The post ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಭೋದನೆ appeared first on Karnataka Kahale.
]]>
ಬಳ್ಳಾರಿ,ನ.20: ನಗರದ ಹೃದಯಭಾಗದಲ್ಲಿರುವ ಮತ್ತು ಅತಿಹೆಚ್ಚು ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿದ ಕಾಲೇಜು ಎಂಬ ಖ್ಯಾತಿ ಪಡೆದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ (ಎಸ್ ಎಸ್ ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ತರಗತಿ ಆರಂಭಕ್ಕೂ ಮುನ್ನ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರಸ್ತಾವನೆ ಭೋದಿಸಲಾಗುತ್ತಿದೆ.
ಪ್ರತಿದಿನ (ರಜೆದಿನ ಹೊರತುಪಡಿಸಿ) ಬೆಳಿಗ್ಗೆ 9 ರಿಂದ ಮಧ್ಯಾಹ್ನ 01.30 ರ ವರೆಗೆ, ವಿಜ್ಞಾನ ವಿಭಾಗಗಳು ಒಳಗೊಂಡಂತೆ ಸಂಜೆ 4 ಗಂಟೆಯವರೆಗೆ ತರಗತಿ ನಡೆಯಲಿವೆ. ತರಗತಿ ಆರಂಭಕ್ಕೂ ಮುನ್ನ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರಾಂಶುಪಾಲರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಮತ್ತು ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಪ್ಪದೇ ಭಾರತ ಸಂವಿಧಾನದ ಪ್ರಸ್ತಾವನೆವನ್ನು ಪಠಿಸುತ್ತಾರೆ.

‘ಸಂವಿಧಾನ ಪ್ರಸ್ತಾವನೆಯಲ್ಲಿ ನಮೂದಿಸಲಾದ ತತ್ವಗಳನ್ನು ಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಂಡು ಅಂತರ್ಗತಗೊಳಿಸಿದಾಗ ಮಾತ್ರ ಸಂವಿಧಾನದ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌಧರಿ ಹೇಳಿದರು.
—–
The post ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಭೋದನೆ appeared first on Karnataka Kahale.
]]>The post ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌಧರಿ ಚಾಲನೆ appeared first on Karnataka Kahale.
]]>
ಬಳ್ಳಾರಿ, ಅ.18: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್(ಎಸ್.ಎಸ್.ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಶನಿವಾರ ಹಮ್ಮಿಕೊಂಡಿದ್ದ ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರಹ್ಲಾದ್ ಚೌದ್ರಿ ಅವರು ಚಾಲನೆ ನೀಡಿದರು. ನಾಣ್ಯಗಳ ಸಂಗ್ರಾಹಕರೂ ಆದ ಕಾಲೇಜಿನ ಹಳೆಯ ವಿದ್ಯಾರ್ಥಿ, ಇತಿಹಾಸ ಉಪನ್ಯಾಸಕ ಡಾ. ಶಾಂತ ಕುಮಾರ್ ಬಿ ಗೋಟೂರು ಅವರು ನಾಣ್ಯಗಳ ಹಿನ್ನೆಲೆ, ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ ನಾಜಿಯಾ ಖಾಜಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಲಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎಸ್.,
ಸಹಾಯಕ ಪ್ರಾಧ್ಯಾಪಕ ಪ್ರೊ.ಬಸಪ್ಪ, ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ.ಮೊನಿಕಾ ರಂಜನ್, ಪರೀಕ್ಷಾ ನಿಯಂತ್ರಕಿ ಡಾ. ಶೋಭರಾಣಿ, ಉರ್ದು ವಿಭಾಗದ ಮುಖ್ಯಸ್ಥೆ ಶ್ರೀಮತಿ ಇಸ್ಮಾಯಿಲ್ ಮಕಾಂದಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚುಸಾಬ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗಿರಿಸಾಬ್ ದಿನ್ನಿ, ಸಹಾಯಕ ಪ್ರಾಧ್ಯಾಪಕರಾದ ಟಿ. ಡಿ. ಬಸವರಾಜು, ಉಪನ್ಯಾಕರಾದ ಡಾ. ಟಿ ದುರುಗಪ್ಪ, ಡಾ.ಕೆ. ಬಸಪ್ಪ, ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾದ ಎಂ ರಫಿ, ಬಿ. ಹರೀಶ್, ಡಾ.ಆಶಾ ವಿ ಆರ್, ಸರಳ ಆರ್ , ಶ್ಯಾಮ್ ರಾಜನಾಯಕ್ ಟಿ, ಸ್ವರಪ್ಪ, ಕೆ. ಷಮಿಉಲ್ಲಾ , ವಿವಿಧ ವಿಭಾಗಗಳ ಉಪನ್ಯಾಸಕರಾದ ಎಸ್. ಎಂ.ರಮೇಶ್, ಗುರುರಾಜ್, ಸಿ.ಮಂಜುನಾಥ್ ಸೇರಿದಂತೆ ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳು ವಿಶೇಷ ಹಳೆಯ ನಾಣ್ಯ ಮತ್ತು ನೋಟುಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

The post ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌಧರಿ ಚಾಲನೆ appeared first on Karnataka Kahale.
]]>The post ಸರಳಾದೇವಿ ಕಾಲೇಜು ಜ್ಞಾನ ಸಿಂಚನ ಹಳೇ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಕರ ದಿನಾಚರಣೆ: ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ -ನಾರಾ ಭರತ್ ರೆಡ್ಡಿ appeared first on Karnataka Kahale.
]]>
ಬಳ್ಳಾರಿ: ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
“ಜ್ಞಾನ ಸಿಂಚನ” ಹಳೆ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು,
ಇದೇ ಕಾಲೇಜಿನಲ್ಲಿ ಉಪನ್ಯಾಸಕರಾದವರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘ ಬಳ್ಳಾರಿ ನಗರದ ಅಭಿವೃದ್ಧಿಗೆ ಸಹಕಾರ ನೀಡುವುದರ ಜತೆಗೆ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲಿ ಎಂದು ಸಲಹೆ ನೀಡಿದರು.
ಕಾಲೇಜಿನ ಅಭಿವೃ ದ್ಧಿಗೆ ಒಟ್ಟು 7 ಕೋಟಿ ಅನುದಾನ ನೀಡಿದೆ. ಸಭಾಂಗಣಕ್ಕೆ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಇನ್ನಿತರ ಕಾಮಗಾರಿ ಕೈಗೊಳ್ಳಲಿದೆ. ಈ ಕಾಲೇಜು ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರ ಇದೆ. ನಮ್ಮೆಲರ ಕನಸಿನಿಂದ ಕಾಲೇಜಿನ ಸಮಗ್ರ ಅಭಿವೃದ್ಧಿ ಅಗಲಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌಧರಿ ಜಿ ಅವರು ಮಾತನಾಡಿ, 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜಿಗೆ ಶಾಸಕರು ಐದು ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇನ್ನೂ ಹತ್ತು ಕೋಟಿ ರೂ ಅನುದಾನ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಂಘದ ಸಂಚಾಲಕರೂ ಆಗಿರುವ ಸಹ ಪ್ರಾಧ್ಯಾಪಕ ಉ ಡಾ. ಗುರುಬಸಪ್ಪ .ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ. ಹಳೇ ವಿದ್ಯಾರ್ಥಿಗಳ ಸಂಘದಿಂದ ನಡೆದಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇನ್ನೂ ಹೆಚ್ಚಿನ ಕಾರ್ಯಕ್ರಮ ನಡೆಸಲು ಹಳೇ ವಿದ್ಯಾರ್ಥಿಗಳು, ಜನ ಪ್ರತಿನಿಧಿಗಳು ಸಂಘಕ್ಕೆ ಹೆಚ್ಚಿನನೆರವು ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಮಾತನಾಡಿ, ನಮ್ಮ ಸಂಘವು ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಇದೇ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡುವಲ್ಲಿ ಈ ಸಂಘವು ಸದಾ ಸಿದ್ಧವಾಗಿರುತ್ತದೆ ಅಲ್ಲದೆ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಮುಂಚೂಣಿಯಲ್ಲಿ ಇರುತ್ತದೆ .
ಸಮಾಜದ ಏಳಿಗೆಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗಿರುವ ಮತ್ತು ಹೋಗುತ್ತಿರುವ ಎಲ್ಲ ವಿದ್ಯಾರ್ಥಿಗಳು ಸಂಘ ನಿಗದಿ ಮಾಡಿದಂತಹ ನೋಂದಣಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ತುಂಬುವುದರೊಂದಿಗೆ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.

ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಕೊಡುವುದು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುವುದು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು , ನಮ್ಮ ಕಾಲೇಜಿನಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವುದು , ಸ್ನೇಹಕೂಟ, ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು , ಗುರು ವಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದಲ್ಲದೆ ಸಮಾಜಮುಖಿ ಅಭಿವೃದ್ಧಿಗೆ ಸಹಕಾರಿಯಾಗುವಂತಹ ರಕ್ತದಾನ ಕ್ಯಾಂಪುಗಳನ್ನು ನಡೆಸುವುದು, ಪರಿಸರ ಉಳವಿಗಾಗಿ ಗಿಡಗಳನ್ನು ನೆಡುವುದು, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡುವುದು, ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದು ಈ ಸಂಘದ ಉದ್ದೇಶವಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು ಹೇಳಿದ ಹೆಗಡೆ ಅವರು, ನಮ್ಮ ಮಧ್ಯೆ ಶಾಸಕರು ಇದ್ದಾರೆ. ಅವರು ಸಹ ವಿದ್ಯಾರ್ಥಿ ಜೀವನದ ಹಂತ ದಾಟಿ ಬಂದಿದ್ದಾರೆ. ಯಶಸ್ಸು ಯಾರದ್ದೇ ಸ್ವತ್ತಲ್ಲ. ಅದು ಗಂಭೀರವಾಗಿ ಆಲೋಚಿಸಿ ನೇರ ಗುರಿ ಇಟ್ಟುಕೊಂಡು ಹೋಗುವವರ ಹಿಂದೆ ಬೆನ್ನು ಹತ್ತಿ ತಾನೇ ಬರುತ್ತದೆ. ಇದಕ್ಕೆ ತಾಜಾ ಉದಾಹರಣೆ ನಮ್ಮ ಶಾಸಕರು. ಅವರು ಶ್ರೀಮಂತರಾದರು ಬಡವರ ಸೇವೆ ಮಾಡಲು ರಾಜಕಾರಣಕ್ಕೆ ಬಂದವರು. ಇಂದಿಗೂ ಅತ್ಯಂತ ಸರಳ ಜೀವನವನ್ನು ಅಳವಡಿಸಿ ಕೊಂಡು ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು. ಬಳ್ಳಾರಿಯ ಸಮಗ್ರ ಅಭಿವೃದ್ಧಿಗೆ ಕನಸು ಕಂಡವರು. ಅಂತಹ ದಿಟ್ಟ ನಾಯಕರಾಗಲು ನೀವು ಶ್ರಮಿಸಿ. ಯಾರು ಬೇಕಿದ್ದರೂ ಯಾವ ಹಂತಕ್ಕೂ ತಲುಪಬಹುದು. ನಮ್ಮ ಸಂವಿಧಾನ ಅಂತಹ ಅವಕಾಶ ನೀಡಿರುತ್ತದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ವೈ. ಹನುಮಂತ ರೆಡ್ಡಿ, ಕಾರ್ಯಾಧ್ಯಕ್ಷ ಎಂ. ಕಿಶೋರ್ ಕುಮಾರ್, ಖಜಾಂಚಿ ಎನ್. ವೀರಭದ್ರಗೌಡ, ಚಾನಳ್ ಶೇಖರ್, ಉಪಾಧ್ಯಕ್ಷ ಜಿ.ಆನಂದಕುಮಾರ್ ವೇದಿಕೆ ಮೇಲೆ ಇದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಕಗ್ಗಲ್ ಮಂಜುನಾಥ,ಮಲ್ಲ ರೆಡ್ಡಿ, ಗಂಗಧಾರ, ರಫಿಕ್,ಕೇಶವ, ಶಿವಕುಮಾರ್ ಎಚ್,ಎಸ್. ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಬಿಂದು ಪ್ರಾರ್ಥಿಸಿದರು. ಉಪನ್ಯಾಸಕರಾದ ಎಂ.ರಫಿ ಸ್ವಾಗತಿಸಿದರು. ರಾಮಸ್ವಾಮಿ ನಿರೂಪಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅರುಣಾಚಲಂ ವಂದಿಸಿದರು.
