯಿಂದ ತಮಿಳು ಹುಟ್ಟಿತು’ ಎಂದು. ಇದು ಜನಸಾಮಾನ್ಯರಲ್ಲ ಅಲ್ಲಿಯ ಪ್ರಕಾಂಡ ಪಂಡಿತರೂ ಈ ರೀತಿಯೇ ವಾದ ಮಾಡುತ್ತಾರೆಂದರೆ ಅವರಲ್ಲಿ ಭಾಷೆಯ ಬಗ್ಗೆ ಎಷ್ಟು ದುರಭಿಮಾನವಿರಬಹುದು. ಇದು ಹಿಂದಿನಿಂದಲೂ ನಡೆದುಬಂದಿದೆ.
ಇನ್ನು ನಮ್ಮ ಕನ್ನಡಿಗರು ಔದಾರ್ಯಕ್ಕೆ ಹೆಸರುವಾಸಿ. ಬೇರೆ ರಾಜ್ಯಕ್ಕೆ ಹೋದಾಗ ಇರಲಿ, ನಮ್ಮ ರಾಜ್ಯದಲ್ಲಿಯೇ ಇರುವ, ಬರುವ ಅನ್ಯ ರಾಜ್ಯದವರ ಜೊತೆ ಅವರ ಭಾಷೆಯಲ್ಲಿಯೇ ಮಾತನಾಡುವಷ್ಟು ಉದಾರವಾದಿಗಳು. “ಕನ್ನಡ ತಮಿಳಿನಿಂದ ಜನಿಸಿದ್ದು” ಅನ್ನೋದಿರಲಿ “ಕನ್ನಡ ಒಂದು ಭಾಷೆಯೇ ಅಲ್ಲ ಅದು ಈಗೀಗ ಹುಟ್ಟಿ ಬೆಳೀತಾ ಇರೋದು” ಅಂದರೂ ಸಹ ನಮ್ಮವರು ತಲೆಯಾಡಿಸಿ ನಕ್ಕು ಮೌನವಾಗುವಷ್ಟೂ ಉದಾರವಾದಿಗಳು (ನಿರಭಿಮಾನಿಗಳು ಅಂದರೂ ತಪ್ಪಿಲ್ಲ).

ಇನ್ನೂ ಕೆಲವರು ಎಷ್ಟು “ಉದಾರವಾದಿಗಳು” ಎಂದರೆ. “ಕಮಲ್ ಹಾಸನ್ ಮಾತನಾಡಿದ್ದರಲ್ಲಿ ತಪ್ಪೇನಿದೆ. ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುತ್ತೆ, ಹಾಗೆ ಹೇಳಿರಬಹುದು, ಇದನ್ನೇ ದೊಡ್ದ ವಿಷಯ ಅಂತ ಯಾಕೆ ಬಡಿದಾಡೋದು?” ಎಂಬಷ್ಟು. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಖಂಡಿತ ಇದ್ದೇ ಇರುತ್ತೆ. ಆದರೆ ಭಾಷೆಯ ಪ್ರಾಚೀನತೆಯ ಪ್ರಶ್ನೆ ಬಂದಾಗ ಹೇಳಿದ್ದಕ್ಕೆಲ್ಲ ತಲೆಯಾಡಿಸುವುದು ತಪ್ಪಾಗುತ್ತದೆ. ಹಾಗಿದ್ದರೆ ಕನ್ನಡ ಒಂದು ಭಾಷೆ ಅಂತ ಯಾಕೆ ಒಪ್ಪಿಕೊಳ್ತೀರಿ ? ಅದಕ್ಕೆ ಪ್ರಾಚೀನತೆ ಇದೆ ಅಂತ ಯಾಕೆ ಹೇಳ್ತೀರಿ ? ಕನ್ನಡ ಅನ್ನೋದೇ ಇಲ್ಲ ಯಾವು ಯಾವುದೋ ಭಾಷೆಗಳಿಂದ ಹುಟ್ಟಿದ್ದು ಅಂತ ಒಪ್ಪಿಕೊಂಡು “ಇನ್ನೂ ಉದಾರವಾದಿಗಳಾಗಿ”. ನಮ್ಮವರೇ ಇಂಥ ಹೇಳಿಕೆಗಳನ್ನು ಕೊಡ್ತಾ ಇರೋದು ನಿಜಕ್ಕೂ ದೊಡ್ಡ ದುರಂತ, ಇಂಥ ಕನ್ನಡಿಗರನ್ನ ಪಡೆದ ಕನ್ನಡ ಭಾಷೆಯ ಕರ್ಮ .

ಇದೆಲ್ಲ ಆಗಲು ಮೂಲ ಕಾರಣ “ಕನ್ನಡದ ಪ್ರಾಚೀನತೆ, ಇತಿಹಾಸದ ಬಗ್ಗೆ ನಿರ್ಲಕ್ಷ್ಯ ಧೋರಣೆ”. ಕನ್ನಡದ ಬಗ್ಗೆ ಎದೆ ತಟ್ಟಿ ಮಾತನಾಡಬೇಕಾದರೆ ಅದರ ಇತಿಹಾಸವನ್ನೂ ಅರಿತಿರಬೇಕಾಗುತ್ತದೆ. ಇಲ್ಲದಿದ್ದರೆ ತಲೆ ಅಲ್ಲಾಡಿಸಿ ಎಲ್ಲದಕ್ಕೂ ಹೌದು ಎಂದು ಸಮ್ಮತಿಸಬೇಕಾದ ದುರವಸ್ಥೆ ಒದಗುತ್ತದೆ.

ಕನ್ನಡ ಭಾಷಾಶಾಸ್ತ್ರದ ಅಧ್ಯಯನದ ಪ್ರಕಾರ, ಕನ್ನಡಕ್ಕೆ ಮೂಲವಾದುದು ” ಮೂಲ ದ್ರಾವಿಡ ಭಾಷೆ” ಅದರಿಂದ ಉದ್ಭವಿಸಿದ್ದು “ದ್ರಾವಿಡ ಭಾಷೆ” ಇದರಿಂದ ಜನಿಸಿದ್ದು, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳು. ಅಂದರೆ ದಕ್ಷಿಣ ಭಾರತದ ಭಾಷೆಗಳೆಲ್ಲವೂ ಸೋದರ ಭಾಷೆಗಳೇ ಹೊರತು, ಒಂದರಿಂದ ಮತ್ತೊಂದು ಹುಟ್ಟಿಲ್ಲ. ಇದನ್ನು ಭಾಷಾ ಶಾಸ್ತ್ರಜ್ಞರು ಅಧ್ಯಯನ ಮಾಡಿ ತಿಳಿಸಿರುವುದೇ ಹೊರತು ಸುಮ್ಮನೆ ಹೇಳಿದ್ದಲ್ಲ.

