Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಪರಿಸರ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 17 Jan 2026 17:04:25 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಪರಿಸರ – Karnataka Kahale https://www.karnatakakahale.com 32 32 ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ https://www.karnatakakahale.com/news/22045 Sat, 17 Jan 2026 17:04:25 +0000 https://www.karnatakakahale.com/?p=22045 ರಾಯಚೂರು, ಜ.17: ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪರಿಸರದ ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಅವರು ಹೇಳಿದರು. ಪ್ರಯತ್ನ ವೆಲ್ ಫೇರ್ ಟ್ರಸ್ಟ್ ನವರು ಟಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ …

The post ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ appeared first on Karnataka Kahale.

]]>

ರಾಯಚೂರು, ಜ.17: ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪರಿಸರದ ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಅವರು ಹೇಳಿದರು.
ಪ್ರಯತ್ನ ವೆಲ್ ಫೇರ್ ಟ್ರಸ್ಟ್ ನವರು ಟಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸಾಹಿತಿ ಈರಣ್ಣ ಬೆಂಗಾಲಿ ಅವರು ತೆಗೆದ ನೂರ ಐವತ್ತಕ್ಕೂ ಹೆಚ್ಚು ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನವನ್ನು ಉದ್ಘಾಟಸಿ ಅವರು ಮಾತನಾಡಿದರು.                                              ಪಕ್ಷಿಗಳು ಭೂ ಲೋಕದ ಅದ್ಬುತ ಜೀವಿಗಳಾಗಿ, ಮನುಕುಲಕ್ಕೆ ಸಹಕಾರಿ ಆಗಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಿಗಳನ್ನು ಉಳಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.                ಪಕ್ಷಿಗಳ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಅವರು ಮಾತಾಡಿ,  ರಾಯಚೂರಿನಲ್ಲಿ ಇನ್ನೂರಕ್ಕೂ ಅಧಿಕ ಪ್ರಬೇಧದ ಹಕ್ಕಿಗಳು ಇದ್ದು, ಅವುಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಆಗಬೇಕು. ಜನರು ಹಕ್ಕಿಗಳ ಬಗ್ಗೆ ಒಲವನ್ನು ಹೊಂದಿ, ಪಕ್ಷಿಗಳ ಮಹತ್ವ ಅರಿಯಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಅಭಿಜ್ಞಾನ ಶಾಲೆಯ ರಮೇಶ್ ಅವರು,   ಈರಣ್ಣ ಬೆಂಗಾಲಿ ಅವರು ರಾಯಚೂರಿನ ಪಕ್ಷಿಗಳ ಫೋಟೋ ತೆಗೆದು ನಮಗೆ ತೋರಿಸಿದ್ದು ಅಭಿನಂದನೀಯ. ಪರಿಸರ ಕಾರ್ಯಕ್ಕೆ ನಾವು ಯಾವಾಗಲೂ ಜೊತೆ ಇರಬೇಕು. ಉತ್ತಮ ಪರಿಸರವನ್ನು ನಾವು ಕಾಪಾಡುವಲ್ಲಿ ಗಮನಹರಿಸಬೇಕು. ಪಕ್ಷಿಗಳು ಇರದಿದ್ದರೆ ನಾವಿಲ್ಲ ಎಂಬುದನ್ನು ಮರೆಯಕೂಡದು ಎಂದರು.

ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಪೀರಜಾದೆ, ವೀರಹನುಮಾನ, ನೀಲಕಂಠ ಮಳಿಮಠ, ಈರಣ್ಣ ಕೋಸಗಿ, ಹಫಿಜುಲ್ಲಾ, ಬಶೀರ ಅಹ್ಮದ ಹೊಸಮನಿ, ಪ್ರಭಣ್ಣಗೌಡ, ಬಸವಂತರಾಯ ಪಾಟೀಲ, ಸಲಾವುದ್ದಿನ್, ಅಜೃಯ್, ಮುನಿಸ್ವಾಮಿ, ಯಲ್ಲಪ್ಪ ಮರ್ಚೆಡ್ ಸೇರಿದಂತೆ ಅಭಿಜ್ಞಾನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಕ್ಷಿಗಳ ಫೋಟೋ ಪ್ರದರ್ಶನ ರವಿವಾರವೂ ಇರುತ್ತದೆ.
—–

The post ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ appeared first on Karnataka Kahale.

]]>
ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ: ಅಭಿನಂದನೆ https://www.karnatakakahale.com/news/20917 Fri, 10 Oct 2025 12:48:53 +0000 https://www.karnatakakahale.com/?p=20917 ಬಳ್ಳಾರಿ, ಅ.10:ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯ ಸಾರುವಲ್ಲಿ ಮಾನ್ವಿ ಹಾಗೂ ಸುತ್ತಮುತ್ತ ಸುಮಾರು 13 ವರ್ಷಗಳಿಂದ ಪಕ್ಷಿ ಸಂಕುಲದ ಉಳಿವಿಗಾಗಿ ಪಕ್ಷಿಗಳಿಗಾಗಿ ಹಗಲಿರುಳೆನ್ನದೆ ತಮ್ಮದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್…

The post ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ: ಅಭಿನಂದನೆ appeared first on Karnataka Kahale.

]]>

ಬಳ್ಳಾರಿ, ಅ.10:ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯ ಸಾರುವಲ್ಲಿ ಮಾನ್ವಿ ಹಾಗೂ ಸುತ್ತಮುತ್ತ ಸುಮಾರು 13 ವರ್ಷಗಳಿಂದ ಪಕ್ಷಿ ಸಂಕುಲದ ಉಳಿವಿಗಾಗಿ ಪಕ್ಷಿಗಳಿಗಾಗಿ ಹಗಲಿರುಳೆನ್ನದೆ ತಮ್ಮದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಸರಕಾರಿ ಪದವಿ ಪೂರ್ವ(ಮಾ ಪು) ಕಾಲೇಜು ಮೈದಾನದಲ್ಲಿ ಶುಕ್ರವಾರ ಜರುಗಿದ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಲಾವುದ್ದಿನ್ ಅವರಿಗೆ ಅರಣ್ಯ ಇಲಾಖೆ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ  ಈಶ್ವರ್ ಖಂಡ್ರೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ  ಪಿ.ಎಂ ನರೇಂದ್ರಸ್ವಾಮಿ ಅವರು “ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.                     ಅಭಿನಂದನೆ:   ರಾಜ್ಯಮಟ್ಟದ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪುರಸ್ಕೃತ ಪಕ್ಷಿಪ್ರೇಮಿ ಸಲಾವುದ್ದಿನ್ ಅವರನ್ನು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಮತ್ತು ಲಿಂಗಸೂರಿನ ಕವಿ, ಗಾಯಕ ಹುಸೇನ್ ಸಾಬ್ ಅವರು ಅಭಿನಂದಿಸಿದ್ದಾರೆ.

