ಬಳ್ಳಾರಿಯಲ್ಲಿ ನವರಾತ್ರಿ ಉತ್ಸವ ಸಂಭ್ರಮ: ದೇವಿಗೆ ವಿಶೇಷ ಅಲಂಕಾರ

ಬಳ್ಳಾರಿ, ಅ.21: ಇಲ್ಲಿನ ಪಟೇಲ್ ನಗರದ
ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ 8ನೇ ವರ್ಷದ ದಸರಾ ನವರಾತ್ರಿ ಉತ್ಸವದಲ್ಲಿ
7ನೇ ದಿನವಾದ ಶನಿವಾರ ಶ್ರೀ ಸರಸ್ವತಿ ದೇವಿ ಅಲಂಕಾರದಲ್ಲಿ ಶ್ರೀ ಸಣ್ಣ ದುರ್ಗಮ್ಮ ದೇವಿ ಭಕ್ತರ ಗಮನ ಸೆಳೆದಳು.

ನಗರದ ಹವಂಬಾವಿ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪ್ರತಿದಿನವೂ ವಿಶೇಷ ಪೂಜೆ ನಡೆಯುತ್ತಿವೆ.    ಸೋಮವಾರ ಆಯುಧ ಪೂಜೆ, ಮಂಗಳವಾರ ಸಂಜೆ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಬನ್ನಿಮಹಾಂಕಾಳಿ ನೆರವೇರಿಸಲಾಗುವುದು ಎಂದು ದೇವಸ್ಥಾನದ ದಸರಾ ಮಹೋತ್ಸವ ಸಮಿತಿಯ ಶ್ರೀನಿವಾಸ ಚವಡಿಮನಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *