ಇಟಗಿ ಸಿ.ಅಳ್ಳೆಮ್ಮ ವಿಧಿವಶ

ಕೊಟ್ಟೂರು, ಜೂ.29: ತಾಲೂಕಿನ ತೂಲಹಳ್ಳಿ ಗ್ರಾಮದ ಇಟಗಿ ಸಿ. ಅಳ್ಳೆಮ್ಮ ಅವರು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಳ್ಳೆಮ್ಮ ಅವರಿಗೆ 90 ವರ್ಷ ವಯಸ್ಸಾಗಿತ್ತು. ಪುತ್ರ ಕೃಷಿಕ ಇಟಗಿ ಸಿ. ಕೆಂಚಪ್ಪ, ಪುತ್ರಿಯರಾದ ದಾವಣಗೆರೆಯ ಹಳ್ಳಳ್ಳಿ ಲಲಿತಮ್ಮ, ನಿವೃತ್ತ ಶಿಕ್ಷಕಿ ಇಟಗಿ ಸಿ. ಸುಶೀಲಮ್ಮ, ಆರು ಜನ ಮೊಮ್ಮಕ್ಕಳು, ಏಳು ಜನ ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಳ್ಳೆಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಸ್ವಂತ ಗ್ರಾಮ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಮಂಗಳವಾರ (ಜೂ. 30) ಬೆಳಿಗ್ಗೆ 11 ಗಂಟೆಗೆ ಹಳ್ಳದ ಹೊಲದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಪುತ್ರ ಇಟ್ಟಿಗಿ ಸಿ. ಕೆಂಚಪ್ಪ ತಿಳಿಸಿದ್ದಾರೆ.
—–