The post ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ: ಅಭಿನಂದನೆ appeared first on Karnataka Kahale.

]]>
ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು https://www.karnatakakahale.com/news/20237 Mon, 21 Jul 2025 07:03:26 +0000 https://www.karnatakakahale.com/?p=20237 ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು ಏಳು ವರ್ಷಗಳ ಹಿಂದೆ ಹಾವೇರಿಯಲ್ಲಿ ಸಮಾಜಮುಖಿ ಓದುಗರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಒಟ್ಟಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದರು. ಅಂದು ಅದೇ ತಾನೇ ಐಎಎಸ್ ಪರೀಕ್ಷೆ ಪಾಸಾಗಿದ್ದ ಹೊಸಪೇಟೆಯ ಕೀರ್ತಿ‌ಕಿರಣ್…

The post ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು appeared first on Karnataka Kahale.

]]>
ಎಲ್ಲಿ ಹೋದವು ಬಟ್ಟೆ ಬ್ಯಾನರು?!
-ಚಂದ್ರಕಾಂತ ವಡ್ಡು

ಏಳು ವರ್ಷಗಳ ಹಿಂದೆ ಹಾವೇರಿಯಲ್ಲಿ ಸಮಾಜಮುಖಿ ಓದುಗರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಒಟ್ಟಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದರು. ಅಂದು ಅದೇ ತಾನೇ ಐಎಎಸ್ ಪರೀಕ್ಷೆ ಪಾಸಾಗಿದ್ದ ಹೊಸಪೇಟೆಯ ಕೀರ್ತಿ‌ಕಿರಣ್ ಪೂಜಾರ್  (ಇವರು ಹಾವೇರಿಯ ಅಳಿಯ) ಅವರನ್ನು ಗೌರವಿಸಲಾಯಿತು.

ಆ ಕಾರ್ಯಕ್ರಮದಲ್ಲಿ ಹಾವೇರಿಯ ಪರಿಸರಪ್ರೇಮಿ ಗೆಳೆಯರು ಬಳಸಿದ್ದ ಕೈಬರಹದ ಬಟ್ಟೆ ಬ್ಯಾನರು ವಿಶೇಷವಾಗಿ ಗಮನ ಸೆಳೆಯುತ್ತದೆ.

ಇತ್ತೀಚೆಗೆ ಎಲ್ಲೆಡೆ ಫ್ಲೆಕ್ಸ್ ಬ್ಯಾನರುಗಳ ಬಳಕೆ ಮೂಲಕ ಪರಿಸರ ಮಾಲಿನ್ಯಕ್ಕೆ ವಿಪರೀತ ಕೊಡುಗೆ ನೀಡಲಾಗುತ್ತಿದೆ. ಇಂಥ ಕೆಟ್ಟ ಸಾರ್ವಜನಿಕ ನಡವಳಿಕೆಯನ್ನು ಬಹುತೇಕ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು, ನೇತಾರರು ಯಾವ ಅಳುಕು ಅಂಜಿಕೆ ಕಾಳಜಿ ಇಲ್ಲದೇ ಪಾಲಿಸುವುದನ್ನು ಅಸಹಾಯಕತೆಯಿಂದ ಗಮನಿಸುತ್ತಿದ್ದೇವೆ.

ಇಂತಹ ಪರಿಸರ ಹಾನಿ ವರ್ತನೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಮಾಧ್ಯಮ ಲೋಕವಾದರೂ ಹೊರತಾಗಬೇಕಲ್ಲವೇ…?

ಮರೆತು ಹೋಗಿರುವ ಬಟ್ಟೆ ಬ್ಯಾನರ್ ಬಳಕೆಯನ್ನು ಮತ್ತೆ ಜಾರಿಗೆ ತರುವುದು ಸೂಕ್ತವೇ? ಸಾಧ್ಯವೇ? ಕಣ್ಮರೆಯಾಗಿರುವ ಬಟ್ಟೆಬರವಣಿಗೆಯ ಕಲಾವಿದರನ್ನು ಹುಡುಕುವುದು ಹೇಗೆ, ಎಲ್ಲಿ?

-ಚಂದ್ರಕಾಂತ ವಡ್ಡು , ಸಂಪಾದಕರು: ಸಮಾಜಮುಖಿ ಮಾಸಿಕ, ಬೆಂಗಳೂರು
—–

The post ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು appeared first on Karnataka Kahale.

]]>
ಪರಿಸರ ಸಂರಕ್ಷಣೆಯಲ್ಲಿ ಬುಡಕಟ್ಟು, ಅಲೆಮಾರಿ, ರೈತಾಪಿ ಜನರ ಪಾತ್ರ ಹಿರಿದಾಗಿದೆ -ಡಾ.‌ಅಶ್ವರಾಮು https://www.karnatakakahale.com/news/19675 Thu, 05 Jun 2025 12:58:47 +0000 https://www.karnatakakahale.com/?p=19675 ಬಳ್ಳಾರಿ, ಜೂ.5:  ಬುಡಕಟ್ಟು, ಅಲೆಮಾರಿಗಳು ಹಾಗೂ ಗ್ರಾಮೀಣ ರೈತಾಪಿ ಜನರು ಪರಿಸರದಲ್ಲಿ ದೈವತ್ವ ಕಂಡು  ಸಂರಕ್ಷಿಸುತ್ತಾರೆ ಎಂದುಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಅಶ್ವ ರಾಮು ಅವರು ಹೇಳಿದರು.                 …

The post ಪರಿಸರ ಸಂರಕ್ಷಣೆಯಲ್ಲಿ ಬುಡಕಟ್ಟು, ಅಲೆಮಾರಿ, ರೈತಾಪಿ ಜನರ ಪಾತ್ರ ಹಿರಿದಾಗಿದೆ -ಡಾ.‌ಅಶ್ವರಾಮು appeared first on Karnataka Kahale.

]]>

ಬಳ್ಳಾರಿ, ಜೂ.5:  ಬುಡಕಟ್ಟು, ಅಲೆಮಾರಿಗಳು ಹಾಗೂ ಗ್ರಾಮೀಣ ರೈತಾಪಿ ಜನರು ಪರಿಸರದಲ್ಲಿ ದೈವತ್ವ ಕಂಡು  ಸಂರಕ್ಷಿಸುತ್ತಾರೆ ಎಂದುಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಅಶ್ವ ರಾಮು ಅವರು ಹೇಳಿದರು.                                          ಪರಿಸರ ನಾಶದ ಹಿಂದೆ  ಕೆಲವು ಬಂಡವಾಳಶಾಹಿಗಳು, ಸ್ವಾರ್ಥ ಜನರು ಇದ್ದಾರೆ.  ಪರಿಸರವನ್ನು ಸಂರಕ್ಷಣೆ ಮಾಡುತ್ತಿರುವುದು ನಿಜವಾಗಲೂ ಬುಡಕಟ್ಟು ಜನರು, ಅಲೆಮಾರಿಗಳು, ಗ್ರಾಮೀಣ ರೈತಾಪಿ ಜನರು.  ಪರಿಸರದಲ್ಲಿ ದೈವತ್ವ ಪರಿಕಲ್ಪನೆಯನ್ನು ಹೊಂದಿ ಉಳಿಸಿ, ಬೆಳೆಸುತ್ತಾ ಜೀವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.      ‌ ನಾಗರೀಕ ಜನರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಿ  ಉಳಿಸಬೇಕು, ಸುಸ್ಥಿರ ಸಮಾಜಕ್ಕೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ  ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆ ಎಂಬ ವಿಚಾರ ಸಂಕಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ  ಪ್ರಗತಿಪರ ರೈತ ಹಲಕುಂದಿಯ  ಶಿವಮೂರ್ತಿ ಅವರು ಉತ್ತಮ‌ ಪರಿಸರಕ್ಕೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ಹೇಳಿದರು.       ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ  ಜಯದೇವಯ್ಯ ಮಾತನಾಡಿ,  ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಗಜಾಲ ರವರು ಪರಿಸರ ಪರಿಸರ ದಿನಾಚರಣೆಯ ಹಿನ್ನೆಲೆ ಮತ್ತು ಏಕೆ ಆಚರಣೆ ಮಾಡಬೇಕು ಎಂಬುದರ ಕುರಿತು ಮಾತನಾಡಿದರು. ನಂತರ ಶಾಂತಮ್ಮನವರು ಪರಿಸರ ದಿನಾಚರಣೆಯ ಮಹತ್ವ ಕುರಿತು ಪರಿಸರದಲ್ಲಿ ಬರುವ ಗಾಳಿ ನೀರು ಬೆಳಕು ಇವು ನಮ್ಮ ಜೀವನಕ್ಕೆ ಅತ್ಯಮೂಲ್ಯ ನಮ್ಮ ಪರಿಸರವನ್ನು ಕಾಪಾಡದಿದ್ದರೆ ನಾವು ಇವೆಲ್ಲವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು. ನಂತರ ಗಿರಿರಾಜ ಕೆ ಅವರು ಪರಿಸರ ಸಂರಕ್ಷಣೆಗೆ ಸಂವಿಧಾನಾತ್ಮಕ ಕಾಯ್ದೆಗಳ ಕುರಿತು ವಿವರಿಸಿದರು. ಚೈತನ್ಯ ಆರ್ ರವರು ಪರಿಸರ ಮಾಲಿನ್ಯದ ಪರಿಣಾಮಗಳು ಕುರಿತು ತಿಳಿಸಿದರು. ಪವಿತ್ರ ಎಮ್ ಬಿ ಅವರು ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಕುರಿತು ಮಂಡಿಸಿದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮಂಗಳಗೌರಿ ಅವರು ನಮ್ಮ ಮುಂದಿನ ಪೀಳಿಗೆಗಾಗಿ ಆಮ್ಲಜನಕವನ್ನು ಉಳಿಸಿ ಸೇವ್ ಆಕ್ಸಿಜನ್ ಫಾರ್ ಅವರ್ ನೆಕ್ಸಟ್ ಜನರೇಷನ್ ಎಂಬ ಕಿರು ನಾಟಕವನ್ನು ಪ್ರಶಿಕ್ಷಣಾರ್ಥಿಗಳಿಂದ ಪ್ರದರ್ಶಿಸಿದರು. ಈ ನಾಟಕದಲ್ಲಿ ಮರಗಳನ್ನು ಕಡಿಯಲು ಕಾರಣಗಳನ್ನು ಹುಡುಕಬೇಡಿ ಮರಗಳನ್ನು ನೆಡಲು ಕಾರಣಗಳನ್ನು ಕೊಡಿ ಎಂದು ಸಂದೇಶ ನೀಡಿದರು.

ನಂತರ ಸಹಾಯಕ ಪ್ರಾಧ್ಯಾಪಕರಾದ ಶ್ರೀಕಾಂತ್ ಮುನಿ ಅವರು ಪ್ರತಿಯೊಬ್ಬರು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಹಾಗೂ ಪರಿಸರವನ್ನು ಉಳಿಸಲಿಕ್ಕೆ ವೈಜ್ಞಾನಿಕ ಕಾರಣಗಳನ್ನು ಕೊಡಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಶಿವಮೂರ್ತಿ ಅವರಿಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗವು ಸನ್ಮಾನಿಸಿ ಸಸಿ ಗಿಡವನ್ನು ವಿತರಿಸಿ ಗೌರವಿಸಿದರು. ನಂತರ ವಿಷಯ ಮಂಡಿಸಿದ ಪ್ರಶಿಕ್ಷಣಾರ್ಥಿಗಳಿಗೆ ಸಸಿ ನೀಡಿ ಗೌರವಿಸಿದರು.
ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು., ತ್ರಿವೇದಿ ಪ್ರಾರ್ಥಿಸಿದರು. ಲಕ್ಷ್ಮೀ ಪರಿಸರ ಗೀತೆ ಹಾಡಿದರು. ಎಸ್ ನಾಗವೇಣಿ ಸ್ವಾಗತಿಸಿದರು. ಚೇತನ್ ಕುಮಾರ್ ನಿರೂಪಿಸಿದರು. ರಾಜು ವಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

The post ಪರಿಸರ ಸಂರಕ್ಷಣೆಯಲ್ಲಿ ಬುಡಕಟ್ಟು, ಅಲೆಮಾರಿ, ರೈತಾಪಿ ಜನರ ಪಾತ್ರ ಹಿರಿದಾಗಿದೆ -ಡಾ.‌ಅಶ್ವರಾಮು appeared first on Karnataka Kahale.

