ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆ

ಬಳ್ಳಾರಿ, ಮೇ 3: ಬೂಡಾ ಮಾಜಿ ಅಧ್ಯಕ್ಷ ಹಾಗೂ ರೆಡ್ಡಿ ಜನಸಂಘದ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಅವರು ಬುಧವಾರ ಕಾಂಗ್ರೆಸ್  ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ.   ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್, ಡಿಸಿಸಿ ಅಧ್ಯಕ್ಷ ಮೊಹಮ್ಮದ್ ರಫೀಕ್ ಅವರ ಸಮ್ಮುಖದಲ್ಲಿ  ಪ್ರತಾಪ ರೆಡ್ಡಿ ಅವರು ಕಾಂಗ್ರೆಸ್ ಬಾವುಟ ಹಿಡಿದರು.                           ಜೆಡಿಎಸ್ ಮುಖಂಡರಾಗಿದ್ದ ಪ್ರತಾಪ ರೆಡ್ಡಿ ಅವರು ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರ ಸ್ವಂತ ಚಿಕ್ಕಪ್ಪ. ನಗರದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಪ್ರತಾಪ ರೆಡ್ಡಿ ಅವರ ಪಕ್ಷಕ್ಕೆ ಸೇರಿರುವದರಿಂದ ಕಾಂಗ್ರೆಸ್ ಗೆ ಬಲ ಬಂದಿದೆ ಎಂದು ಭರತ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಕಲ್ಕಂಬ ಪಂಪಾಪತಿ, ಹುಮಾಯೂನ್ ಖಾನ್, ಸತ್ಯಪ್ರಕಾಶ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.                       

Leave a Reply

Your email address will not be published. Required fields are marked *