ಇದರ ಬಗ್ಗೆ ಕೂಲಂಕಷವಾಗಿ ತಿಳಿಯಬೇಕಾದರೆ ಡಾ.ಸಂಗಮೇಶ ಸವದತ್ತಿಮಠ, ಡಾ.ವಿಲ್ಯಂ ಮಾಡ್ತಾ, ಡಾ.ರಂ.ಶ್ರೀ.ಮುಗಳಿ ಮುಂತಾದವರ ಕೃತಿಗಳನ್ನು ಓದಬಹುದು.

“ಓದು ಇರದೆ” ನಮ್ಮ ಭಾಷೆಯ ಬಗ್ಗೆ ದೃಢತೆಯಿಂದ ಮಾತನಾಡಲಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲ ಕನ್ನಡಿಗರೂ ಅರಿತಿರಬೇಕಾಗುತ್ತದೆ. ಬರೀ ಕೂಗಾಟ, ಹಾರಾಟದಿಂದ ನಮ್ಮ ಭಾಷೆಯ ಪ್ರಾಚೀನತೆಯನ್ನು ಅನ್ಯಭಾಷಿಗರಿಗೆ ಮುಖಕ್ಕೆ ಹೊಡೆಯುವಂತೆ ಹೇಳಲಾಗುವುದಿಲ್ಲ.

ನಟ ಕಮಲ್ ಹಾಸನ್ ರ ಹೇಳಿಕೆ ತಪ್ಪು ಎಂದು ಹೇಳುವಂತಹ, ಅದನ್ನು ಸಾಬೀತು ಮಾಡುವ ಅಧಿಕೃತ ಹೇಳಿಕೆಯನ್ನು ನಮ್ಮ ನಾಡಿನ ಭಾಷಾ ತಜ್ಞರು ಎಲ್ಲೆಡೆಯೂ ಪ್ರಸ್ತುತಪಡಿಸಿದರೆ ಅದು ಸರಿಯಾದ ತಿರುಗೇಟಾಗುತ್ತದೆ.

-ಸಿದ್ಧರಾಮ ಕೂಡ್ಲಿಗಿ

The post ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ‌ ಹಿರೇಮಠ appeared first on Karnataka Kahale.

]]>
ಕೂಡ್ಲಿಗಿ:ಗುಂಡಿನಹೊಳೆ ಕೃಷಿವಿಜ್ಞಾನ ಕಾಲೇಜು ಶೀಘ್ರ ನಿರ್ಧಾರ -ಕೃಷಿ‌ ಸಚಿವ ಎನ್. ಚಲುವರಾಯಸ್ವಾಮಿ https://www.karnatakakahale.com/news/14626 Wed, 29 Nov 2023 14:38:27 +0000 https://www.karnatakakahale.com/?p=14626 ಕೂಡ್ಲಿಗಿ(ವಿಜಯನಗರ ಜಿ.), ನ. 29: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆ ಕೃಷಿ ಬೀಜೊತ್ಪಾದನೆ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕಾಲೇಜು ಆರಂಭಿಸುವ ಕುರಿತು ಸಾಧಕ ಬಾದಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ…

The post ಕೂಡ್ಲಿಗಿ:ಗುಂಡಿನಹೊಳೆ ಕೃಷಿವಿಜ್ಞಾನ ಕಾಲೇಜು ಶೀಘ್ರ ನಿರ್ಧಾರ -ಕೃಷಿ‌ ಸಚಿವ ಎನ್. ಚಲುವರಾಯಸ್ವಾಮಿ appeared first on Karnataka Kahale.

]]>
ಕೂಡ್ಲಿಗಿ(ವಿಜಯನಗರ ಜಿ.), ನ. 29: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆ ಕೃಷಿ ಬೀಜೊತ್ಪಾದನೆ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕಾಲೇಜು ಆರಂಭಿಸುವ ಕುರಿತು ಸಾಧಕ ಬಾದಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಭರವಸೆ ನೀಡಿದರು‌.                                          ಕೂಡ್ಲಿಗಿ ಶಾಸಕ ಡಾ.ಎನ್‌.ಟಿ. ಶ್ರೀನಿವಾಸ್ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರನ್ನು  ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಮನವಿ ನೀಡಿದರು.          ಕೃಷಿ ಬೀಜೋತ್ಪಾದನೆ ಕೇಂದ್ರವೂ ಸುಮಾರು 10 ಎಕರೆ ವಿಸ್ತೀರ್ಣದಲ್ಲಿದ್ದೂ, ಇಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭಿಸಲು ಅನುಕೂಲವಾದ ಮೂಲಸೌಕರ್ಯ ಇರುವುದಾಗಿ ಸಚಿವರಿಗೆ ಮನವರಿಕೆ ಮಾಡಿದರು.          ಈ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದಾಗಿ ಕೃಷಿ ಸಚಿವರು ಭರವಸೆ ನಿಡಿದರು.

The post ಕೂಡ್ಲಿಗಿ:ಗುಂಡಿನಹೊಳೆ ಕೃಷಿವಿಜ್ಞಾನ ಕಾಲೇಜು ಶೀಘ್ರ ನಿರ್ಧಾರ -ಕೃಷಿ‌ ಸಚಿವ ಎನ್. ಚಲುವರಾಯಸ್ವಾಮಿ appeared first on Karnataka Kahale.

]]>
ಕೂಡ್ಲಿಗಿ ತಾಲೂಕು ಕಚೇರಿಗೆ ಕಂದಾಯ ಸಚಿವರ ದಿಢೀರ್ ಭೇಟಿ-ತಹಶೀಲ್ದಾರ್ ತಬ್ಬಿಬ್ಬು! https://www.karnatakakahale.com/news/14504 Tue, 21 Nov 2023 13:42:59 +0000 https://www.karnatakakahale.com/?p=14504 ಕೂಡ್ಲಿಗಿ, ನ.21: ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮಂಗಳವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಆದರೆ, ಸಚಿವರು ಕಚೇರಿಗೆ ಆಗಮಿಸುವ ವಿಚಾರ ತಿಳಿಯದ ಕಿರಿಯ ಅಧಿಕಾರಿಗಳು, ಸಿಬ್ಬಂದಿ…

The post ಕೂಡ್ಲಿಗಿ ತಾಲೂಕು ಕಚೇರಿಗೆ ಕಂದಾಯ ಸಚಿವರ ದಿಢೀರ್ ಭೇಟಿ-ತಹಶೀಲ್ದಾರ್ ತಬ್ಬಿಬ್ಬು! appeared first on Karnataka Kahale.

]]>
ಕೂಡ್ಲಿಗಿ, ನ.21: ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮಂಗಳವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು.


ಆದರೆ, ಸಚಿವರು ಕಚೇರಿಗೆ ಆಗಮಿಸುವ ವಿಚಾರ ತಿಳಿಯದ ಕಿರಿಯ ಅಧಿಕಾರಿಗಳು, ಸಿಬ್ಬಂದಿ ಎಂದಿನಂತೆ 10.45 ಆದರೂ ಕಚೇರಿಗೆ ಹಾಜರಾಗಿರಲಿಲ್ಲ.
ಸ್ವತಃ ತಹಶೀಲ್ದಾರ್ ಸಹ ಕಚೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಎಲ್ಲಾ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.


ಈ ವೇಳೆ ದಡಬಡಿಸಿ ಕಚೇರಿಗೆ ದೌಡಾಯಿಸಿದ ತಹಶೀಲ್ದಾರರನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು. ‌ಒಂದು ಸರ್ಕಾರಿ ಕಚೇರಿಯನ್ನು ನಡೆಸುವುದು ಹೀಗಾ? ಬಡವರ ಕೆಲಸ ಅಂದ್ರೆ ಏಕಿಷ್ಟು ತಾತ್ಸಾರ? ಎಂದು ಕಿಡಿಕಾರಿದರು.
*****

The post ಕೂಡ್ಲಿಗಿ ತಾಲೂಕು ಕಚೇರಿಗೆ ಕಂದಾಯ ಸಚಿವರ ದಿಢೀರ್ ಭೇಟಿ-ತಹಶೀಲ್ದಾರ್ ತಬ್ಬಿಬ್ಬು! appeared first on Karnataka Kahale.

]]>
ಶಿಕ್ಷಕರೆಂದರೆ ಸೂತ್ರದ ಗೊಂಬೆಗಳು……. -ಸಿದ್ಧರಾಮ ಕೂಡ್ಲಿಗಿ https://www.karnatakakahale.com/news/13474 Mon, 04 Sep 2023 18:28:40 +0000 https://www.karnatakakahale.com/?p=13474 ಸೆ.5 ಪ್ರತಿವರ್ಷದಂತೆಯೇ, ಪ್ರತಿ ವರ್ಷಾಚರಣೆಯಂತೆಯೇ ” ಶಿಕ್ಷಕರ ದಿನಾಚರಣೆ “. ಗುರುಬ್ರಹ್ಮ, ಗುರುವಿಷ್ಣು……….. ಎಂದು ಒಂದುದಿನ ಮಾತ್ರ ಹಾಡಿ ಹೊಗಳುವ ದಿನ. ನಗು ಬರುತ್ತಿದೆ ನನಗೆ. ಒಂದು ಅದ್ದೂರಿ ಸಮಾರಂಭ, ಅತಿಥಿ ಅಭ್ಯಾಗತರು, ಒಂದಷ್ಟು ಸನ್ಮಾನಗಳು, ಒಂದೊಳ್ಳೆಯ ಊಟ ಅಲ್ಲಿಗೆ ಶಿಕ್ಷಕರ…

The post ಶಿಕ್ಷಕರೆಂದರೆ ಸೂತ್ರದ ಗೊಂಬೆಗಳು……. -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>

ಸೆ.5 ಪ್ರತಿವರ್ಷದಂತೆಯೇ, ಪ್ರತಿ ವರ್ಷಾಚರಣೆಯಂತೆಯೇ ” ಶಿಕ್ಷಕರ ದಿನಾಚರಣೆ “. ಗುರುಬ್ರಹ್ಮ, ಗುರುವಿಷ್ಣು……….. ಎಂದು ಒಂದುದಿನ ಮಾತ್ರ ಹಾಡಿ ಹೊಗಳುವ ದಿನ. ನಗು ಬರುತ್ತಿದೆ ನನಗೆ.
ಒಂದು ಅದ್ದೂರಿ ಸಮಾರಂಭ, ಅತಿಥಿ ಅಭ್ಯಾಗತರು, ಒಂದಷ್ಟು ಸನ್ಮಾನಗಳು, ಒಂದೊಳ್ಳೆಯ ಊಟ ಅಲ್ಲಿಗೆ ಶಿಕ್ಷಕರ ದಿನಾಚರಣೆ ಮುಗಿಯಿತು ಎಂದು ನಮ್ಮ ಶಿಕ್ಷಕರೆಲ್ಲ ಮತ್ತೆ ಮರಳಿ ಗೂಡಿಗೆ ಸೇರುವ ಒಂದು ದಿನ. ನಮ್ಮ ಶಿಕ್ಷಕರೂ ಅಲ್ಲಿಗೇ ಅಷ್ಟಕ್ಕೇ ತೃಪ್ತ.
ಸೆ.5ರಂದು ಒಂದು ದಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಎಲ್ಲರೂ ಶಿಕ್ಷಕರನ್ನು ಆಕಾಶದೆತ್ತರ ಒಯ್ಯುತ್ತಾರೆ. “ನಿಮ್ಮಿಂದಲೇ ನಾವು” ಎಂದು ಹೊಗಳಿ ಹೊಗಳಿ ಹೊನ್ನಶೂಲಕ್ಕೇ ಏರಿಸಿಬಿಡುತ್ತಾರೆ. ನಮ್ಮ ಶಿಕ್ಷಕರೋ ಅವರಾಡುವ ಮಾತುಗಳೆಲ್ಲ ನಿಜವೆಂದೇ ಭ್ರಮಿಸಿಬಿಡುತ್ತಾರೆ. ಇದೇ ದೊಡ್ಡ ದುರಂತ.
ಶಿಕ್ಷಕರ ದಿನಾಚರಣೆಯ ಮರುದಿನವೇ ಹೊಗಳಿದವರೆಲ್ಲ ಯಾವುದೂ ಏನೂ ಆಗೇ ಇಲ್ಲ ಎನ್ನುವಂತೆಯೇ ಶಿಕ್ಷಕರನ್ನು ತಮ್ಮ ಅಧೀನದಲ್ಲಿರುವ ಸೂತ್ರದ ಗೊಂಬೆಗಳು ಎನ್ನುವಂತೆಯೇ ನಡೆಸಿಕೊಳ್ಳುತ್ತಾರೆ.
ಹಾಗೆ ನೋಡಿದರೆ ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಕರನ್ನು ಸಮಾಜ ಅತ್ಯಂತ ಸೂಕ್ಷ್ಮ ಕಣ್ಣಿನಿಂದ ನೋಡುತ್ತದೆ ಅಲ್ಲದೆ ಶಿಕ್ಷಕನಾದವನು ಹೀಗೇ ಇರಬೇಕೆಂಬ ಒಂದಷ್ಟು ಅಲಿಖಿತ ನಿಯಮಗಳಿವೆ. ಉಳಿದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಅದನ್ನು ಅರಿಯಲಾರದವರು ಏನೇನೋ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತಾರೆ ಆ ಮಾತು ಬೇರೆ.

ನಿಜ ಈಗ ಖಾಯಂಗೊಂಡ ಶಿಕ್ಷಕರಿಗೆ ಉತ್ತಮ ವೇತನ ಸೌಲಭ್ಯವಿದೆ. ಆದರೆ ನಾಳಿನ ನಾಗರಿಕರನ್ನು ಸಿದ್ಧಪಡಿಸುವ ಶಿಕ್ಷಕನಿಗೆ ನಿಜವಾಗಿಯೂ ದೊರೆಯಬೇಕಾದ ಗೌರವ ದೊರೆಯುತ್ತಿದೆಯೇ ? ಇಲ್ಲ. ಯಾವುದೇ ಕಚೇರಿಗೆ ಹೋದರೂ ಗೌರವ ಇರಲಿ ಕೂಡಿರಿ ಎಂಬ ಸೌಜನ್ಯವೂ ಶಿಕ್ಷಕರ ಬಗ್ಗೆ ಕಾಣಿಸುವುದಿಲ್ಲ. ’ನಾನೊಬ್ಬ ಮೇಷ್ಟ್ರು’ ಎಂದು ಹೇಳಿ ನೋಡಿ ಅಧಿಕಾರಿಶಾಹಿಗಳು ವರ್ತಿಸುವ ಬಗೆಯೇ ಬೇರೆ ಆಗಿಬಿಡುತ್ತದೆ.
ಕೆಲವು ವರ್ಷಗಳ ಹಿಂದೆ ಸ್ವತ: ನಾನೇ ಅನುಭವಿಸಿದಂತೆ ಪರೀಕ್ಷಾ ಕಾರ್ಯಕ್ಕೆ ಬೇರೆ ಊರಿಗೆ ಹೋದಾಗ ಅಲ್ಲಿನ ಪ್ರವಾಸಿ ಮಂದಿರದಲ್ಲಿ ಕೊಠಡಿ ಕೇಳಲು ಅಲ್ಲಿಯ ಅಧಿಕಾರಿಗಳ ಬಳಿ ಹೋಗಿದ್ದೆವು. ಅವರೆಂದ ಮಾತು ನಿಜಕ್ಕೂ ಸತ್ಯ. ಅದು ಇಡೀ ವ್ಯವಸ್ಥೆಯೇ ಮಾತನಾಡಿದಂತಿತ್ತು. ’ಸರ್ ನಿಮ್ಮ ಶಿಕ್ಷಕ ವೃತ್ತಿಯ ಬಗ್ಗೆ ನನಗೆ ಅನುಕಂಪ, ಕರುಣೆ ಎಲ್ಲ ಮೂಡುತ್ತದೆ. ನಿಮ್ಮದು ಥ್ಯಾಂಕ್ ಲೆಸ್ ಜಾಬ್, ಅಧಿಕಾರ, ಶಿಫಾರಸ್ಸು, ಗತ್ತುಗೈರತ್ತುಗಳಿಲ್ಲದ ವೃತ್ತಿ. ಹೀಗಾಗಿ ನಿಮ್ಮ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಜವಾಗಿಯೂ ನಿಮ್ಮ ಬಗ್ಗೆ ಅನುಕಂಪ ಮೂಡುತ್ತದೆ, ನಿಮ್ಮ ಸ್ಥಾನದಲ್ಲಿ ಬೇರೆ ಇಲಾಖೆಯ ಯಾರೇ ಬಂದರೂ ಇಲ್ಲಿ ತಕ್ಷಣ ವ್ಯವಸ್ಥೆ ಆಗುತ್ತದೆ. ಆದರೆ ನಿಮಗಿಲ್ಲ ಅದೇ ದೊಡ್ದ ದುರಂತ’ ಎಂದು ಹೇಳಿದರು. ನಿಜ ಅವರಾಡಿದ ಮಾತು ಅಕ್ಷರಶ: ಸತ್ಯ. ಬೇರೆ ಇಲಾಖೆಯ ಯಾರೇ ಹೋದರೂ ಅಲ್ಲಿ ಗೌರವವಿದೆ, ಸೌಲಭ್ಯಗಳಿವೆ. ಆದರೆ ಶಿಕ್ಷಕರಿಗಿಲ್ಲ.
ಹೋಗಲಿ ಅದೊಂದು ಕಡೆ ಇರಲಿ. ಸಮಾಜದ ಎಲ್ಲರಿಗೂ ಸಾಮಾನ್ಯವಾಗಿ ಶಿಕ್ಷಕರ ಬಗ್ಗೆ ಗೊತ್ತಿರುವುದೆಂದರೆ
1. ಶಿಕ್ಷಕರ ಕೆಲಸವೆಂದರೆ ಆರಾಮದಾಯಕ ಕೆಲಸ. ಬಹಳ ಕಷ್ಟಗಳೇನಿಲ್ಲ.
2. ಸಿಕ್ಕಾಪಟ್ಟೇ ಸಂಬಳವಿದೆ. ಹೀಗಾಗಿ ಸಮಾಜದಲ್ಲಿ ಉಳಿದೆಲ್ಲರಿಗಿಂತ ನೆಮ್ಮದಿಯಾಗಿರುವ ವ್ಯಕ್ತಿಯೆಂದರೆ ಶಿಕ್ಷಕನೊಬ್ಬನೇ
3. ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಕರಿಗೆ ಸಿಕ್ಕಾಪಟ್ಟೆ ರಜೆಗಳಿವೆ. ರಜೆಯ ಅವಧಿಯಲ್ಲೂ ಪಾಠ ಮಾಡದೇ ಸಂಬಳ ಪಡೆಯುತ್ತಾರೆ.
4. ಮಕ್ಕಳಿಗೆ ನಾಲ್ಕಕ್ಷರ ಹೇಳಿಕೊಟ್ಟುಬಿಟ್ಟರೆ ಸಾಕು ಶಿಕ್ಷಕರದು ಬೇರೇನೂ ಕೆಲಸವಿಲ್ಲ, ಉಳಿದಂತೆ ಬೇರೆ ಕೆಲಸಗಳನ್ನು ಮಾಡಿಕೊಂಡು ಆರಾಮವಾಗಿರುತ್ತಾರೆ.
5. ಹೆಚ್ಚಿಗೆ ಸಂಬಳವಿದ್ದೂ ಸದಾ ” ಇನ್ನೂ ಸಂಬಳ ಸಂಬಳ ಬೇಕು ” ಎಂದು ಯಾವಾಗಲೂ ಬಡಿದಾಡುತ್ತಿರುತ್ತಾರೆ.
6. ಮಕ್ಕಳಿಗೆ ಸರಿಯಾದ ದಾರಿಗೆ ತರದ ಶಿಕ್ಷಕ ಶಿಕ್ಷಕನೇ ಅಲ್ಲ.
7. ಸರ್ಕಾರದಿಂದ ಬೇಕಾದಷ್ಟು ಸೌಲಭ್ಯಗಳಿವೆ, ಅವುಗಳಲ್ಲೇ ಶಿಕ್ಷಕರು ಸಾಕಷ್ಟು ಹೊಡೆಯುತ್ತಾರೆ.

ಹೀಗೆ ಸಮಾಜದಲ್ಲಿ ಸಾಮಾನ್ಯವಾಗಿ ಜನರು ಶಿಕ್ಷಕರನ್ನು ಕಾಣುವ ರೀತಿಯಿದು. ಆದರೆ ನಿಜವಾಗಿಯೂ ಶಿಕ್ಷಕನ ಬವಣೆಯೇನು ? ಎಂಬುದು ಅದನ್ನು ಅನುಭವಿಸಿದವರಿಗೇ ಗೊತ್ತು.
1.ಕೆಲವು ಕಡ್ಡಾಯದ ಸಂದರ್ಭಗಳಲ್ಲಿ ಉಳಿದ ಇಲಾಖೆಗಳ ಸಾಮಾನ್ಯ ಸಿಬ್ಬಂದಿಯವರೂ ಸಹ ಶಿಕ್ಷಕರನ್ನು ಕಾಣುವ, ಬಳಸಿಕೊಳ್ಳುವ ರೀತಿ ನೋಡಿದರೆ, ಯಾರಿಗೂ ಈ ವೃತ್ತಿ ಬೇಡವೆನಿಸುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಶಿಕ್ಷಕರನ್ನು ಅಷ್ಟೊಂದು ತುಚ್ಛವಾಗಿ ಕಾಣುವಂತಿದ್ದರೆ ಶಿಕ್ಷಕರ ದಿನಾಚರೆಯ ದಿನ ಹೊಗಳುವ ನಾಟಕಗಳೇಕೆ ?
2. ಶಿಕ್ಷಕರಿಗೆ ಈಗ ಮೊದಲಿಗಿಂತಲೂ ಕೆಲಸದ ಒತ್ತಡಗಳು ಹೆಚ್ಚೇ ಆಗಿವೆ. ಕೆಲವರು ಅವುಗಳಿಂದ ತಪ್ಪಿಸಿಕೊಳ್ಳುವ ಜಾಣ್ಮೆಯನ್ನು ಹೊಂದಿದ್ದಾರಾದರೂ ಅವರ ಸಂಖ್ಯೆ ಬೆರಳೆಣಿಕೆಯಷ್ಟು.
3. ಶಿಕ್ಷಕರಿಗೆ ಒಳ್ಳೆಯ ವೇತನ ಇತರೆ ಸೌಲಭ್ಯಗಳಿವೆ ನಿಜ ಆದರೆ, ಅವುಗಳನ್ನು ಪಡೆಯಲು ಶಿಕ್ಷಕರು ಏನೆಲ್ಲ ಪಡಿಪಾಟಲು ಪಡಬೇಕೆಂಬುದು ಶಿಕ್ಷಕರ ಅಂತರಂಗಕ್ಕೆ ಮಾತ್ರ ಗೊತ್ತಿರುವ ವಿಷಯ.
4. ಈಗೀಗ ಇಲಾಖೆಗಳಿಗೆ ಶಿಕ್ಷಕರ ರಜೆಯ ಮೇಲೇ ಕಣ್ಣಿರುವುದರಿಂದ ರಜಾ ರಹಿತ ಕಾರ್ಯಗಳನ್ನೇ ಹೆಚ್ಚೆಚ್ಚು ಹೇರಲಾಗುತ್ತಿದೆ. ಶಿಕ್ಷಕರಿಗೆ ರಜೆ ಏಕೆ ? ಎಂಬುದನ್ನು ಯಾರೂ ಯೋಚಿಸುತ್ತಿಲ್ಲ. ಪಾಠ ಮಾಡುವ ಶಿಕ್ಷಕನ ಮನಸು, ಬುದ್ಧಿ ಶಾಂತವಾಗಿದ್ದರೆ ಮಾತ್ರ ಉತ್ತಮ ಬೋಧನೆ ಮಾಡಬಲ್ಲ ಎಂಬ ಕಾರಣಕ್ಕಾಗಿ ರಜೆಗಳಿರುತ್ತವೆಯೇ ಹೊರತು ಬೇರಾವ ಕಾರಣವೂ ಅಲ್ಲ.
5. ಮಕ್ಕಳಿಗೆ ನಾಲ್ಕಕ್ಷರ ಹೇಳಿಕೊಡುವುದು ಅಷ್ಟು ಸುಲಭದ ಕಾರ್ಯವಲ್ಲ. ಅವರನ್ನು ತಿದ್ದಿ ತೀಡಿ ಒಂದು ಹಂತಕ್ಕೆ ತರಲು ಪ್ರತಿ ಶಿಕ್ಷಕನೂ ಶಕ್ತಿ ಮೀರಿ ಕಾರ್ಯ ನಿರ್ವಹಿಸಿರುತ್ತಾರೆ. ಇದು ಯಾರ ಕಣ್ಣಿಗೂ ಕಾಣುವುದಿಲ್ಲ.
6. ಮಕ್ಕಳನ್ನು ಸರಿಯಾದ ದಾರಿಗೆ ತರುವುದು ಶಿಕ್ಷಕನದಷ್ಟೇ ಅಲ್ಲ ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯೂ ಹೌದು ಎಂಬುದನ್ನು ಪಾಲಕರು ಮರೆತೇಬಿಟ್ಟಿರುತ್ತಾರೆ.
7. ಯಾರೋ ಮಾಡಿದ ತಪ್ಪಿಗೆ ಯಾರ ತಲೆಗೋ ಕಟ್ಟುವ ದಿನಮಾನಗಳಿವೆ. ಹೀಗಾಗಿ ತಪ್ಪು ಮಾಡದ ಶಿಕ್ಷಕರೂ ಆರೋಪಗಳನ್ನು ಎದುರಿಸಬೇಕಾಗುತ್ತದೆ.