The post ಸರಳಾದೇವಿ ಕಾಲೇಜು ಜ್ಞಾನ ಸಿಂಚನ ಹಳೇ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಕರ ದಿನಾಚರಣೆ: ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ -ನಾರಾ ಭರತ್ ರೆಡ್ಡಿ appeared first on Karnataka Kahale.
]]>The post ಬಳ್ಳಾರಿ ಸರಳಾದೇವಿ ಕಾಲೇಜು ವಾರ್ಷಿಕೋತ್ಸವ-2025: ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತವೆ ಎನ್ನುವ ಮಾತು ಸುಳ್ಳಲ್ಲ -ವಿಶ್ರಾಂತ ಪ್ರಾಧ್ಯಾಪಕ ಡಾ. ಚಲುವರಾಜು appeared first on Karnataka Kahale.
]]>
ಬಳ್ಳಾರಿ, ಜೂ. 9: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶ್ರದ್ಧೆ, ಶಿಸ್ತು, ಸ್ಪರ್ಧಾತ್ಮಕ ಮನೋಭಾವದಿಂದ ಓದಿದವರು ಯಶಸ್ಸು ಪಡೆಯಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಚೆಲುವರಾಜು ಅವರು ಹೇಳಿದರು.
ಸೋಮವಾರ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮದರ್ಜೆ ಕಾಲೇಜು ಆಯೋಜಿಸಿದ್ದ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತವೆ ಎನ್ನುವ ಮಾತು ಸುಳ್ಳಲ್ಲ. ಬಡತನದಿಂದ ಬಂದ ಪ್ರತಿಭಾವಂತರು ಯಶಸ್ವಿಯಾದ ಸಾವಿರಾರು ಉದಾಹರಣೆಗಳಲ್ಲಿ ತಮ್ಮದು ಒಂದು ಎಂದರು.
ಪದವಿ ಓದುವಾಗ ಮೈಸೂರು ಮಹಾರಾಣಿ
ಕಾಲೇಜು ವಾರ್ಷಿಕೋತ್ಸವಕ್ಕೆ ತೆರಳಲು ಬಸ್ ಚಾರ್ಜಿಗೆ ದುಡ್ಡಿಲ್ಲದ ತಾವು ಇಂದು ತಮ್ಮ ಮುಂದೆನಿಂತು ವಿಶೇಷ ಭಾಷಣ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಪದವಿ ಹಂತದಲ್ಲಿ ಶ್ರಮವಹಿಸಿ ಆಂಗ್ಲಭಾಷೆಯಲ್ಲಿ ಪ್ರಭುತ್ವ ಸಾಧಿಸಿದೆ.ಮುಂದೆ ಜರ್ಮನಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿಯೂ ಕರ್ತವ್ಯನಿರ್ವಹಿಸಿದ್ದನ್ನು ಸ್ಮರಿಸಿದರು.

ಕಾಲೇಜು ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಭಾರತ ರತ್ನ ಡಾ. ಬಿ ಆರ್ ಅವರು ಶಿಕ್ಷಣದ ಮೂಲಕವೇ ಜಗತ್ತನ್ನು ಗೆದ್ದರು. ಜ್ಞಾನಾರ್ಜನೆ ಮೂಲಕ ಯಾವ ಹಂತವನ್ನು ತಲುಪಬಹುದು ಎಂದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜ್ಞಾನ, ಸಂವೇದನೆ, ಕಾಳಜಿ ಹುಟ್ಟುತ್ತಲೇ ಇರುತ್ತದೆ. ಈ ಹಿನ್ನಲೆಯಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್ ಪರೀಕ್ಷೆ ಗಳನ್ನು ಉತ್ತೀರ್ಣರಾಗುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಂದೆ ತಾಯಿಗಳು ಕಂಡ ಕನಸನ್ನು ನಮಸು ಮಾಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೊ.ಮರೇಗೌಡ ಅವರು ಮಾತನಾಡಿ ಖಾಸಗಿ ಶಾಲಾ ಕಾಲೇಜುಗಳಿಗಿಂತ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸಂಸ್ಕಾರ, ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.

ಮತ್ತೋರ್ವ ಸದಸ್ಯ, ನ್ಯಾಯವಾದಿ ಬಿ.ಜಯರಾಂ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ಹೆತ್ತವರು ಹಾಗೂ ಕಾಲೇಜಿಗೆ ಹೆಸರು ತರಬೇಕು ಎಂದರು.
ಕಾಲೇಜು ಹಳೇ ವಿದ್ಯಾರ್ಥಿಗಳಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಸಿ. ಎಚ್ ಸೋಮನಾಥ ಅವರು ಗಣ್ಯರನ್ನು ಸತ್ಕರಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯ ಪ್ರೊ.ಎಸ್ ಎಸ್ ಪಾಟೀಲ್, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ, ನ್ಯಾಯವಾದಿ ಹನುಮಂತರೆಡ್ಡಿ, ಕಾಲೇಜಿನ ಪರೀಕ್ಷಾ ನಿಯಂತ್ರಕಿ ಡಾ.ಶೋಭ ರಾಣಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ
ಮೋನಿಕ ರಂಜನ್, ಡಾ.ದಸ್ತಗಿರಿ ಸಾಬ್ ದಿನ್ನಿ, ಡಾ.ಎಸ್. ಮಂಜುನಾಥ್, ಕಚೇರಿ ವ್ಯವಸ್ಥಾಪಕ ಯುವರಾಜ ನಾಯ್ಕ್, ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಡಾ.ಟಿ
ದುರುಗಪ್ಪ, ಕಚೇರಿ ಅಧೀಕ್ಷಕಿ ರತ್ನಮ್ಮ ಸೇರಿದಂತೆ ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರು ಉಪಸ್ಥಿತರಿದ್ದರು.
ಹಿರಿಯ ಗಾಯಕಿ ಹೊಸಪೇಟೆಯ ಸವಿತಾ ಅಮರೇಶ ನುಗಡೋಣಿ ಮತ್ತು ತಂಡದ ವಚನ ಸಂಗೀತ ಗಮನ ಸೆಳೆಯಿತು. ರಾಘವೇಂದ್ರ ಗುಡದೂರು ಮತ್ತುಹರ್ಷ ಆಚಾರ್ ಅವರು ಹಾರ್ಮೋನಿಯಂ, ತಬಲಸಾಥ್ ನೀಡಿದರು.

