“ಇದು ನೊಂದ ಜೀವಗಳ ವೇದನೆ ನಿವೇದನೆಗಳ ಅಂತರಂಗ ತಲ್ಲಣಗಳ ಆರ್ದ್ರ ಕವಿತೆ. ಕುಸಿದ ಆಂತರ್ಯದೊಳಗಿಣ ಸೂಕ್ಷ್ಮ ಸಂವೇದನೆಗಳ ಅಶ್ರುರಿಂಗಣಗಳ ಭಾವಗೀತೆ. ಇದು ನಮ್ಮ ನಿಮ್ಮದೇ ಬದುಕಿನ ಸಂಕಷ್ಟ ಘಟ್ಟಗಳ ಸ್ವಾನುಭವವೂ ಹೌದು. ಸುತ್ತ ಕಾಣುವ ಸೋತ ಬದುಕುಗಳ ಸತ್ಯಾನುಭವವೂ ಹೌದು. ಯುಗ…
Category: ಅನುದಿನ ಕವನ
ಅನುದಿನ ಕವನ-೧೮೦೩, ಮೂಲ : ಅನಾಮಿಕ ಕವಿಯತ್ರಿ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
ನಾನು ಎಲ್ಲವನ್ನೂ ಹುಡುಕಿಕೊಳ್ಳುವೆ ಕರವಸ್ತ್ರ, ವಾಚು, ಪಾದರಕ್ಷೆ, ಪುಸ್ತಕ ಪಿನ್, ಸೂಜಿ ಕಳೆದುಹೋದ ಕಿವಿಯ ಓಲೆ………. ಅಲ್ಲಿ ಇಲ್ಲಿ ಇಟ್ಟ ಕೀ……… ಎಲ್ಲವನ್ನೂ………… ಮನೆಯಲ್ಲಿ ಯಾರಿಗೂ ಸಿಗದ ಪ್ರತಿಯೊಂದು ವಸ್ತುವನ್ನೂ ನಾನು ಹುಡುಕುತ್ತೇನೆ ಆದರೆ ನನಗೆ ಹುಡುಕಲಾಗುತ್ತಿಲ್ಲ ನನ್ನನ್ನು……… ಆದರೆ ಒಂದು…
ಅನುದಿನ ಕವನ-೧೮೦೨, ಕವಯತ್ರಿ: ಸುರಭಿ ರೇಣುಕಾಂಬಿಕೆ, ಬೆಂಗಳೂರು, ಕವನದ ಶೀರ್ಷಿಕೆ: ಶ್ಶ್….! ಸಾವಧಾನ
ಶ್ಶ್…! ಸಾವಧಾನ ಕವಿತೆಗಳಿಗೆ ದಣಿವಾಗಿದೆಯಂತೆ ಓಹ್ ಪಿರಿಯಡ್ಸ್ ಇರಬಹುದಾ ? ಅದು ಹೇಗೆ ಹೇಳುತ್ತೀರಿ ? ಒಂದು ವೇಳೆ ಇನ್ಯಾವುದೋ ಒತ್ತಡ ಇದ್ದರೂ ಇರಬಹುದು ಗಂಟಲಿಗೆ ಸಿಕ್ಕಿಸಿಕೊಂಡಿದ್ದು ಕಣ್ಣುಗಳಲ್ಲಿ ಬಚ್ಚಿಟ್ಟುಕೊಂಡಿದ್ದು ಎದೆಯೊಳಗೆ ಭಾರವಾಗಿಸಿಕೊಂಡಿದ್ದು ದೇಹದ ದಣಿವು ಮೀರಿದ್ದು ಒಟ್ಟಿನಲ್ಲಿ, ಮಾತುಗಳಲ್ಲಿ ಹೇಳಿಕೊಳ್ಳಲಾಗದ್ದು..,…
ಅನುದಿನ ಕವನ-೧೮೦೧, ಕವಿ: ರಮೇಶ ಗಬ್ಬೂರ್, ಗಂಗಾವತಿ, ಕಾವ್ಯ ಪ್ರಕಾರ: ಗಜಲ್ (ಅವನೆಂದರೆ ಹಾಗೆಯೇ….)
