
ಬಳ್ಳಾರಿ, ನ.23: ಇಲ್ಲಿನ ಜನತಾ ಬಜಾರ್ ಆಡಳಿತ ಮಂಡಳಿಗೆ ಪ್ರಸ್ತುತ ನಾಲ್ಕು ಮುಕ್ಕಾಲು ವರ್ಷ ಅವಧಿ ಮುಗಿದಿದೆ ಇನ್ನು ಬಾಕಿ ಉಳಿದಿರುವ 4, 5 ತಿಂಗಳ ಆಡಳಿತ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು
ಅಧ್ಯಕ್ಷಸ್ಥಾನಕ್ಕೆ ವೆಂಕಟೇಶ್ ಹೆಗಡೆ ನಿರೀಕ್ಷೆಯಂತೆ ಒಬ್ವರೇ ನಾಮ ಪತ್ರ ಸಲ್ಲಿಸಿದ್ದರಿಂದ ಇವರ ಆಯ್ಕೆ ಅವಿರೋಧವಾಗಿ ನಡೆಯಿತು.
ಇನ್ನು ಉಪಾಧ್ಯಕ್ಷಸ್ಥಾನಕ್ಕೆ ಅಲ್ಲಿಪುರದ ಕಾಂಗ್ರೆಸ್ ಮುಖಂಡ ವೆಂಕಟಸ್ವಾಮಿ ಮತ್ತು ಕಾತ್ಯಾಯನಿ ಮರಿದೇವಯ್ಯ ಅವರು ನಾಮಪತ್ರ ಸಲ್ಲಿಸಿದ್ದರು
ಆಡಳಿತ ಮಂಡಳಿಯ ನಿರ್ದೇಶಕರ ಸಭೆ ನಡೆಸಿದ ಚುನಾವಣಾಧಿಕಾರಿ ಜನತಾ ಬಜಾರ್ ನ ಪ್ರಧಾನ ವ್ಯವಸ್ಥಾಪಕ ರಾಮು ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರು ಯಾರೂ ಹಿಂದಕ್ಕೆ ಪಡೆಯದ ಕಾರಣ ರಹಸ್ಯ ಮತದಾನಕ್ಕೆ ಅವಕಾಶ ನೀಡಿದರು.
ವೆಂಕಟಸ್ವಾಮಿ ಅವರಿಗೆ- 9 ಮತಗಳು ಬಂದು ಗೆಲುವು ಕಂಡರು. ಕಾತ್ಯಾಯನಿ ಮರಿದೇವಯ್ಯ ಅವರಿಗೆ – 8 ಮತಗಳು ಬಂದು 1 ಓಟಿನಿಂದ ಸೋಲು ಕಂಡರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನಿರ್ದೇಶಕರು, ಜನತಾ ಬಜಾರ್ ಸಿಬ್ಬಂದಿ, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಶುಭಕೋರಿದರು.
