ಅನುದಿನ ಕವನ-೧೪೮೦, ಕವಯಿತ್ರಿ:ಭಾವಸುಧೆ(ರಾಧಾ ಶಂಕರ್ ವಾಲ್ಮೀಕಿ), ತಿಪಟೂರು, ಕವನದ ಶೀರ್ಷಿಕೆ: ಹಂಗಿನ ಅರಮನೆ

ಹಂಗಿನ ಅರಮನೆ

ಹೇ ಹುಡುಗಿ ಇದು ಒಂದು ನಾಟಕ
ರಂಗ ಇದರೊಳಗೆ ಸಿಲುಕದಿರು ಸಿಲುಕಿ
ಮುಂದೆ ನೀ ಕೊರಗದಿರು ಬಣ್ಣ ಬಣ್ಣದ
ಮಾತುಗಳಿಗೆ ಬೆರಗಾಗದಿರು

ಸ್ವಚ್ಚ ಮನಸಿನ ಬೆಂಕಿ ಕಣ್ಣಿನ ಸುಂದರ
ಮೊಗದ ಬೆಡಗಿ ನೀನು, ನಿನ್ನ ಅಂದಕ್ಕೆ
ಬೆಲೆ ಕಟ್ಟುವರೇ ಹೊರತು ನಿನ್ನ ಸ್ವಚ್ಚ
ಮನಸಿಗಲ್ಲ ನೀ ಎಚ್ಚೆತ್ತುಕೊಳ್ಳಬೇಕು
ನಿನ್ನ ನೀ ರಕ್ಷಿಸಿಕೊಳ್ಳಬೇಕು.

ಇಲ್ಲಿ ಸ್ವಚ್ಛ ಮನಸ್ಸುಗಳಿಗಿಂತ ತುಚ್ಚ
ಮನಸ್ಸುಗಳ ಆರ್ಭಟವೇ ಹೆಚ್ಚಾಗಿದೆ
ಬೇಕಾದಾಗ ಅವರ ತಾಳಕ್ಕೆ ತಕ್ಕಂತೆ
ನಿನ್ನ ಕುಣಿಸುವರು ಬೇಸರವಾದಾಗ
ಪಾತಾಳಕ್ಕೆ ತಳ್ಳುವರು.

ನಿನ್ನ ಕಣ್ಣುಗಳಲ್ಲಿ ಸಾವಿರಾರು ಕನಸುಗಳ
ರಂಗಿನ ಬಣ್ಣ ಎದ್ದು ಕಾಣುತ್ತಿದೆ ಕನಸುಗಳಿಗೆ
ಸ್ವಚ್ಛಂದವಾಗಿ ಹಾರಲು ರೆಕ್ಕೆಗಳ ಕಟ್ಟಿಬಿಡು
ಬದುಕು ನಿನ್ನಿಷ್ಟದಂತೆ ಅವರಿವರ ಹಂಗಿನ
ಅರಮನೆಯ ಸಂಪತ್ತಿಗೆ ಆಸೆ ಪಡದಿರು.


✍️-ಭಾವ ಸುಧೆ
(ರಾಧಾ ಶಂಕರ್ ವಾಲ್ಮೀಕಿ), ತಿಪಟೂರು

Leave a Reply

Your email address will not be published. Required fields are marked *