ಗಜಲ್ ಅವನೆಂದರೆ ಹಾಗೆಯೇ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮತ್ತೆ ಪ್ರೀತಿಸುತ್ತಾನೆ.. ನಿನ್ನನ್ನಷ್ಟೇ ಅಲ್ಲ ಈ ಜಗದ ಎಲ್ಲರನ್ನು ಸಪ್ಪಳವಾಗದಂತೆ ಪ್ರೀತಿಸುತ್ತಾನೆ.. ಅವನೆಂದರೆ ಹಾಗೆಯೇ ನೋಡುತ್ತಿರುವಂತೆ ತಥಾಗತನ ಕೈಹಿಡಿದು ಬಿಡುತ್ತಾನೆ.. ನೀ ಕೊಸರಿ ಕೊಳ್ಳದಂತೆ ಮೌನವಾಗಿಸಿ ನೀನೇ ಮೋಹಿಸುವಂತೆ ಪ್ರೀತಿಸುತ್ತಾನೆ…. ಅವನೆಂದರೆ ಹಾಗೆಯೇ…
ಅನುದಿನ ಕವನ-೧೮೦೦, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:: ರಮಾಬಾಯಿ ತಾಯೇ…
ರಮಾಬಾಯಿ ತಾಯೇ… ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ// ತ್ಯಾಗಮಯಿ ಪ್ರೇಮಮಯಿ ರಮಾಬಾಯಿ ತಾಯೇ ಸಂವಿಧಾನ ಬಾಳಧ್ಯಾನ ಕಾಪಿಟ್ಟೆ ತಾಯೇ ಓದು ಅರಿವು ಜಲದ ತಿಳಿವು ಸಮಬಲದ ಭೀಮ ನಿಂತ…
ಅನುದಿನ ಕವನ-೧೭೯೯, ಕವಿ: ತರುಣ್ ಎಂ ಆಂತರ್ಯ, ಟಿ. ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ: ನನ್ನ ವಿದಾಯದ ನಂತರ
ನನ್ನ ವಿದಾಯದ ನಂತರ ಎದೆಯು ನೆತ್ತರಲಿ ಕಲ್ಲಾಗಿ ಹೋದಾಗ ನಿಟ್ಟುಸಿರು ಶ್ವಾಸದಿ ಹೊರ ಬಿದ್ದು ಹೃದಯವು ಮತ್ತೆ ಮಿಡಿಯಲಿ ಹಗಲು ಇರುಳು ನೋವು ಭೋರ್ಗರೆದು ಕಡಲಾಗಿ ಹರಿವ ನಿನ್ನ ಕಂಗಳು ಹೊಸದಾದ ಕನಸ ಕಟ್ಟಲಿ ಮೌನದ ಮೊರೆ ಹೋದ ಕೆಂದುಟಿಗಳಿಗೆ ಮುಂಜಾನೆಯ…
ಅನುದಿನ ಕವನ-೧೭೯೮, ಕವಯತ್ರಿ:ಕಾವ್ಯಶ್ರೀ, ಬೆಂಗಳೂರು
ಜೀವ ಉಳಿಸುವ ಒಂದು ಗುಟುಕು ದಾಹ ತೀರಿಸುವ ಒಂದು ಹನಿ ಮುಳುಗಲೀಯದೆ ತೇಲಿಸುವ ಆ ಒಂದು ಹುಲ್ಲು ಕಡ್ಡಿ ಸುಳ್ಳಾದರೂ ಸರಿಯೇ ಒಂದೇ ಒಂದು ಮಾತು ಕೊಡು ಬಿಗಿಯಾಗಬೇಕು ಬಂಧ ಒಂದು ನೂಲು ಕೊಡು ಗೂಡ ನೇಯಬೇಕು ಅದರೊಳಗು ಬೆಳಗಬೇಕು ನಿನ್ನ…