8. ಮಕ್ಕಳನ್ನು ಹೊಡೆಯುವಂತಿಲ್ಲ, ಬೈಯುವಂತಿಲ್ಲ, ಅನುತ್ತೀರ್ಣಗೊಳಿಸುವಂತಿಲ್ಲ ಹೀಗೆ ನೂರೆಂಟು ನಿಯಮಾವಳಿಗಳ ಮಧ್ಯೆಯೂ ಶಿಕ್ಷಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುವುದು ನಿಜಕ್ಕೂ ಕಷ್ಟಕರ.
ಶಿಕ್ಷಕ ವೃತ್ತಿ ಸೇವಾ ಮನೋಭಾವನೆಯನ್ನು ಬಯಸುವ ವೃತ್ತಿ. ದುರಂತವೆಂದರೆ ಅತಿಹೆಚ್ಚು ಅಂಕ ಪಡೆದವರೆಲ್ಲ ಡಾಕ್ಟರೋ, ಇಂಜಿನಿಯರ್ ಗಳೋ ಆಗುವಾಗ, ಶಿಕ್ಷಕರೇ ಆಗಬೇಕೆಂದು ಬಯಸಿ ಬರುವವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು.
ಸಮಾಜಕ್ಕೆ ಉತ್ತಮ ಡಾಕ್ಟರ್ ಬೇಕು, ಇಂಜಿನಿಯರ್ ಬೇಕು, ವಕೀಲರು ಬೇಕು, ಅಧಿಕಾರಿಗಳು ಬೇಕು ಎಲ್ಲವೂ ಬೇಕು ಆದರೆ ಶಿಕ್ಷಕರಾಗುವುದು ಬೇಡ. ಯಾಕೆಂದರೆ ಅದು ಎಲ್ಲಕ್ಕಿಂತ ಕನಿಷ್ಟ ಉದ್ಯೋಗ ಹಾಗೂ ಯಾವುದೇ ಲಂಚವಿಲ್ಲದ, ಶಿಫಾರಸುಗಳೇ ಇಲ್ಲದ, ಯಾವ ಇಲಾಖೆಯಲ್ಲೂ ಯಾರೂ ಮಾತು ಕೇಳದ ವೃತ್ತಿಯೆಂದು ಸಮಾಜ ನಿರ್ಧರಿಸಿಬಿಟ್ಟಿದೆ. ಹೀಗಾಗಿಯೇ ಶಿಕ್ಷಕರೆಂದರೆ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸಿದ್ಧಪಡಿಸಿಕೊಡುವ ಒಂದು ಯಂತ್ರವಿದ್ದಂತೆ, ಶಾಲೆ ಕಾಲೇಜುಗಳು ಕಾರ್ಖಾನೆಗಳಿದ್ದಂತೆ ಅಷ್ಟೆ. ಶಿಕ್ಷಕರ ಯಾವ ಭಾವನೆಗಳಿಗೂ ಬೆಲೆಯಿಲ್ಲ.
ಸೇವಾ ಮನೋಭಾವನೆಯಿಂದ, ಉತ್ತಮ ಸಮಾಜವನ್ನು ನಿರ್ಮಿಸಬೇಕೆಂಬ ಮಹದಾಸೆ ಹೊತ್ತು ಬಂದು ಆ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವವರೂ ಇದ್ದಾರೆ. ಇವರೆಲ್ಲ ಎಲೆಯ ಮರೆಯ ಕಾಯಿಯಂತೆ ಯಾವ ಪ್ರಶಸ್ತಿ, ಗೌರವ, ಸನ್ಮಾನಗಳನ್ನೂ ಬಯಸದೇ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಅಂತಹ ಎಲ್ಲ ಮಹನೀಯ ಶಿಕ್ಷಕರಿಗೆ ನನ್ನದೊಂದು ಸಲಾಂ.
ಹಾಗೆ ನೋಡಿದರೆ ಇವತ್ತು ಸಮಾಜದ ವಿವಿಧ ಇಲಾಖೆಗಳಲ್ಲಿ, ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರೆಲ್ಲರೂ ಶಿಕ್ಷಕರ ಕೈಯಲ್ಲಿ ಕಲಿತು ಆ ಹುದ್ದೆಗಳಿಗೆ ಹೋದವರೇ. ಆದರೆ ಅವರು ಶಿಕ್ಶಕರ ಬಗ್ಗೆ ತಳೆದಿರುವ ಧೋರಣೆ, ನಡೆಸಿಕೊಳ್ಳುವ ರೀತಿ ಮಾತ್ರ ನಿಜಕ್ಕೂ ಶೋಚನೀಯ. ಎಲ್ಲಿ ಶಿಕ್ಷಕರ ಬಗ್ಗೆ ಉತ್ತಮ ಧೋರಣೆ, ಗೌರವಗಳಿಲ್ಲವೋ ಅದು ನಿಜಕ್ಕೂ ನೈತಿಕತೆ ಪಾತಾಳ ಕಂಡಿರುವ ಸಮಾಜ ಎಂದೇ ಹೇಳಬಹುದು.
ಅಂತೆಯೇ ಶಿಕ್ಷಕರಾದ ನಾವೆಲ್ಲ ನಿಜವಾಗಿಯೂ ನಮಗೆ ಸಿಗಬೇಕಾದ ಗೌರವ ಸಿಗುತ್ತಿದೆಯೇ ? ಎಂದು ಪ್ರಾಮಾಣಿಕವಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ.