]]>
ವಿದ್ಯಾರ್ಥಿಗಳು ಪಠ್ಯದ ಜತೆ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಅಧ್ಯಾಪಕರ ಪ್ರೇರಣೆ ಅಗತ್ಯ -ಶಾಸಕ ನಾರಾ ಭರತ್ ರೆಡ್ಡಿ https://www.karnatakakahale.com/news/19670 Thu, 05 Jun 2025 12:28:57 +0000 https://www.karnatakakahale.com/?p=19670 ಬಳ್ಳಾರಿ, ಜೂ.5: ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜೊತೆಗೆ ಅವರ ಆಸಕ್ತಿಯ ಅನುಸಾರ ಪರಿಸರ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುವಂತೆ ಅಧ್ಯಾಪಕರು ಪ್ರೇರಣೆ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ನಗರದ ವೀ.ವಿ ಸಂಘದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ…

The post ವಿದ್ಯಾರ್ಥಿಗಳು ಪಠ್ಯದ ಜತೆ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಅಧ್ಯಾಪಕರ ಪ್ರೇರಣೆ ಅಗತ್ಯ -ಶಾಸಕ ನಾರಾ ಭರತ್ ರೆಡ್ಡಿ appeared first on Karnataka Kahale.

]]>

ಬಳ್ಳಾರಿ, ಜೂ.5: ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜೊತೆಗೆ ಅವರ ಆಸಕ್ತಿಯ ಅನುಸಾರ ಪರಿಸರ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುವಂತೆ ಅಧ್ಯಾಪಕರು ಪ್ರೇರಣೆ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ವೀ.ವಿ ಸಂಘದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ, ಪರಿಸರ ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ, ಹೀಗಾಗಿ ಮರಗಳನ್ನು ಬೆಳೆಸುವ ಪರಿಪಾಠ ಹೆಚ್ಚಾಗಬೇಕು ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಸಾಮಾಜಿಕ ಕಾಳಜಿಯ ಕೆಲಸಗಳಲ್ಲಿ ತೊಡಗಿಕೊಂಡರೆ ಅವರ ವ್ಯಕ್ತಿತ್ವವೂ ಕೂಡ ರೂಪುಗೊಳ್ಳುತ್ತದೆ ಎಂದರು.


ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದಾಗಿ ಇಂದು ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ನಾರಾ ಶರತ್ ರೆಡ್ಡಿ, ರತ್ನಬಾಬು, ಇರ್ಫಾನ್, ಟಿಲ್ಲು ಮೊದಲಾದವರ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು.
ಮಹಾನಗರ ಪಾಲಿಕೆಯ ಇಇ ಮಲ್ಲನಗೌಡ ಮಾತನಾಡಿ, ‘ಸಾಮಾಜಿಕ ಕಾಳಜಿಯಿಂದ ನಗರದಲ್ಲಿ ನೆಡಲಾದ ಮರ ಗಿಡಗಳಿಗೆ ನೀರು ಹಾಕಿ ಸಂರಕ್ಷಣೆ ಮಾಡಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರೂಪಿಸಿರುವ ಮಿಯಾವೊಕಿ ಫಾರೆಸ್ಟ್ ಮಾದರಿಯ ಒಂದು ಎಕರೆ ಜಾಗದಲ್ಲಿ ಹಸಿರು ತಾಣ (One Acre Oxygen) ನಿರ್ಮಿಸುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಶರಣಕುಮಾರ್, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಣೇಕಲ್ ಮಹಾಂತೇಶ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಚಾನಾಳ್ ಶೇಖರ್, ಯಾಳ್ಪಿ ಪೊಂಪನಗೌಡ, ಚೋರನೂರು ಕೊಟ್ರಪ್ಪ, ಬಿಆರೆಲ್ ಸೀನಾ, ಪಲ್ಲೇದ ಪ್ರಭುಲಿಂಗ, ಕೋರಿ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಇದ್ದರು.
—–

The post ವಿದ್ಯಾರ್ಥಿಗಳು ಪಠ್ಯದ ಜತೆ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಅಧ್ಯಾಪಕರ ಪ್ರೇರಣೆ ಅಗತ್ಯ -ಶಾಸಕ ನಾರಾ ಭರತ್ ರೆಡ್ಡಿ appeared first on Karnataka Kahale.

]]>
ಬಳ್ಳಾರಿ: ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ https://www.karnatakakahale.com/news/16555 Thu, 20 Jun 2024 17:49:24 +0000 https://www.karnatakakahale.com/?p=16555 ಬಳ್ಳಾರಿ, ಜೂ.20: ನಗರದ ಎಸ್.ಎಸ್.ಎ (ಸರಳಾದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಇಕೋ ಕ್ಲಬ್‌ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ಹೆಚ್ ಸೂರ್ಯವಂಶಿ‌…

The post ಬಳ್ಳಾರಿ: ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ appeared first on Karnataka Kahale.

]]>

ಬಳ್ಳಾರಿ, ಜೂ.20: ನಗರದ ಎಸ್.ಎಸ್.ಎ (ಸರಳಾದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಇಕೋ ಕ್ಲಬ್‌ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ಹೆಚ್ ಸೂರ್ಯವಂಶಿ‌ ಅವರು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡುವವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ‌ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಇಕೋ ಕ್ಲಬ್‌ ಸಂಚಾಲಕ ಡಾ.ಜಿ.ಪ್ರಹ್ಲಾದ್‌ ಚೌದ್ರಿ ಅವರು ವಿ‍ಶ್ವ ಪರಿಸರ ದಿನಾಚರಣೆಯ ಮಹತ್ವದ ಕುರಿತು ವಿವರಿಸುತ್ತಾ,
ಕೇರಳದ ಕಾಸರಗೋಡಿನ ಸುತ್ತಮುತ್ತ ಗೋಡಂಬಿ ತೋಟಗಳಲ್ಲಿ ಸಿಂಪಡಿಸಿದ ಎಂಡೋಸಲ್ಫಾನ್‌ ದುಷ್ಪರಿಣಾಮವನ್ನು ಪ್ರಸ್ತುತ ದಿನಗಳಲ್ಲೂ ಅಲ್ಲಿನ ಜನತೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥರೆಡ್ಡಿ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಹೊಣೆ ವಿದ್ಯಾರ್ಥಿ, ಯುವ ಜನರ ಮೇಲಿದೆ ಎಂದು ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎನ್.‌ಎಸ್.‌ಎಸ್.‌ ಕಾರ್ಯಕರ್ತನಾಗಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಎನ್.‌ಎಸ್.‌ಎಸ್.‌ಗೀತೆಯನ್ನು ಹಾಡುವ ಮೂಲಕ‌ ಗಮನ ಸೆಳೆದರು.
ಎನ್.‌ಎಸ್.‌ಎಸ್. ಕಾರ್ಯಕ್ರಮಾಧಿಕಾರಿ ಶ್ರೀಮತಿ ರಮಾದೇವಿ ಅವರು ನಾವು ಏಕೆ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಎನ್.ಎಸ್.ಎಸ್.‌ ವಿದ್ಯಾರ್ಥಿನಿಯಾದ ಕುಮಾರಿ ಹೇಮಾ ಮತ್ತು ಕುಮಾರಿ ರೋಹಿಣಿ ಅವರು ಪ್ರಾರ್ಥಿಸಿದರು. ನಂತರ ಎನ್.‌ಎಸ್.‌ಎಸ್.‌, ಗೀತೆಯನ್ನು ಕುಮಾರಿ ರಾಜೇಶ್ವರಿ ಮತ್ತು ತಂಡ ಹಾಡಿದರು. .
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಮತ್ತು ಬಿ ಘಟಕದ ಕಾರ್ಯಕ್ರಮಾಧಿಕಾರಿ ಬಿ.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಎನ್.‌ಎಸ್.‌ಎಸ್. ಮತ್ತೋರ್ವ‌ ಕಾರ್ಯಕ್ರಮ ಅಧಿಕಾರಿ ಡಾ.ಚನ್ನಬಸವಯ್ಯ ಅವರು ಸ್ವಾಗತಿಸಿದರು. ಎನ್.‌ಎಸ್.‌ಎಸ್.‌, ಕಾರ್ಯಕ್ರಮಾಧಿಕಾರಿ ಎನ್.ಗಂಟೆಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್.ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ರಾಜೇಶ್ವರಿ ವಂದಿಸಿದರು.
———