ಡಾ. ದಸ್ತಗಿರಿ ಸಾಬ್ ದಿನ್ನಿ ಸ್ವಾಗತಿಸಿದರು. ಡಾ. ಜ್ಯೋತಿ ಅಣ್ಣಾರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು..
ಸಹಾಯಕ ಪ್ರಾಧ್ಯಾಪಕಿ ಡಾ.ಪಲ್ಲವಿ ನಿರೂಪಿಸಿ, ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಗೆದ್ದವು.
—–
The post ಬಳ್ಳಾರಿ ಸರಳಾದೇವಿ ಕಾಲೇಜು ವಾರ್ಷಿಕೋತ್ಸವ-2025: ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತವೆ ಎನ್ನುವ ಮಾತು ಸುಳ್ಳಲ್ಲ -ವಿಶ್ರಾಂತ ಪ್ರಾಧ್ಯಾಪಕ ಡಾ. ಚಲುವರಾಜು appeared first on Karnataka Kahale.
]]>The post ಭ್ರಾತೃತ್ವ, ರಾಷ್ಟ್ರಪ್ರೇಮ, ಸೇವಾ ಮನೋಭಾವನೆ ಕಲಿಸುವ ಎನ್ ಎಸ್ ಎಸ್ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ -ಪ್ರಾಚಾರ್ಯ ಡಾ. ಸಿ ಎಚ್ ಸೋಮನಾಥ್ appeared first on Karnataka Kahale.
]]>
ಬಳ್ಳಾರಿ: ಎನ್ ಎಸ್ ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಭ್ರಾತೃತ್ವ, ರಾಷ್ಟ್ರಪ್ರೇಮ, ಸೇವಾ ಮನೋಭಾವನೆಗಳನ್ನು ಕಲಿಸಿದ್ದು, ಭವಿಷ್ಯದಲ್ಲಿ ಈ ಎಲ್ಲಾ ಉತ್ತಮಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ. ಎಚ್. ಸೋಮನಾಥ್ ಅವರು ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್(ಎಸ್ ಎಸ್ ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕಗಳು ಸಮೀಪದ ಕಪ್ಪಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ಎಸ್ಎಸ್ ನ ಏಳು ದಿನಗಳ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮುದಾಯದ ಜೊತೆಗೆ ಬೆರೆಯುವುದನ್ನು ಕಲಿತಿದ್ದೀರಿ. ಶಿಬಿರವು ನಿಮಗೆ ಉತ್ತಮ ಜೀವನ ನಡೆಸಲು ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಗಳ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ ಎಂದರು.
ಶಿಬಿರದ ಕಲಿಕೆ ಸತ್ಪ್ರಜೆಗಳಾಗಿ ಭವ್ಯ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿ ವಾಣಿಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಗುರುಬಸಪ್ಪ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯ ನನಗಾಗಿ ಅಲ್ಲ ನಿನಗಾಗಿ ಎನ್ನುವುದು. ಶಿಬಿರಾರ್ಥಿಗಳು ನಿಸ್ವಾರ್ಥ ಮನೋಭಾವನೆಯಿಂದ ಸಮಾಜ ಸೇವೆಯಲ್ಲಿ ತೊಡಗುವುದನ್ನು ಸೂಚಿಸುತ್ತದೆ. ತನಗಾಗಿ ಬದುಕದೆ ಇತರ ಇತರರ ಏಳಿಗೆಗಾಗಿ ಬದುಕುವುದನ್ನು ಎನ್ಎಸ್ಎಸ್ ಕಲಿಸಿಕೊಡುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಶೋಭರಾಣಿ, ಎನ್ಎಸ್ಎಸ್ ನ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಾಚ್ಯ ವಸ್ತುಗಳ ಸಂರಕ್ಷಣೆ, ರಾಷ್ಟ್ರೀಯ ಜಾಗೃತಿ ಮೂಡಿಸುವಿಕೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ತನ್ಮೂಲಕ ಪ್ರತಿಯೊಬ್ಬ ಶಿಬಿರಾರ್ಥಿಯು ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇದು ಒಂದು ಉತ್ತಮವಾದ ವೇದಿಕೆಯಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ಎನ್ಎಸ್ಎಸ್ ಘಟಕದ ಸಂಚಾಲಕ ಪ್ರೊ. ಬಿ ರಾಮಸ್ವಾಮಿ ಅವರು, ವಿದ್ಯಾರ್ಥಿಗಳು ಶಿಬಿರದಲ್ಲಿ ಏಳು ದಿನಗಳ ಕಾಲ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು, ಶ್ರಮದಾನ, ಸಾಂಸ್ಕೃತಿಕ ಚಟುವಟಿಕೆಗಳು, ಅಡುಗೆ ತಯಾರಿ, ಯೋಗದಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸಮಾಜದಲ್ಲಿ ಸಹಭಾಗಿತ್ವದೊಂದಿಗೆ ಭಾಗವಹಿಸುವುದನ್ನು ಕಲಿಸುತ್ತದೆ. ಉತ್ತಮ ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಸಂಚಾಲಕರುಗಳಾದ ಡಾ. ಚನ್ನಬಸವಯ್ಯ, ಪ್ರೊ. ಪ್ರವೀಣ್ ಕುಮಾರ್, ಪ್ರೊ. ನಾಜಿಯಾ ಖಾಜಿ , ಪ್ರೊ. ಬಸಪ್ಪ ಕೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ ಪಂಪನಗೌಡ, ಅರ್ಥಶಾಸ್ತ್ರ ಉಪನ್ಯಾಸಕ ವೀರೇಶಯ್ಯ ಸ್ವಾಮಿ, ರಾಜ್ಯಶಾಸ್ತ್ರ ಉಪನ್ಯಾಸಕ ರುದ್ರಮುನಿ ಟಿ ಹಾಗೂ ಊರಿನ ಗ್ರಾಮಸ್ಥರು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದ ಉತ್ತಮ ಶಿಬಿರಾರ್ಥಿಗಳಿಗೆ ಬಹುಮಾನ ಘೋಷಿಸಲಾಯಿತು.
ಶಿಬಿರಾರ್ಥಿ ಶ್ರೀಧರ್ ನಿರೂಪಿಸಿದನು. ಬಿಂದು ಪ್ರಾರ್ಥಿಸಿದರು. ಕಾವೇರಿ ಸ್ವಾಗತಿಸಿದರು. ಗಣೇಶ್ ವಂದಿಸಿದರು.
