ಅನುದಿನ ಕವನ-೧೫೮೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಬಸವ ಜಯಂತಿ

ಬಸವ ಜಯಂತಿ ಕದ್ದು ಕೊಂದು ಹುಸಿಯ ನುಡಿದು ಪರರ ಜರಿದು ನುರಿದು ನುಂಗಿ ತನ್ನ ಬಣ್ಣಿಸಿ ಪರರ ಹಂಗಿಸಿ ನಡೆ ನುಡಿಯ ಭಂಗಿಸಿ ಬಾಳಿದರೂ ವರ್ಷಕ್ಕೊಮ್ಮೆ ಹರುಷದಿಂದ ಪರುಷವಂದು ಕೊಂಡಾಡಿ ಹೂವಿಡುವೆ ಪೊಡಮಡುವೆ! -ಸವಿತಾ ನಾಗಭೂಷಣ, ಶಿವಮೊಗ್ಗ —–

ಅನುದಿನ‌ ಕವನ-೧೫೮೧, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ

ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…

ಅನುದಿನ ಕವನ-೧೫೮೦, ಕವಿ: ಡಾ. ಆನಂದ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ:ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…

ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ… ಆ ಹಾಡ ಸಾಲಿನಂತೆ ಈ ಹೂ ಬಳಿ ಬರೆದೆಯೂ ಎದೆಯ ತಾಕಿ ಹೃದಯದಲ್ಲಿ ಬೇರಿಳಿಸಿ ಸೆಟೆದು ಶಲಾಕಾಗ್ರ ಪಕಳೆಗಳ ಹರಡಿದ್ದಕ್ಕೋ ಏನೋ…. ದುಂಬಿಗಳದೇ ಕಾಟ!! ನಭೋ ಮುಖಿ ನತ್ತ ಈ ಮುತ್ತು ಮತ್ತೆ ಮತ್ತೆ…

ಅನುದಿನ ಕವನ-೧೫೭೯, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ಶಬರಿಯ ಫಲದ ಬರಗೂರರು

ಶಬರಿಯ ಫಲದ ಬರಗೂರರು ತುಂಬಿದ ಕೆರೆ ನದಿ ಹಳ್ಳಗಳಂತೆ ಪ್ರೀತಿ ಹಿಂಗಿದರೂ ನೆಲದ ಪಸೆ ಆರದು ಬಿತ್ತಿದ ಬೀಜಗಳು ಮೊಳಕೆಯೊಡೆದು ಫಸಲಾಗುವುದರ ಕಂಡು ಸಂತಸ ಪಡುವ ಹಕ್ಕಿಬಾಳಿನಂತೆ ಸಾಂಗತ್ಯದ ಪ್ರೀತಿ ಗೂಡು ಕಟ್ಟಿ ಪರಂಪರೆ ಪಿಸು ಮಾತನುಣಿಸಿ ನೊಂದ ಎದೆ ತಾವಿನಲ್ಲಿ…

ಅನುದಿನ ಕವನ-೧೫೭೮, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಸಂವೇದನೆ ಕಡಲು

ಸಂವೇದನೆಯ ಕಡಲು ಮುರಿದಿದೆ ಮೌನದ ಕಡಲು ಇದಕೆ ಸಂವೇದನೆಯ ಕವಲು ಮನದ ವಾದ ಬಡಿತದಿ ಸೋತು ಕಬುರಿಲ್ಲದೆ ಅಳುಕುತಿದೆ…. ಪ್ರತಿ ಗೋಡೆಯು ಹಸನ್ಮುಖಿ ಯಾಗಿ ಕಂಗೊಳಿಸಿ ಪಿಸುಗುಡುತ್ತಿವೆ. ಪ್ರಕೃತಿಯ ದಾರಿಗೆ ಪ್ರತಿ ಎಲೆಯು ಬಿಸಿಲ ಧಗೆಗೆ ಬೆವರುತ್ತಿವೆ.. ನದಿಯ ಅಂಚು ಹೇಳ…

ಅನುದಿನ ಕವನ-೧೫೭೭, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ್, ಶಿವಮೊಗ್ಗ, ಕವನದ ಶೀರ್ಷಿಕೆ: ಎಲ್ಲಿದೆ?

ಎಲ್ಲಿದೆ? ಉಷಾಕಾಲದಲ್ಲಿ ಅವನು ಪ್ರಾರ್ಥಿಸುವುದ ನೋಡಿದೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಪ್ರಾರ್ಥಿಸುವುದನು ನೋಡಿದೆ ಮಧ್ಯಾನ್ಹ ಏರು ಹೊತ್ತಿನಲ್ಲಿ ಪ್ರಾರ್ಥಿಸುವುದ ನೋಡಿದೆ ಸೂರ್ಯ ಮುಳುಗಿದ ಮೇಲೆ ಪ್ರಾರ್ಥಿಸುವುದ ನೋಡಿದೆ ಕತ್ತಲು ಕವಿಯುತ್ತಿರುವಾಗ ಪ್ರಾರ್ಥಿಸುವುದ ನೋಡಿದೆ ಅವನ ನಾಲಗೆ ಸ್ತುತಿಸುವುದನೂ ಅವನ ಹೃದಯ…