ಅನುದಿನ ಕವನ-೧೭೯೭, ಕವಯತ್ರಿ: ಸುರಭೀ ರೇಣುಕಾಂಬಿಕೆ, ಬೆಂಗಳೂರು
ಸಮಯದ ಅತ್ಯಂತ ದೊಡ್ಡ ಶಕ್ತಿಯೆಂದರೆ, ಅದು ನಿಮ್ಮೊಳಗಿನ ಭಯವನ್ನು ಇಂಚಿಂಚಾಗಿ ಅಳಿಸುತ್ತಾ ಹೋಗುತ್ತದೆ ಮೊದಲಿನ ಹಾಗೆ, ನಿಮಗೆ ಎಲ್ಲಿ ನೀರಾಗಬೇಕು, ಎಲ್ಲಿ ಕಲ್ಲಾಗಬೇಕು ಎನ್ನುವ ಗೊಂದಲ ಇರುವುದಿಲ್ಲ ನೀವು ಇನ್ನೊಬ್ಬರ ಕತೆಯ ಪಾತ್ರಧಾರಿಗಳಾಗಿರುವುದಿಲ್ಲ ನಿಮ್ಮದೇ ಕತೆಯಲ್ಲಿ, ಅವರ ಪಾತ್ರ ಬಂದು ಹೋಗಿರುತ್ತದೆ…
ಅನುದಿನ ಕವನ-೧೭೯೬, ಕವಯತ್ರಿ: ಮಂಜುಳಾ ಹುಲಿಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಅವಳ ಪ್ರೇಮಿಗೆ
ಅವಳ ಪ್ರೇಮಿಗೆ… ಸಂಬಂಧಗಳು ನಿನ್ನ ಕುತ್ತಿಗೆಯ ಸರಪಳಿಯಾದಾಗ ತುಂಡು ಮಾಡು ಲೋಕದ ತಕ್ಕಡಿಗಳಿಗೆಲ್ಲಾ ಕೋಟಿ ತೂತು.. ನಿನ್ನ ತೂಗುವವರ ಲೆಕ್ಕ ಇಂದೇ ಚುಕ್ತ ಮಾಡು… ರೆಕ್ಕೆ ಬಲಿತ ಹಕ್ಕಿ ಉಂಡು ಹಾರಿಹೋಗುವಂತೆ ಹಾರಲಾಗದ ಮನುಷ್ಯನ ಬಂಧಗಳೆಲ್ಲವೂ ಅಕ್ರಮವೇ ಬಂಧಿಯಾಗಬೇಡಾ ಪ್ರೇಮ ರೆಕ್ಕೆ…
ಅನುದಿನ ಕವನ-೧೭೯೫, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಸಾಧ್ಯವಾಗಿಸಿಕೊ ಸಾಧ್ಯವಾದರೆ…
ಸಾಧ್ಯವಾಗಿಸಿಕೊ ಸಾಧ್ಯವಾದರೆ… ನನ್ನನ್ನು ನಿನ್ನ ಆತ್ಮಕ್ಕೆ ಅಂಟಿಸಿಕೊಳ್ಳಲು ನಿನ್ನ ಹೃದಯ ಬಡಿತವಾಗಲು ನಿನ್ನ ನಿಟ್ಟುಸಿರ ಶಬ್ದವಾಗಲು ನಿನ್ನ ನಾಡಿಯೊಳಗಿನ ಮಿಡಿತವಾಗಲು ನಿನ್ನ ಹೊಕ್ಕುಳೊಳಗಿಂದ ಉಬ್ಬುವ ಆಲೋಚನೆಯ ಸಂತತನವಾಗಲು ಆಯಾಚಿತವಾಗಿ ಒದಗಿದೆ ಸಂದರ್ಭ ಯಾವತ್ತಿಗೂ ನೀನು ಕಾಣುವ ಅಸಹಜ ಕನಸಿನ ಸಣ್ಣ ಭಾಗವಾಗಿಸಿಕೊಳ್ಳಲು…