The post ಭ್ರಾತೃತ್ವ, ರಾಷ್ಟ್ರಪ್ರೇಮ, ಸೇವಾ ಮನೋಭಾವನೆ ಕಲಿಸುವ ಎನ್ ಎಸ್ ಎಸ್ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ -ಪ್ರಾಚಾರ್ಯ ಡಾ. ಸಿ ಎಚ್ ಸೋಮನಾಥ್ appeared first on Karnataka Kahale.
]]>The post ಡಾ. ಅಂಬೇಡ್ಕರ್ ಸಂವಿಧಾನದಿಂದ ತಾರತಮ್ಯ ನಿವಾರಣೆ -ಹಿರಿಯ ಮಾಜಿ ಸೈನಿಕ ಶೇಖ್ ಸಾಬ್ appeared first on Karnataka Kahale.
]]>
ಬಳ್ಳಾರಿ, ಮೇ 22: ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವು ನಮ್ಮಲ್ಲಿರುವ ತಾರತಮ್ಯ ಮನೋಭಾವನೆಯನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಲು ಕಾರಣವಾಗಿದೆ ಎಂದು ಹಿರಿಯ ಮಾಜಿ ಸೈನಿಕ ಶೇಖ್ ಸಾಬ್ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಪ್ಪಗಲ್ಲು ಗ್ರಾಮದಲ್ಲಿ ಆಯೋಜಿಸಿರುವ ಎನ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೆಯ ದಿನವಾದ ಬುಧವಾರ ಸಂಜೆ ದೇಶದ ಏಕತೆ ಮತ್ತು ಭಾವೈಕ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತ ದೇಶ ಭೌಗೋಳಿಕವಾಗಿ ವಿಶಾಲವಾಗಿದ್ದು ಅನೇಕ ದೇಶಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ವಿಶಾಲವಾದ ಗಡಿಗಳು ಇದ್ದರೂ ಕೂಡ ನಮ್ಮ ಸೈನಿಕರು ಹಗಲಿರುಳೆನ್ನದೆ ದೇಶದ ರಕ್ಷಣೆ ಮಾಡುವಲ್ಲಿ ನಿರಂತರ ಹೋರಾಡುತ್ತಿರುತ್ತಾರೆ ಎಂದು ತಿಳಿಸಿದರು. ನಾವೆಲ್ಲರೂ ಇಂದು ನೆಮ್ಮದಿಯ ಸುರಕ್ಷಿತವಾದ ಜೀವನ ನಡೆಸುತ್ತಿದ್ದೇವೆ ಎಂದರೆ ಗಡಿಯಲ್ಲಿ ನಮ್ಮ ಯೋಧರು ತಮ್ಮ ಕುಟುಂಬಗಳನ್ನು ತೊರೆದು ಪ್ರಾಣ ಒತ್ತೆ ಇಟ್ಟು ಗಡಿಗಳನ್ನು ಕಾಯುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು. ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದು ಕರೆ ನೀಡುವ ಮೂಲಕ ಸೈನಿಕ ಮತ್ತು ರೈತ ದೇಶಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಹಿರಿಯ ಮಾಜಿ ಸೈನಿಕರಾದ ಪ್ರಹ್ಲಾದ್ ರೆಡ್ಡಿ ಅವರುಮಾತನಾಡಿ, ಮೊಬೈಲ್ ಗಳು ಇಂದಿನ ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಈ ಹಿನ್ನಲೆಯಲ್ಲಿ ಮೊಬೈಲ್ ಬಳಕೆಯಲ್ಲಿ ಇತಿಮಿತಿ ಇರಬೇಕು ಎಂದು ಸಲಹೆ ನೀಡಿದರು.
ಹಿರಿಯ ಮಾಜಿ ಸೈನಿಕ ಲಕ್ಷ್ಮಣ ಮಾತನಾಡಿ, 1971ರಲ್ಲಿ ನಮ್ಮ ದೇಶದ ಸೈನಿಕರು ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಶರಣಾಗತರನ್ನಾಗಿ ಮಾಡುವುದರ ಮೂಲಕ ದೇಶದ ಸೈನಿಕ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್ಎಸ್ಎಸ್ ಘಟಕದ ಸಂಚಾಲಕ ಪ್ರೊ. ರಾಮಸ್ವಾಮಿ ಅವರು, ನಮ್ಮ ಭಾರತ ದೇಶದ ಪ್ರಪಂಚದಲ್ಲಿ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದು ಇಂದು ಅಮೆರಿಕ ಚೀನಾ ದೇಶಗಳ ಜೊತೆಗೆ ಪೈಪೋಟಿ ನೀಡುತ್ತಿದೆ ಮತ್ತು ನಮ್ಮ ದೇಶದ ಅಪಾರ ಸೈನಿಕ ಶಕ್ತಿ ದೇಶದ ಭದ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕಗಳ ಸಂಚಾಲಕರುಗಳಾದ ಡಾ. ಚನ್ನಬಸವಯ್ಯ ಹೆಚ್ ಎಮ್ , ಪ್ರೊ. ಪ್ರವೀಣ್ ಕುಮಾರ್ ಎಂ ಎನ್, ಉಪನ್ಯಾಸಕರಾದ ವೀರೇಶಯ್ಯ ಸ್ವಾಮಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬಿಂದು ಪ್ರಾರ್ಥನೆ ಗೀತೆ ಹಾಡಿದಳು. ಸರೋಜಾ ಸ್ವಾಗತಿಸಿದರು. ಶಿಲ್ಪ ವಂದಿಸಿದರು. ವಿದ್ಯಾರ್ಥಿ ಶ್ರೀಧರ್ ನಿರೂಪಿಸಿದರು.
The post ಡಾ. ಅಂಬೇಡ್ಕರ್ ಸಂವಿಧಾನದಿಂದ ತಾರತಮ್ಯ ನಿವಾರಣೆ -ಹಿರಿಯ ಮಾಜಿ ಸೈನಿಕ ಶೇಖ್ ಸಾಬ್ appeared first on Karnataka Kahale.
]]>The post ಬಳ್ಳಾರಿ ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸಿ. ಎಚ್ ಸೋಮನಾಥ ಅಧಿಕಾರ ಸ್ವೀಕಾರ: ಅಭಿನಂದನೆ appeared first on Karnataka Kahale.
]]>
ಬಳ್ಳಾರಿ, ಮೇ 8: ನಗರದ ಸರಳಾದೇವಿ(ಎಸ್.ಎಸ್.ಎ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ.ಎಚ್ ಸೋಮನಾಥ ಅವರು ಅಧಿಕಾರ ಸ್ವೀಕರಿಸಿದರು.
