ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌಧರಿ‌ ಚಾಲನೆ

ಬಳ್ಳಾರಿ, ಅ.18:  ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್(ಎಸ್.ಎಸ್.ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಇತಿಹಾಸ ವಿಭಾಗ ಶನಿವಾರ ಹಮ್ಮಿಕೊಂಡಿದ್ದ ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರಹ್ಲಾದ್ ಚೌದ್ರಿ ಅವರು  ಚಾಲನೆ ನೀಡಿದರು.                              ನಾಣ್ಯಗಳ ಸಂಗ್ರಾಹಕರೂ ಆದ ಕಾಲೇಜಿನ ಹಳೆಯ  ವಿದ್ಯಾರ್ಥಿ, ಇತಿಹಾಸ ಉಪನ್ಯಾಸಕ ಡಾ. ಶಾಂತ ಕುಮಾರ್ ಬಿ ಗೋಟೂರು ಅವರು ನಾಣ್ಯಗಳ ಹಿನ್ನೆಲೆ, ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ ನಾಜಿಯಾ ಖಾಜಿ,   ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.‌ಹೊನ್ನೂರಲಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.‌‌ಮಂಜುನಾಥ್ ಎಸ್.,
ಸಹಾಯಕ ಪ್ರಾಧ್ಯಾಪಕ ಪ್ರೊ.‌ಬಸಪ್ಪ, ಆಂಗ್ಲ‌ ವಿಭಾಗದ ಮುಖ್ಯಸ್ಥೆ ಡಾ.‌ಮೊನಿಕಾ ರಂಜನ್, ಪರೀಕ್ಷಾ ನಿಯಂತ್ರಕಿ ಡಾ. ಶೋಭರಾಣಿ,  ಉರ್ದು ವಿಭಾಗದ ಮುಖ್ಯಸ್ಥೆ ಶ್ರೀಮತಿ ಇಸ್ಮಾಯಿಲ್ ಮಕಾಂದಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.‌ಹುಚ್ಚುಸಾಬ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.‌ದಸ್ತಗಿರಿಸಾಬ್ ದಿನ್ನಿ,  ಸಹಾಯಕ ಪ್ರಾಧ್ಯಾಪಕರಾದ ಟಿ. ಡಿ. ಬಸವರಾಜು,  ಉಪನ್ಯಾಕರಾದ ಡಾ. ಟಿ ದುರುಗಪ್ಪ, ಡಾ.‌ಕೆ. ಬಸಪ್ಪ,     ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾದ ಎಂ ರಫಿ, ಬಿ. ಹರೀಶ್, ಡಾ.ಆಶಾ ವಿ ಆರ್, ಸರಳ ಆರ್ , ಶ್ಯಾಮ್ ರಾಜನಾಯಕ್ ಟಿ, ಸ್ವರಪ್ಪ, ಕೆ. ಷಮಿಉಲ್ಲಾ , ವಿವಿಧ ವಿಭಾಗಗಳ  ಉಪನ್ಯಾಸಕರಾದ ಎಸ್. ಎಂ.‌ರಮೇಶ್, ಗುರುರಾಜ್, ಸಿ.‌ಮಂಜುನಾಥ್ ಸೇರಿದಂತೆ ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳು ವಿಶೇಷ ಹಳೆಯ ನಾಣ್ಯ ಮತ್ತು ನೋಟುಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.