ಅನುದಿನ‌ ಕವನ-೧೫೭೬, ಕವಿ: ವೈ ಜಿ ಅಶೋಕ‌ ಕುಮಾರ್, ಬೆಂಗಳೂರು

ದಡದಲ್ಲಿ ಮಲಗಿ ಕನಸುಗಳ ಪೋಣಿಸುವವರಿಗೆ ಕಾಣುವುದೇನು ಕಡಲ ನಡುವಿನ ಹೊಯ್ದಾಟದ ಬದುಕು ಹಡಗು ಮುಳುಗಿದ್ದ ಕಂಡು ಅಂಜಬೇಡ ದೋಣಿ ತೂತಾಗಿದೆಯೆಂದು ಕೊರಗಬೇಡ ಅದರಲ್ಲೇ ಪಯಣಿಸಬೇಕಿದೆ ಬಹಳಷ್ಟು ದೂರ ನಾನು ನೀನು ಎಷ್ಟು ಕೂಡಿಟ್ಟರೂ ಯಾವ ಗುರುತುಗಳೂ ನಮಗಾಗಿ ಇಲ್ಲಿ ಉಳಿಯುವುದಿಲ್ಲ -ವೈ…

ಅನುದಿನ ಕವನ-೧೫೭೫, ಹಿರಿಯ ಕವಿ: ಮಹಿಮ, ಬಳ್ಳಾರಿ

ಇದು ಮಹಾತಿರುವು ತಿರುವು ದಾಟಿದರೆ ಸತ್ಯ,ನ್ಯಾಯ ,ಧರ್ಮಗಳ ಪುಣ್ಯ ಲೋಕ.. ಇಲ್ಲಿಯವರೆಗೆ ಬಂದಿದ್ದೀರಿ ಇನ್ನೂ ನಾಲ್ಕು ಹೆಜ್ಜೆ ಹಾಕಿಬಿಡಿ ಬರೀ ನಾಲ್ಕೇ ನಾಲ್ಕು ಹೆಜ್ಜೆ.. ಅಲ್ಲಿ ಸ್ವಾರ್ಥ ಮೋಸ, ದ್ರೋಹ ಹಿಂಸೆಗಳು ಇಲ್ಲವೇ ಇಲ್ಲ ಅಲ್ಲಿ ನೆಮ್ಮದಿಯಿಂದ ಬದುಕ ಸಾಗಿಸೋಣ ಬನ್ನಿ‌..…

ಅನುದಿನ‌ ಕವನ-೧೫೭೪, ಕವಿ: ಬಂಜಗೆರೆ ನಾಗೇಂದ್ರ, ಬಳ್ಳಾರಿ, ಕವನದ ಶೀರ್ಷಿಕೆ: ಸಲಹು ಸಲಹಿದ ಭೂಮಿಯ..

🍀🌺💐🌹ಎಲ್ಲರಿಗೂ ವಿಶ್ವ ಭೂ ದಿನಾಚರಣೆಯ ಶುಭಾಶಯಗಳು🍀🌺🍀💐🌹 ಸಲಹು ಸಲಹಿದ ಭೂಮಿಯ.. ನೋಡು ಬಾ ಭೂರಮೆಯ ಸಿಂಗಾರ.. ಹಾಸಿಹಳು ಹಸಿರ ಹಾಸಿಗೆ ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು ಭೂತಾಯ ಮಡಿಲು ಬರಿದಲ್ಲ ಜೀವಿಗಳಿಗೆ ಆಗಿಹಳು ಸರ್ವಸ್ವ.. ಸಲುಹುತಿಹಳು ಸಕಲಜೀವರಾಶಿಗಳ .. ಧರೆಗಾಗಿ…

ಅನುದಿನ ಕವನ-೧೫೭೩, ಕವಿ: ಡಾ.‌ನಿಂಗಪ್ಪ‌ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಧಾರವಾಡದ ಮಳೆ

ಧಾರವಾಡದ ಮಳೆ ಧಾರವಾಡದ ಮಳೆ ಎಂದರೆ ಭೂಮಿ ಆಕಾಶವ ಒಂದು ಮಾಡಿದಂತೆ ಮಳೆಯನ್ನೊತ್ತ ಗಾಳಿ ಗಿಡ ಮರಗಳನ್ನೆಲ್ಲಾ ಮೈ ಕೊಡವಿ ಎಬ್ಬಿಸಿದಂತೆ ಸಮುದ್ರದಲೆ ನೀರ್ಗಲ್ಲಿಗೆ ಅಪ್ಪಳಿಸಿದಂತೆ ರಭಸವೋ ರಭಸ! ಇಳಿದು ಬಾ ತಾಯೆ ಎಂದು ಮೃದುವಾಗಿ ಕೇಳಿದರೆ ಕೇಳುವ ಮಗಳಲ್ಲ ಬಿಡು…