The post ಬಳ್ಳಾರಿ: ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ appeared first on Karnataka Kahale.

]]>
🌞🚶‍♂️🌳 ಮಂಜು ಮುತ್ತಿದ ಮುಂಜಾವದಲಿ, ನಡಿಗೆಯೂ ಧ್ಯಾನವಾಗುವ ಕ್ಷಣ 🌞 -ಪ್ರೊ.ಎಸ್. ಎಂ ಶಶಿಧರ್, ಬಳ್ಳಾರಿ🚶‍♂️🌳 https://www.karnatakakahale.com/news/14971 https://www.karnatakakahale.com/news/14971#comments Mon, 25 Dec 2023 05:44:17 +0000 https://www.karnatakakahale.com/?p=14971 ಈಗೀಗ ಸೂರ್ಯನೂ ಲೇಟ್ ಲತೀಫನಾಗಿದ್ದಾನೆ! ಚಳಿಗೆ ಅವನೂ ವುಲನ್ ಬ್ಲಾಂಕೆಟ್ ಹೊದ್ದು ಮಲಗಿದ್ದಾನೋ, ಏನೋ! ಬೆಳಗ್ಗೆ ಏಳು ಗಂಟೆಯಾಯಿತೆಂದರೆ ಲೋಕದ ಸಮಸ್ತ ಚಟುವಟಿಕೆಗಳೂ ಶುರುವಾಗಿಬಿಡುತ್ತವೆ. ಮೊಬೈಲ್ ರಿಂಗಣಿಸಲಾರಂಭಿಸುತ್ತದೆ. ಅದಕ್ಕೆ ಮುನ್ನವೇ ನಾನು ವಾಕಿಂಗ್ ಮುಗಿಸಬೇಕು. ಅತ್ಯಂತ ಖಾಸಗಿ ಮತ್ತು ಏಕಾಂತದ ಕ್ಷಣಗಳು,…

The post 🌞🚶‍♂️🌳 ಮಂಜು ಮುತ್ತಿದ ಮುಂಜಾವದಲಿ, ನಡಿಗೆಯೂ ಧ್ಯಾನವಾಗುವ ಕ್ಷಣ 🌞 -ಪ್ರೊ.ಎಸ್. ಎಂ ಶಶಿಧರ್, ಬಳ್ಳಾರಿ🚶‍♂️🌳 appeared first on Karnataka Kahale.

]]>

ಈಗೀಗ ಸೂರ್ಯನೂ ಲೇಟ್ ಲತೀಫನಾಗಿದ್ದಾನೆ! ಚಳಿಗೆ ಅವನೂ ವುಲನ್ ಬ್ಲಾಂಕೆಟ್ ಹೊದ್ದು ಮಲಗಿದ್ದಾನೋ, ಏನೋ! ಬೆಳಗ್ಗೆ ಏಳು ಗಂಟೆಯಾಯಿತೆಂದರೆ ಲೋಕದ ಸಮಸ್ತ ಚಟುವಟಿಕೆಗಳೂ ಶುರುವಾಗಿಬಿಡುತ್ತವೆ. ಮೊಬೈಲ್ ರಿಂಗಣಿಸಲಾರಂಭಿಸುತ್ತದೆ. ಅದಕ್ಕೆ ಮುನ್ನವೇ ನಾನು ವಾಕಿಂಗ್ ಮುಗಿಸಬೇಕು. ಅತ್ಯಂತ ಖಾಸಗಿ ಮತ್ತು ಏಕಾಂತದ ಕ್ಷಣಗಳು, ತಾಜಾತನದ ಮತ್ತು ಧ್ಯಾನದ ಕ್ಷಣಗಳೆಂದರೆ ಸೂರ್ಯೋದಯಕ್ಕೆ ಮುನ್ನದ ಅಮೃತ ಗಳಿಗೆಗಳು. ಅವು ಅತ್ಯಂತ ಅಮೂಲ್ಯ ಕ್ಷಣಗಳು. ಅವುಗಳನ್ನು ಕಳೆದುಕೊಂಡ ಮನುಷ್ಯ, ಇಡೀ ದಿನ ಅವುಗಳಿಗಾಗಿ ಹುಡುಕುತ್ತಿರುತ್ತಾನಂತೆ!