-ಸಿದ್ಧರಾಮ ಕೂಡ್ಲಿಗಿ, ಪ್ರಾಚಾರ್ಯರು, ಪಿಯು ಕಾಲೇಜ್, ಕೂಡ್ಲಿಗಿ
—–

The post ಶಿಕ್ಷಕರೆಂದರೆ ಸೂತ್ರದ ಗೊಂಬೆಗಳು……. -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.

]]>
ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!? https://www.karnatakakahale.com/news/13458 Mon, 04 Sep 2023 03:01:39 +0000 https://www.karnatakakahale.com/?p=13458 ಪ್ರಾಥಮಿಕ ಶಾಲೆ ಶಿಕ್ಷಕಕರು ಪ್ರೌಢ ಶಾಲಾ ಶಿಕ್ಷಕಕರು ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಪದವಿ ಕಾಲೇಜಿನ ಶಿಕ್ಷಕರು ವಿಶ್ವ ವಿದ್ಯಾಲಯದ ಶಿಕ್ಷಕರು ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ.…

The post ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!? appeared first on Karnataka Kahale.

]]>
ಪ್ರಾಥಮಿಕ ಶಾಲೆ ಶಿಕ್ಷಕಕರು
ಪ್ರೌಢ ಶಾಲಾ ಶಿಕ್ಷಕಕರು
ಪದವಿ ಪೂರ್ವ ಕಾಲೇಜಿನ ಶಿಕ್ಷಕರು
ಪದವಿ ಕಾಲೇಜಿನ ಶಿಕ್ಷಕರು
ವಿಶ್ವ ವಿದ್ಯಾಲಯದ ಶಿಕ್ಷಕರು

ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ. ಹೀಗಾಗಿ ಮೇಲಿನ ಹಂತದಲ್ಲಿರುವವರೆಲ್ಲರೂ ಕೆಳಗಿನ ಹಂತದ ಶಿಕ್ಷಕರನ್ನು ಕಂಡರೆ ಮುಖ ಸಿಂಡರಿಸುವುದೇ ಹೆಚ್ಚು.

ವಿಶೇಷವೇನೆಂದರೆ ಇವರೆಲ್ಲ ಆ ಹಂತಗಳಿಗೆ ಹೋಗಲು ತಮ್ಮನ್ನು ಬಾಲ್ಯದಲ್ಲಿಯೇ ಕೈಹಿಡಿದು ತಿದ್ದಿ ತೀಡಿಸಿ ಅಕ್ಷರ ಕಲಿಸಿದವರೇ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರೆಂಬುದನ್ನೇ ಮರೆತುಬಿಟ್ಟಿರುತ್ತಾರೆ. ಗುರಿ ತಲುಪಿದ ಮೇಲೆ ಏಣಿಯನ್ನು ಒದ್ದ ಹಾಗೇ. ಇದೇ ದೊಡ್ದ ದುರಂತ.

-ಸಿದ್ಧರಾಮ ಕೂಡ್ಲಿಗಿ

The post ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!? appeared first on Karnataka Kahale.

]]>
ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ‌ ಕೂಡ್ಲಿಗಿ https://www.karnatakakahale.com/news/10405 Thu, 01 Dec 2022 04:28:03 +0000 https://www.karnatakakahale.com/?p=10405 ಫೇಸ್ ಬುಕ್ ನಲ್ಲಿ ಕೆಲವರನ್ನು ಗಮನಿಸುತ್ತಿದ್ದೇನೆ. ಕೆಲವರು ತೀರಾ ಕಾಯಿಲೆಯಾದವರಂತೆ ವರ್ತಿಸುತ್ತಿದ್ದಾರೆ. ತಾವು ಬರೆದ ಬರಹ ಅಥವಾ ಕವಿತೆ ಅಥವಾ ಫೋಟೊಗಳಿಗೆ ಬಹಳಷ್ಟು ಜನ ಲೈಕ್ ಮಾಡಬೇಕು. ಕಾಮೆಂಟ್ ಮಾಡಬೇಕೆಂಬ ಹುಚ್ಚು ಹಂಬಲ. ಇದು ಬರಬರುತ್ತ ಗೀಳಾಗಿಬಿಡುತ್ತದೆ. ಕೊನೆಗೆ ಎಲ್ಲಿಗೆ ಬಂದು…

The post ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ‌ ಕೂಡ್ಲಿಗಿ appeared first on Karnataka Kahale.

]]>
ಫೇಸ್ ಬುಕ್ ನಲ್ಲಿ ಕೆಲವರನ್ನು ಗಮನಿಸುತ್ತಿದ್ದೇನೆ. ಕೆಲವರು ತೀರಾ ಕಾಯಿಲೆಯಾದವರಂತೆ ವರ್ತಿಸುತ್ತಿದ್ದಾರೆ.
ತಾವು ಬರೆದ ಬರಹ ಅಥವಾ ಕವಿತೆ ಅಥವಾ ಫೋಟೊಗಳಿಗೆ ಬಹಳಷ್ಟು ಜನ ಲೈಕ್ ಮಾಡಬೇಕು. ಕಾಮೆಂಟ್ ಮಾಡಬೇಕೆಂಬ ಹುಚ್ಚು ಹಂಬಲ. ಇದು ಬರಬರುತ್ತ ಗೀಳಾಗಿಬಿಡುತ್ತದೆ. ಕೊನೆಗೆ ಎಲ್ಲಿಗೆ ಬಂದು ಮುಟ್ಟುತ್ತದೆಂದರೆ ಎಷ್ಟು ಲೈಕ್ ಬಂದವು, ಕಾಮೆಂಟ್ ಬಂದವು ಎಂದು ಎಣಿಕೆ ಮಾಡುವಷ್ಟರ ಮಟ್ಟಿಗೆ.
ಕೆಲವರಂತೂ ನೇರವಾಗಿಯೆ ಹೇಳಿಬಿಡುತ್ತಾರೆ ” ಓದಲೇಬೇಕು ಲೈಕ್ ಕೊಡಲೇಬೇಕು, ಕಾಮೆಂಟ್ ಮಾಡಲೇಬೇಕು, ಇಲ್ಲದಿದ್ದರೆ ಓದಲೇಬೇಡಿ ” ಅಂತ. ಯಾಕೀ ಒತ್ತಡ, ಒತ್ತಾಯ. ಬರೆಯುವವನಿಗೆ ಎಷ್ಟು ಸ್ವಾತಂತ್ರ್ಯವಿದೆಯೋ, ಓದುವವನಿಗೂ ಇರುತ್ತದೆಂಬುದನ್ನೂ ಅರ್ಥ ಮಾಡಿಕೊಳ್ಳಬೇಕಲ್ಲವೆ ? ಚೆನ್ನಾಗಿದ್ದರೆ ಖಂಡಿತ ಮೆಚ್ಚಿಕೊಳ್ಳುತ್ತಾರೆ, ಕಾಮೆಂಟ್ ನ್ನೂ ಮಾಡುತ್ತಾರೆ. ಆದರೆ ಒತ್ತಾಯಿಸುವುದು ಬೇಡ.

ಅರಳುವುದು ಹೂವಿನ ಭಾವ. ಅದು ಯಾರನ್ನು ಮೆಚ್ಚಿಸಲಿಕ್ಕಾಗಿ, ಹೊಗಳಲೆಂದಾಗಲೀ ಅರಳುವುದಿಲ್ಲ. ಇಷ್ಟಪಟ್ಟವರು ಖಂಡಿತ ಹೇಳುತ್ತಾರೆ, ಇಷ್ಟಪಡವರು ಹೇಳುವುದಿಲ್ಲ ಅಷ್ಟೇ ತಾನೆ. ಅರಳುವುದು ಮುಖ್ಯ ಅಲ್ಲವೇ ?
ಇಷ್ಟೆಲ್ಲ ಹೇಳಲು ಕಾರಣ ಇದೇ ಒಂದು ಒತ್ತಡವಾಗಿ ತಲೆಕೆಡಿಸಿಕೊಂಡು ಫೇಸ್ ಬುಕ್ ಹಾಳಾಗಲಿ ಎಂದು ಹೋದವರೂ ಇದ್ದಾರೆ, ತಡೆಯಲಾರದೆ ಮತ್ತೆ ಮರಳಿಬಂದವರೂ ಇದ್ದಾರೆ. ಇದೂ ಸಹ ಗೀಳೇ. ನೀರು ಒಂದೇ ಸ್ಥಿತಿಯಲ್ಲಿ ನಿಧಾನವಾಗಿ ಹರಿದರೇ ಚಂದ. ಒಮ್ಮೆಲೇ ಪ್ರವಾಹ ಒಮ್ಮೆಲೇ ಬತ್ತಿಹೋಗುವುದು ಎರಡೂ ಅತಿರೇಕಗಳೇ.

ಸಾರ್ವಜನಿಕವಾಗಿ ನಮ್ಮತನವನ್ನು ಇಲ್ಲಿ ಪ್ರಕಟಿಸುತ್ತೇವೆಂದಾಗ ಎಲ್ಲದಕ್ಕೂ ಸಿದ್ಧರಿರಬೇಕಾಗುತ್ತದೆ. ಹೊಗಳಿದರೂ ಸರಿ, ಹೊಗಳದೇ ಇದ್ದರೂ ಸರಿ. ಅವರವರ ಭಾವ. ಎಲ್ಲರೂ ನನ್ನನ್ನು ಮೆಚ್ಚಲೇಬೇಕು, ಯಾರೂ ಸಹ ನನ್ನನ್ನು ತೆಗಳಬಾರದು, ಕಡ್ಡಾಯವಾಗಿ ನಾನು ಬರೆದದ್ದನ್ನು ಓದಲೇಬೇಕೆಂಬುದು ಓದುಗರ ಮೇಲೆ ಹಾಕುವ ಒತ್ತಡವಾಗುತ್ತದೆ.
ಸಾವಿರ ಲೈಕ್ ಗಳು ಬಂದವೆಲ್ಲವೂ ಶ್ರೇಷ್ಠವಲ್ಲ. ಕಾಮೆಂಟ್ ಹಾಕಿದವರೆಲ್ಲರೂ ಓದಿದ್ದಾರೆ ಎಂತಲೂ ಅರ್ಥವಲ್ಲ. ಕಡಿಮೆ ಲೈಕ್ ಬಂದವೆಲ್ಲವೂ ಕನಿಷ್ಟವೆಂತಲೂ ಅಲ್ಲ. ಕಾಮೆಂಟ್ ಮಾಡಿಲ್ಲ ಎಂದರೆ ಓದೇ ಇಲ್ಲ ಅಂತಲೂ ಅರ್ಥವಲ್ಲ.
ಇಷ್ಟಪಡುವವರು ಇಷ್ಟಪಟ್ಟೇಪಡುತ್ತಾರೆ. ತೀರಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲವೇ ?


-ಸಿದ್ಧರಾಮ ಕೂಡ್ಲಿಗಿ

The post ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ‌ ಕೂಡ್ಲಿಗಿ appeared first on Karnataka Kahale.

]]>