ಚಳ್ಳಕೆರೆ ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಗಂಭೀರ ಗಾಯ

ಬಳ್ಳಾರಿ, ಏ.2: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಚಳ್ಳಕೆರೆ ಬಳಿ ಅಪಘಾತ ಹೊಂದಿದ್ದು, ವೀರಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ವೀರಣ್ಣ ಅವರ ಪುತ್ರ, ಸಂಗೀತ ಶಿಕ್ಷಕ ಹನುಮಂತ ಅವರೇ ಕಾರು ಚಾಲನೆ ಮಾಡುತ್ತಿದ್ದು ಇವರಿಗೂ ಗಂಭೀರ ಗಾಯವಾಗಿದೆ.
ನಸುಕಿನ ಜಾವ ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದರು ಎಂದು ವೀರಣ್ಣ ಅವರ ಹಿರಿಯ ಪುತ್ರ ಮಹೇಶ ಬೆಳಗಲ್ಲು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ.

*****

Leave a Reply

Your email address will not be published. Required fields are marked *