ಪ್ರಾಚಾರ್ಯರಾಗಿದ್ದ ಡಾ.ಪ್ರಹ್ದಾದ ಚೌಧರಿ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಹಿನ್ನಲೆಯಲ್ಲಿ ಬುಧವಾರ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ನಗರದ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಸಿ.ಎಚ್ ಸೋಮನಾಥ ಅವರು ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕನಾಗಿ, ಸಹಾಯಕ ಪ್ರಾಧ್ಯಾಪಕನಾಗಿ ಸುಮಾರು ಮೂರು ದಶಕಗ ಕಾಲ ಕರ್ತವ್ಯ ನಿರ್ವಹಿಸಿದ ತಮಗೆ ಸಂತಸವಾಗಿದೆ. ಈ ಅವಕಾಶ ಕಲ್ಪಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರೂ ಆದ ನಗರ ಶಾಸಕ ನಾರಾ ಭರತರೆಡ್ಡಿ ಅವರಿಗೆ ಕೃತಜ್ಞನಾಗಿದ್ದೇನೆ.ಎರಡು ತಿಂಗಳು ಉತ್ತಮವಾಗಿ ಸೇವೆ ಸಲ್ಲಿಸಲು ಎಲ್ಲಾವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ಕೋರಿದರು.
ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಟಿ. ದುರುಗಪ್ಪ ಅವರು ಮಾತನಾಡಿ ಪ್ರಾಚಾರ್ಯರಾಗಿ ಹಿರಿಯ ಪ್ರಾಧ್ಯಾಪಕ ಡಾ.ಸಿ ಎಚ್ ಸೋಮನಾಥ ಅವರು ಅಧಿಕಾರಿ ಸ್ವೀಕರಿಸಿರುವುದು ತಮಗೆಲ್ಲಾ ಸಂತೋಷವಾಗಿದೆ. ಕಾಲೇಜಿನ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇವರಿಗೆ ನಮ್ಮ ಸಂಘ ಸಹಕಾರ ಬೆಂಬಲ ನೀಡಲಿದೆ ಎಂದರು.
ಇತಿಹಾಸದ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ರಾಮಾಂಜನೇಯ, ಉಪನ್ಯಾಸಕ ಸಮೀಉಲ್ಲಾ, ಹರೀಶ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ ಮತ್ತಿತರರು ಮಾತನಾಡಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಎಸ್ ಅವರು ಸ್ವಾಗತಿಸಿ, ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸ್ವಯಂ ನಿವೃತ್ತಿ ಪಡೆದ ಕಾಲೇಜಿನ ಅಧೀಕ್ಷಕ ಮೌನೇಶ್ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗಿರಿ ಸಾಬ್ ದಿನ್ನಿ ಸೇರಿದಂತೆ ವಿಭಾಗಗಳ ಮುಖಸ್ಥರು, ಉಪನ್ಯಾಸಕರು, ವಿವಿಧ ಸಂಘಗಳ ಮುಖಂಡರು ಉಪಸ್ಥಿತರಿದ್ದರು.
——
The post ಬಳ್ಳಾರಿ ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸಿ. ಎಚ್ ಸೋಮನಾಥ ಅಧಿಕಾರ ಸ್ವೀಕಾರ: ಅಭಿನಂದನೆ appeared first on Karnataka Kahale.
]]>The post ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ appeared first on Karnataka Kahale.
]]>
ಬಳ್ಳಾರಿ, ಏ.26: ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯತೆ ಇಂದು ಜರೂರಾಗಿದೆ ಎಂದು ವಿಜ್ಞಾನ ಸಾಹಿತ್ಯ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ ಅವರು ಪ್ರತಿಪಾದಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಜ್ಞಾನ – ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಏರ್ಪಡಿಸಿದ್ದ “ವಿಶ್ವ ಭೂಮಿ ದಿನಾಚರಣೆ ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. 2030 ರ ವೇಳೆಗೆ ಸೌರಶಕ್ತಿ, ಪವನಶಕ್ತಿ,ಉಬ್ಬರವಿಳಿತ, ಭೂಶಾಖ ಮತ್ತು ಜಲಶಕ್ತಿಯಂತಹ ಪುನರ್ ನವೀಕರಣ ಶಕ್ತಿಗಳನ್ನು ಹೆಚ್ಚೆಚ್ಚು ಬಳೆಸುತ್ತಾ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದಕ್ಕೆಲ್ಲ ಕಾರಣ ನಾವು ಬಳೆಸುವ ವಾಹನಗಳು, ಕಾರ್ಖಾನೆಗಳು, ರಾಸಾಯನಿಕ ಗೊಬ್ಬರಗಳು ಮೊದಲಾದವು ಭೂಮಿಯ ಮೇಲೆ ಕಾರ್ಬನ್ ಪ್ರಮಾಣ ಹೆಚ್ಚಿಸುತ್ತಿವೆ,ಇದರಿಂದ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಭೂಮಿಯ ಮೇಲೆ ಬಿಸಿ ಹೆಚ್ಚಾಗಿದೆ. ಇದು ಜೀವಸಂಕುಲದ ನಾಶಕ್ಕೆ ಸಂಚಕಾರ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಿಂದಾಗಿ ಋತುಗಳು ಅಕಾಲಿಕವಾಗಿವೆ, ಮಳೆ ಅತಿಯಾಗಿ ಬಿದ್ದು ನೆರೆ ಉಂಟಾಗುತ್ತಿದೆ.ಮತ್ತೊಂದು ಕಡೆ ಬರ ಉಂಟಾಗುತ್ತಿದೆ ಎಂದರು. ಬರ ಎಂದರೆ ನೀರು ಇಲ್ಲದಿರುವಿಕೆ,ಇದು ಗಾಳಿಯಲ್ಲಿನ ನೀರು ಬಿಸಿಯಾಗಿ ಬಿಸಿ ಅಲೆಗಳನ್ನು ಸೃಷ್ಟಿಸುತ್ತದೆ.ಬಿಸಿ ಅಲೆಗಳು ಜೀವಸಂಕುಲದ ಬದುಕಿಗೆ ಮಾರಕವಾಗಿ ಪರಿಣಮಿಸಲಿವೆ ಎಂದುಬಹೇಳಿದರು.