ಇಂದು(ಡಿ.25) ಬೆಳಿಗ್ಗೆ ಎದ್ದಾಗ ಐದೂವರೆ ಆಗಿತ್ತು. ವಾಕಿಂಗ್ ಮಾಡಿ ಬಂದು ಬಿಡೋಣ ಅಂತ ಬೈಕಲ್ಲಿ ಹೋಗಿ ವಾಕಿಂಗ್ ಲೇಔಟನ್ನ ತಲುಪಿದೆ. ಯಾರೊಬ್ಬರ ಸುಳಿವೂ ಇಲ್ಲ. ನಾನೇನಾದರೂ ಕನ್ಫ್ಯೂಸ್ ಆಗಿ ನಟ್ಟಿರುಳ ರಾತ್ರಿಯಲ್ಲಿ ಹೀಗೆ ವಾಕಿಂಗಿಗೆ ಬಂದುಬಿಟ್ಟೆನೆ! ನಾನು ಹೀಗೆ ಇಲ್ಲಿ ಬಿರುಸಾಗಿ ವಾಕಿಂಗ್ ಮಾಡುವುದನ್ನು ನೋಡಿದರೆ ಭೂತ ಪ್ರೇತ ಎಂದು ಯಾರಾದರೂ ಹೆದರಿಕೊಂಡುಬಿಟ್ಟರೆ! ಹೀಗೆ ಹೊಸಪೇಟೆಯಿಂದ ಹಂಪಿಗೆ ಅದೆಷ್ಟೋ ಸಲ ನಾಲ್ಕು ಗಂಟೆಗೇ ಎದ್ದು ಹೋದದ್ದಿದೆ. ಮನೆಯಿಂದ ಹೊರಟೆನೆಂದರೆ ಬೈಕ್ ನಿಲ್ಲುತ್ತಿದ್ದುದೇ ಹಂಪಿಯ ಕೃಷ್ಣ ಮಂದಿರದ ಮುಂದೆ. ಅಷ್ಟು ಕಾರ್ಗತ್ತಲ ರಾತ್ರಿಯಲ್ಲಿ, ಬೀಸುವ ತಂಪು ಗಾಳಿಯಲ್ಲಿ ಅಲ್ಲಿಗೆ ಹೇಗೆ ಬಂದು ತಲುಪಿದೆನೋ ಎಂದು ನಾನು ಅಚ್ಚರಿಗೊಂಡದ್ದೂ ಉಂಟು. ಕೃಷ್ಣ ಮಂದಿರದ ಮುಂದಿರುವ ಪುರಾತನ ಕೊಳದ ಮೆಟ್ಟಿಲುಗಳ ಮೇಲೆ ಕಾಲು ಚಾಚಿ ಕುಳಿತು ಸೂರ್ಯೋದಯವನ್ನು ವೀಕ್ಷಿಸುವ ಅನುಭವ, ಆ ಕೃಷ್ಣದೇವರಾಯನಿಗೂ ದಕ್ಕಿತೋ ಇಲ್ಲವೋ! ಹಂಪಿಯಲ್ಲಿ ಮಂಜಾವವೆಂದರೆ ಅದ್ಭುತ, ಅವಿಸ್ಮರಣೀಯ!

ಊರ ಹೊರವಲಯದ ಹೊಸ ಲೇಔಟ್ ಗಳು ವಾಕಿಂಗ್‍ಗೆ ಹೇಳಿ ಮಾಡಿಸಿದ ತಾಣಗಳು. ಮೊಬೈಲ್ ನಲ್ಲಿ ಸಮಯ ನೋಡಿಕೊಂಡೆ. 5.40 ಆಗಿತ್ತು. ಈಗ ಸೂರ್ಯೋದಯ ಆಗುವುದೇ ಆರು ನಲವತ್ತಕ್ಕೆ. 20 ನಿಮಿಷ ಬೀದಿ ದೀಪಗಳ ಕೆಳಗೆ ವಾಕಿಂಗ್ ಮಾಡುತ್ತಿದ್ದಂತೆ, ಆಕಾಶದಲ್ಲಿ ಬೆಳಕು ಗೋಚರವಾಗತೊಡಗಿತ್ತು. ಇವತ್ತು ಹೊಗೆ ಮಂಜು ಕವಿದಿತ್ತು. ದೆಹಲಿಯಲ್ಲಿ ಇದು ಸಾಮಾನ್ಯ. ಆದರೆ ಬಳ್ಳಾರಿಯಲ್ಲಿ ಅಪರೂಪವೇ. ಒಂದು ತಾಸಿಗೂ ಹೆಚ್ಚು ಕಾಲ ವಾಕಿಂಗ್ ಮಾಡಿದೆ. ನನ್ನ ಪೆಡೊಮೀಟರ್ ಆಪ್ 6 ಕಿ.ಮೀ ತೋರಿಸಿತು. ಮುಂಜಾನೆಯ ಮಧುರ ಕ್ಷಣಗಳು, ದಿನದ ಸಾರ್ಥಕತೆಗೆ ಮುನ್ನುಡಿ ಬರೆಯುತ್ತವೆ. ಮುಂಜಾನೆಯನ್ನ ಯಾವತ್ತೂ ಮಿಸ್ ಮಾಡಿಕೊಳ್ಳಬೇಡಿ ❤


-ಪ್ರೊ.ಎಸ್.ಎಂ ಶಶಿಧರ್, ಬಳ್ಳಾರಿ
🌄🚴‍♂️🌅💚☘✨🚶‍♂️

The post 🌞🚶‍♂️🌳 ಮಂಜು ಮುತ್ತಿದ ಮುಂಜಾವದಲಿ, ನಡಿಗೆಯೂ ಧ್ಯಾನವಾಗುವ ಕ್ಷಣ 🌞 -ಪ್ರೊ.ಎಸ್. ಎಂ ಶಶಿಧರ್, ಬಳ್ಳಾರಿ🚶‍♂️🌳 appeared first on Karnataka Kahale.

]]>
https://www.karnatakakahale.com/news/14971/feed 1
ಉಪನ್ಯಾಸಕ ಅಂಬಳಿ ವೀರೇಂದ್ರರ ಅನನ್ಯ ಪರಿಸರ ಪ್ರೇಮ: ಪುತ್ರನ ನಾಮಕರಣ ಸಮಾರಂಭದಲ್ಲಿ ಅತಿಥಿಗಳಿಗೆ ಸಸಿ ವಿತರಣೆ https://www.karnatakakahale.com/news/13720 Wed, 20 Sep 2023 16:32:53 +0000 https://www.karnatakakahale.com/?p=13720 ಹೊಸಪೇಟೆ, ಸೆ.20: ಸಮೀಪದ ಮುನಿರಾಬಾದ್ ನ ವಿಜಯನಗರ ಪಪೂ ಕಾಲೇಜಿನ ಉಪನ್ಯಾಸಕ ಅಂಬಳಿ ವೀರೇಂದ್ರ  ಮತ್ತು  ಸಂಗೀತಾ  ದಂಪತಿ ತಮ್ಮ ಪುತ್ರನ ನಾಮಕರಣಕ್ಕೆ ಆಗಮಿಸಿದ ಬಂಧು‌ಮಿತ್ರರಿಗೆ, ಅತಿಥಿಗಳಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ…

The post ಉಪನ್ಯಾಸಕ ಅಂಬಳಿ ವೀರೇಂದ್ರರ ಅನನ್ಯ ಪರಿಸರ ಪ್ರೇಮ: ಪುತ್ರನ ನಾಮಕರಣ ಸಮಾರಂಭದಲ್ಲಿ ಅತಿಥಿಗಳಿಗೆ ಸಸಿ ವಿತರಣೆ appeared first on Karnataka Kahale.

]]>

ಹೊಸಪೇಟೆ, ಸೆ.20: ಸಮೀಪದ ಮುನಿರಾಬಾದ್ ನ ವಿಜಯನಗರ ಪಪೂ ಕಾಲೇಜಿನ ಉಪನ್ಯಾಸಕ ಅಂಬಳಿ ವೀರೇಂದ್ರ  ಮತ್ತು  ಸಂಗೀತಾ  ದಂಪತಿ ತಮ್ಮ ಪುತ್ರನ ನಾಮಕರಣಕ್ಕೆ ಆಗಮಿಸಿದ ಬಂಧು‌ಮಿತ್ರರಿಗೆ, ಅತಿಥಿಗಳಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹೋದ್ಯೋಗಿ ಮಿತ್ರ ದೈಹಿಕ ಶಿಕ್ಷಣ ಶಿಕ್ಷಕ ತಿರುಪತಿ ಇವರು ಬಂದ ಅತಿಥಿಗಳಿಗೆ ವಿವಿಧ ಬಗೆಯ ಸಸಿಗಳನ್ನು ಉಡುಗೊರೆಯಾಗಿ ನೀಡಲು ವ್ಯವಸ್ಥೆಗೊಳಿಸಿದ್ದರು.
ಆಧುನಿಕತೆಯ ಕಾಲಘಟ್ಟದಲ್ಲಿ ವಿವಿಧ ಶುಭ ಸಮಾರಂಭಗಳಲ್ಲಿ ಬಂದ ಅತಿಥಿಗಳಿಗೂ  ಬಟ್ಟೆ, ಸ್ಟೀಲ್,  ಬೆಳ್ಳಿ ಆಭರಣ, ವಿವಿಧ ಪರಿಕರದ ಬಾಕ್ಸ್‌ ಗಳನ್ನು  ಉಡುಗೊರೆಯಾಗಿ ನೀಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಆದರೆ ವೀರೇಂದ್ರ ಅವರು ಪುತ್ರನ ನಾಮಕರಣದಲ್ಲಿ ಪರಿಸರ ಜಾಗೃತಿಗಾಗಿ ಸಸಿಗಳನ್ನು ನೀಡಿದ್ದು ಇತರರಿಗೆ ಮಾದರಿಯಾಗಿದೆ.


ಅತಿಥಿಗಳಿಗೆ ದಾಸವಾಳ, ಕಾಡ ಮಂಡಲ,ಅಶೋಕ, ಮಲ್ಲಿಗೆ,ಬೇವಿನಮರ,ಕರೆಬೇವು, ಗ್ರೀನ್‌ ಪಾಕ್‌ ಸೇರಿದಂತೆ ವಿವಿಧ ಜಾತಿಗಳ 150ಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ವಿತರಣೆ ಮಾಡಿ ಅವುಗಳನ್ನು ನೆಟ್ಟು ಪೋಷಣೆ ಮಾಡುವಂತೆ ಮನವಿ ಮಾಡಿದ್ದು ಗಮನ ಸೆಳೆಯಿತು.
ಕೌಟುಂಬಿಕ ನಾಮಕರಣ, ವಿವಾಹ, ನಿಶ್ಚಿತಾರ್ಥ ಮುಂತಾದ ಕಾರ್ಯಕ್ರಮಗಳಲ್ಲೂ ಸಸಿಗಳನ್ನು ಬರುವ ಅತಿಥಿಗಳಿಗೆ  ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ ಎಂದು ಉಪನ್ಯಾಸಕ ತಿರುಪತಿ ಮನವಿ ಮಾಡಿದರು..
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಬಸವರಾಜ, ಎಸ್.ಬಿ.ಬಿ.ಎನ್. ಕಾಲೇಜಿನ ಪ್ರಾಚಾರ್ಯ ವಿಶ್ವನಾಥ,ಫಕ್ಕೀರಪ್ಪ, ಉಪನ್ಯಾಸಕರಾದ ಟಿ.ದೇವಪ್ಪ, ಮಲ್ಲಿಕಾರ್ಜನ್‌ ಬಿದರಕುಂದಿ, ಮಲ್ಲಿಕಾರ್ಜನ್‌ ಇಟ್ಟಗಿ, ತಿರುಪತಿ ನಾಯಕ,  ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ, ಮುಖ್ಯ ಶಿಕ್ಷಕ ಶಿವಪ್ರಕಾಶ್,ಹಿರಿಯ ಅರೋಗ್ಯ ನಿರೀಕ್ಷಕ ಜಿ.ಸೋಮಶೇಖರ್, ಮಲ್ಲಿಕಾರ್ಜುನ, ಮಂಜಣ್ಣ, ಉಪನ್ಯಾಸಕರಾದ ಕೊಟ್ರೇಶ,ಸವಿತಾ, ಪವಿತ್ರ, ಕವಿತಾ, ಬಾಬುಸಿಂಗ್,ನವೀನ, ಅಂಜಿನಪ್ಪ,ಹೆಚ್,ಗಣೇಶ,ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಹಂಪಾಪಟ್ಟಣ ಎ.ಕೇಶವಮೂರ್ತಿ, ಮಂಜುನಾಥ, ಮಾರುತಿ,ಪ್ರಭು ಕುಮಾರ, ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.
ವೀರೇಂದ್ರ ಅಂಬಳಿ ಅವರು‌ ಮೂಲತಃ ಹಂಪಾಪಟ್ಟಣ ಗ್ರಾಮದವರು. ದಶಕಗಳ ಕಾಲ ಪ್ರಜಾವಾಣಿ ಪತ್ರಿಕಾ ವಿತರಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
—–

The post ಉಪನ್ಯಾಸಕ ಅಂಬಳಿ ವೀರೇಂದ್ರರ ಅನನ್ಯ ಪರಿಸರ ಪ್ರೇಮ: ಪುತ್ರನ ನಾಮಕರಣ ಸಮಾರಂಭದಲ್ಲಿ ಅತಿಥಿಗಳಿಗೆ ಸಸಿ ವಿತರಣೆ appeared first on Karnataka Kahale.

]]>
ಬಳ್ಳಾರಿಯಲ್ಲಿ ವಿಶ್ವ ಪರಿಸರ ದಿನಾಚರಣೆ: ಸ್ವಚ್ಚ ಬಳ್ಳಾರಿ, ಸುಂದರ ಬಳ್ಳಾರಿಗೆ ವಿಶೇಷ ಒತ್ತು – ಸಚಿವ ಬಿ.ನಾಗೇಂದ್ರ https://www.karnatakakahale.com/news/12360 Mon, 05 Jun 2023 13:07:33 +0000 https://www.karnatakakahale.com/?p=12360 ಬಳ್ಳಾರಿ,ಜೂ.5:ಸ್ವಚ್ಚ ಬಳ್ಳಾರಿ, ಸುಂದರ ಬಳ್ಳಾರಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಯುವ ಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಳ್ಳಾರಿ ಅರಣ್ಯ ವಿಭಾಗ ಮತ್ತು ಮುನಿಸಿಪಲ್ ಕಾಲೇಜು…

The post ಬಳ್ಳಾರಿಯಲ್ಲಿ ವಿಶ್ವ ಪರಿಸರ ದಿನಾಚರಣೆ: ಸ್ವಚ್ಚ ಬಳ್ಳಾರಿ, ಸುಂದರ ಬಳ್ಳಾರಿಗೆ ವಿಶೇಷ ಒತ್ತು – ಸಚಿವ ಬಿ.ನಾಗೇಂದ್ರ appeared first on Karnataka Kahale.