ಮುಖ್ಯ ಅತಿಥಿ ಗುರುಸಿದ್ದಮೂರ್ತಿ ಯವರು ಮಾತನಾಡಿ ರೈತರ ಮಕ್ಕಳು ತಮ್ಮದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡುವಂತಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಮೋನಿಕಾ ರಂಜನ್ ಅವರು ಮಾತನಾಡಿ, ವಿಜ್ಞಾನದ ಕಲಿಕೆ ಸರಳ ಅನಿಸದಿರಬಹುದು ಆದರೆ ಅವಕಾಶಗಳು ಹೆಚ್ಚು ಮತ್ತು ಮನುಷ್ಯರಲ್ಲಿ ವೈಚಾರಿಕತೆ ಮೂಡಿಸುತ್ತದೆ ಎಂದು ತಿಳಿಸಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎಸ್ ಪ್ರಾಸ್ತಾವಿಕ ಮಾತುಗಳಾಡಿದರು. ವಿಜ್ಞಾನ ಶಿಕ್ಷಕ ಎಸ್ ಎಂ.ಹಿರೇಮಠ ಹಾಡಿದ ವೈಜ್ಞಾನಿಕ ಜಾಗೃತಿ ಗೀತೆಗಳು ವಿದ್ಯಾರ್ಥಿಗಳನ್ನು ರಂಜಿಸುವುದರ ಜೊತೆಗೆ ಜಾಗೃತಿ ಮೂಡಿಸಿದವು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಶಾಲಿನಿ.ವಿ., ಡಾ. ಶಿಲ್ಪಾ ಕುಲ್ಕರ್ಣಿ ಉಪಸ್ಥಿತರಿದ್ದರು
ಬಿ.ಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ ಹರಿಪ್ರಿಯ ಸ್ವಾಗತಿಸಿದರು. ವಿದ್ಯಾರ್ಥಿನಿ ಯು. ಅಫೀಯಾ ನಿರೂಪಿಸಿ ವಂದಿಸಿದರು. ಬಿ.ಎಸ್ಸಿ ಮೊದಲ ವರ್ಷದ ನೂರಾರು ವಿದ್ಯಾರ್ಥಿಗಳು ಇದ್ದರು.
The post ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ appeared first on Karnataka Kahale.
]]>The post ದೇಶದ ಜ್ವಲಂತ ಸಮಸ್ಯೆಗಳಿಗೆ ಡಾ.ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ -ಡಾ.ಹೆಚ್. ತಿಪ್ಪೇಸ್ವಾಮಿ appeared first on Karnataka Kahale.
]]>
ಬಳ್ಳಾರಿ, ಏ.24: ದೇಶದ ಹಲವು ಜ್ವಲಂತ ಸಮಸ್ಯೆಗಳಿಗೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ ಎಂದು ವಿಎಸ್ ಕೆ ವಿವಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಅವರು ತಿಳಿಸಿದರು.
ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ, ಎನ್ ಎಸ್ ಎಸ್ ಘಟಕಗಳು ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರು
ದೇಶ ಸುಭದ್ರ ಹಾಗೂ ಸುಭೀಕ್ಷವಾಗಿರಲು ಅತ್ಯುತ್ತಮ ಸಂವಿಧಾನ ರಚಿಸಿದರು ಎಂದು ಹೇಳಿದರು.

ಬಹುಮುಖ ಪ್ರತಿಭೆಯ ಡಾ. ಅಂಬೇಡ್ಕರ್ ಅವರು ಸಮಾನತೆ, ಸಾಮಾಜಿಕ ನ್ಯಾಯದಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಖಚಿತವಾಗಿ ನಂಬಿದ್ದರು ಎಂದರು.
ಆರ್ಥಿಕ ತಜ್ಞರಾಗಿದ್ದ ಬಾಬಾಸಾಹೇಬರ ಸಂಶೋಧನೆ, ಅಧ್ಯಯನ ಫಲವಾಗಿ ಆರ್ ಬಿ ಐ ಸ್ಥಾಪನೆಗೊಂಡಿದೆ. ಪತ್ರಿಕೋದ್ಯಮ, ನೀರಾವರಿ ಕ್ಷೇತ್ರಗಳಿಗೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ದೇಶದ ಎಲ್ಲಾ ಜಾತಿಯ ಮಹಿಳೆಯರು ಮತ್ತು ಶೋಷಿತ ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ ಮಹಾ ಮಾನವತಾವಾದಿ ಡಾ.ಅಂಬೇಡ್ಕರ್ ಅವರು ಎಂದು ಕೊಂಡಾಡಿದರು.
ಗೌತಮ ಬುದ್ಧ ಮತ್ತು ಬಸವಣ್ಣ ಅವರ ಸಮಸಮಾಜದ ಕನಸನ್ನು ಡಾ.ಅಂಬೇಡ್ಕರ್ ಅವರು ತಮ್ಮ ರಚನೆಯ ಸಂವಿಧಾನದ ಮೂಲಕ ನನಸು ಮಾಡಿದ ದಾರ್ಶನಿಕರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಹ್ದಾದ ಚೌಧರಿ ಅವರು, ಮಹಿಳೆಯರ ಸಬಲೀಕರಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಮಹತ್ವದ ಬೆಳವಣಿಗೆಯಲ್ಲಿ ಡಾ. ಅಂಬೇಡ್ಕರ್ ಅವರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಪ್ರಸ್ತುತ ದೇಶ ಒಗ್ಗಟ್ಟಾಗಿರಲು ಕಾರಣ ಡಾ. ಅಂಬೇಡ್ಕರ್ ಅವರು ರಚಿಸಿದ ವಿಶ್ವದಲ್ಲೇ ಶ್ರೇಷ್ಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸಂವಿಧಾನ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ ಎಚ್ ಸೋಮನಾಥ ಅವರು ಕಾಲೇಜಿನಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ ಡಾ. ಅಂಬೇಡ್ಕರ್ ಜಯಂತಿಗೆ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಐದು ಸಾವಿರ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ದೇಶದ ಪ್ರತಿಯೊಬ್ಬರ ಕ್ಷೇಮ ಬಯಸಿದ ವಿಶ್ವ ಜ್ಞಾನಿ ಡಾ.ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವ ಷಡ್ಯಂತ್ರ ನಡೆಯುತ್ತಿರುವುದಕ್ಕೆ ವಿಷಾಧಿಸಿದರು.

ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ.ತಿಪ್ಪೇಸ್ವಾಮಿ ಅವರನ್ನು ಕಾಲೇಜು ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕಿ ಪ್ರೊ. ಜಯಶ್ರೀ, ಎನ್ ಎಸ್ ಎಸ್ ಸಂಚಾಲಕರಾದ ಪ್ರೊ. ನಾಜಿಯಾ ಖಾಜಿ, ಪ್ರೊ. ಚನ್ನಬಸವಯ್ಯ ಹೆಚ್ ಎಂ, ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ. ದುರುಗಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು ಇದ್ದರು.
ವಿದ್ಯಾರ್ಥಿನಿ ಬಿಂದು ಪ್ರಾರ್ಥಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಪ್ರವೀಣ್ ಕುಮಾರ್ ಎನ್ ಸ್ವಾಗತಿಸಿದರು. ಎನ್ಎಸ್ ಎಸ್ ಸಂಚಾಲಕ ಪ್ರೊ. ರಾಮಸ್ವಾಮಿ.ಬಿ ವಂದಿಸಿದರು. ವಿದ್ಯಾರ್ಥಿನಿ ಗಾಯತ್ರಿ ನಿರೂಪಿಸಿದರು.

The post ದೇಶದ ಜ್ವಲಂತ ಸಮಸ್ಯೆಗಳಿಗೆ ಡಾ.ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ -ಡಾ.ಹೆಚ್. ತಿಪ್ಪೇಸ್ವಾಮಿ appeared first on Karnataka Kahale.
]]>The post ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ ನೀಡುತ್ತವೆ -ಪ್ರೊ. ಮೋನಿಕಾ ರಂಜನ್ appeared first on Karnataka Kahale.
]]>
ಬಳ್ಳಾರಿ, ಏ, 11: ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಬಾರಿ ಪ್ರಾಂಶುಪಾಲರಾದ
ಪ್ರೊ.ಮೋನಿಕಾ ರಂಜನ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ ಜಾನಪದ ಉತ್ಸವ 2025 ‘ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ
ಎಲ್ಲರದಾಗಬೇಕೆಂದರು.
ಜಾನಪದ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನ ದರ್ಶನವಾಗಿದೆ. ಅವರ ನೋವು, ನಲಿವು,ಜೀವನ ವಿಧಾನ,ಸಂಸ್ಕೃತಿ ಎಲ್ಲವೂ ಅದರಲ್ಲಿ ಮಿಳಿತವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಆಧುನಿಕ ಜಗತ್ತಿನ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ಇಂದು ನಶಿಸುತ್ತಿವೆ.ಯುವ ಮನಸ್ಸುಗಳಲ್ಲಿ ಜಾನಪದ ಸಾಹಿತ್ಯದ ಬಗೆಗೆ ಅರಿವನ್ನು, ಕಲೆಗಳ ಬಗೆಗೆ ಪ್ರೀತಿಯನ್ನು ಹುಟ್ಟಿಸುವುದು. ಮುಂದಿನ ತಲೆಮಾರಿಗಾಗಿ ಇದನ್ನು ದಾಟಿಸುವುದ ಈ ಕಾರ್ಯಕ್ರಮದ ಮೂಲ ಉದ್ದೇವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಜಾನಪದ ಸಾಹಿತ್ಯವು ಮಾನವೀಯ ಮೌಲ್ಯ, ನೀತಿ, ಆದರ್ಶ ಮುಂತಾದ ಗುಣಗಳನ್ನು ಕಟ್ಟಿಕೊಡುತ್ತದೆ. ಬಹಳ ಮುಖ್ಯವಾಗಿ ಜಾನಪದ ಆಟಗಳಿಂದ ಜನರಿಗೆ ಸಂತೋಷವಾಗುವುದರೊಂದಿಗೆ ದೈಹಿಕ ಶ್ರಮ ಕೂಡ ಆಗುತ್ತಿತ್ತು ಎಂದರು.
ವೇದಿಕೆ ಮೇಲೆ ಹಿರಿಯ ಸಹ ಪ್ರಾಧ್ಯಾಪಕ, ಜಾನಪದ ಉತ್ಸವ ಸಮಿತಿಯ ಸಂಚಾಲಕರಾದ ಡಾ. ಸಿ. ಎಚ್. ಸೋಮನಾಥ್, ಅಧ್ಯಾಪಕರಾದ ಡಾ. ಮಂಜುನಾಥ್, ಜಯಶ್ರೀ,
ಡಾ.ಪಂಚಾಕ್ಷರಿ, ಪಂಪನಗೌಡ, ಡಾ. ಗುರುಬಸಪ್ಪ, ಗ್ರಂಥಪಾಲಕ ಪ್ರಶಾಂತ, ಡಾ. ಟಿ. ದುರುಗಪ್ಪ, ಡಾ. ಕನ್ಯಾಕುಮಾರಿ,
ಡಾ. ಪಲ್ಲವಿ, ಅಧೀಕ್ಷಕ ಯುವರಾಜ ನಾಯ್ಕ ಇದ್ದರು.
ಮೆರವಣಿಗೆ: ಜಾನಪದ ಮೆರವಣಿಗೆ ಕಾಲೇಜಿನಿಂದ ಆರಂಭವಾಗಿ ಸಂಗಮ್ ಚೌಕಿನವರೆಗೆ ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳ ವೀರಗಾಸೆ, ಲಂಬಾಣಿ ನೃತ್ಯ,ಡೊಳ್ಳು ಕುಣಿತ,ಕಂಸಾಳೆ, ಕೋಲಾಟ, ಬಯಲಾಟ, ಮಣಿಪುರಿ ನೃತ್ಯ, ಯಕ್ಷಗಾನ ಕಲಾತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ನಂತರ ವೇದಿಕೆಯಲ್ಲಿ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ಗಮನ ಸೆಳೆದವು.
ದೇಸಿ ಅಡುಗೆ: ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ದೇಸಿ ಅಡುಗೆ ಅಧ್ಯಾಪಕರು, ಅತಿಥಿಗಳು, ವಿದ್ಯಾರ್ಥಿಗಳ ಪಾಲಕರು, ಭೋದಕರೇತ ಸಿಬ್ಬಂದಿಗಳ ಒಡಲು ತಣಿಸಿತು.

ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
—–
The post ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ ನೀಡುತ್ತವೆ -ಪ್ರೊ. ಮೋನಿಕಾ ರಂಜನ್ appeared first on Karnataka Kahale.
]]>