]]>

ಬಳ್ಳಾರಿ,ಜೂ.5:ಸ್ವಚ್ಚ ಬಳ್ಳಾರಿ, ಸುಂದರ ಬಳ್ಳಾರಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಯುವ ಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಳ್ಳಾರಿ ಅರಣ್ಯ ವಿಭಾಗ ಮತ್ತು ಮುನಿಸಿಪಲ್ ಕಾಲೇಜು ಸಹಯೋಗದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳ ರೂಪು ರೇಷೆಗಳನ್ನು ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಹಸರೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸುಮಾರು 10 ಲಕ್ಷ ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಅಭಿಯಾನ ಕೈಗೊಳ್ಳಲಾಗಿದೆ ಮತ್ತು ಅವುಗಳ ಸಂರಕ್ಷಣೆಗೂ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ Ptsd ಗಿಡವನ್ನು ನೆಡುವುದರ ಮೂಲಕ ಅದನ್ನು ಪೋಷಿಸಬೇಕು. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ನಗರವನ್ನು ಸ್ವಚ್ಛ ಹಾಗೂ ತ್ಯಾಜ್ಯ ಮುಕ್ತ ನಗರವನ್ನಾಗಿಸಲು ಮಹಾನಗರ ಪಾಲಿಕೆಯು ನಗರದ ವಿವಿಧೆಡೆ 10 ಆರ್‍ಆರ್‍ಆರ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಮರು ಬಳಕೆಯಾಗುವಂತಹ ವಸ್ತುಗಳನ್ನು ಆ ಕೇಂದ್ರಗಳಿಗೆ ನೀಡಬೇಕು. ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.


ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯದ ಕಟ್ಟೆ ಕಡೆಯ ಭಾಗಕ್ಕೂ ಅಲೆದು, ಜನರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕ್ರೀಡಾ ವಲಯದಲ್ಲಿ ಯುವ ಜನ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಜಿಲ್ಲೆಯು ಪ್ರಥಮವಾಗಿದ್ದು, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೇಟ್ ಸ್ಟೇಡಿಯಂ ನಿರ್ಮಿಸಬೇಕೆಂಬ ಸಂಕಲ್ಪವಿದೆ ಎಂದು ಹೇಳಿದರು.
ನಗರ ಶಾಸಕ ಭರತ್‍ರೆಡ್ಡಿ ಅವರು ಮಾತನಾಡಿ, ಬಳ್ಳಾರಿ ನಗರದಲ್ಲಿ ಬೇಸಿಗೆಯಲ್ಲಿ ಅತಿ ಹೆಚ್ಚು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ ತಾಪಮಾನ ನಿಯಂತ್ರಿಸುವ ಸಲುವಾಗಿ ನಗರದಲ್ಲಿ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸ್ವಚ್ಛ ಬಳ್ಳಾರಿ ಹಾಗೂ ಸುಂದರ ಬಳ್ಳಾರಿಗೆ ಎಲ್ಲಾ ಸಾರ್ವಜನಿಕರು ವಿಶೇಷವಾಗಿ ಯುವಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಡಾ.ಸೈಯದ್ ನಾಸೀರ್ ಹುಸೇನ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಬಳ್ಳಾರಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಲಾಲ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ರಂಜೀತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್.ಸೂರ್ಯವಂಶಿ, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದಿನ್, ವಲಯ ಅರಣ್ಯಾಧಿಕಾರಿ ಹೆಚ್.ಆರ್. ರಾಘವೇಂದ್ರಯ್ಯ, ಕಾಲೇಜು ಪ್ರಾಂಶುಪಾಲ ಪಿ.ನಾಗೇಶ್ವರ ರಾವ್, ಮಹಾನಗರ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಇದ್ದರು.
—–

The post ಬಳ್ಳಾರಿಯಲ್ಲಿ ವಿಶ್ವ ಪರಿಸರ ದಿನಾಚರಣೆ: ಸ್ವಚ್ಚ ಬಳ್ಳಾರಿ, ಸುಂದರ ಬಳ್ಳಾರಿಗೆ ವಿಶೇಷ ಒತ್ತು – ಸಚಿವ ಬಿ.ನಾಗೇಂದ್ರ appeared first on Karnataka Kahale.

]]>
ನಾಡೋಜ ಸಾಲುಮರದ ತಿಮ್ಮಕ್ಕ ಅವರ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆ -ಸಿಎಂ ಸಿದ್ಧರಾಮಯ್ಯ ಆದೇಶ https://www.karnatakakahale.com/news/12288 Tue, 30 May 2023 07:26:40 +0000 https://www.karnatakakahale.com/?p=12288 ಬೆಂಗಳೂರು, ಮೇ 40:  ಪರಿಸರ ರಾಯಭಾರಿ, ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಸಚಿವ ಸಂಪುಟ ದರ್ಜೆ ಸ್ಥಾನಮಾನ ಮುಂದುವರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು…

The post ನಾಡೋಜ ಸಾಲುಮರದ ತಿಮ್ಮಕ್ಕ ಅವರ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆ -ಸಿಎಂ ಸಿದ್ಧರಾಮಯ್ಯ ಆದೇಶ appeared first on Karnataka Kahale.

]]>

ಬೆಂಗಳೂರು, ಮೇ 40:  ಪರಿಸರ ರಾಯಭಾರಿ, ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ
ಸಚಿವ ಸಂಪುಟ ದರ್ಜೆ ಸ್ಥಾನಮಾನ ಮುಂದುವರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತಾಯಿಯಂತೆ ಪೊರೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಿಮ್ಮಕ್ಕನವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರೆಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಪರಿಸರ ರಾಯಭಾರಿಯಾಗಿಯೂ ನಾಡೋಜ ಸಾಲುಮರದ ತಿಮ್ಮಕ್ಕ ಅವರನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
*****

The post ನಾಡೋಜ ಸಾಲುಮರದ ತಿಮ್ಮಕ್ಕ ಅವರ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆ -ಸಿಎಂ ಸಿದ್ಧರಾಮಯ್ಯ ಆದೇಶ appeared first on Karnataka Kahale.

]]>