ಅನುದಿನ ಕವನ-೧೫೮೩, ಕವಿ:ಶ್ರೀ……, ಬೆಂಗಳೂರು, ಕವನದ ಶೀರ್ಷಿಕೆ: ಎಚ್ಚರಿಕೆ

ಎಚ್ಚರಿಕೆ
ನನ್ನ ತುಟಿಯೊಳಗೊಬ್ಬ
ನಿನ್ನ ತುಟಿಯ ರಂಗನು
ಕದಿಯುವ ಕಳ್ಳನಿದ್ದಾನೆ .

*******
ನನ್ನ ತುಟಿಗಳ ತಪನೆಗೆ ಮೆಚ್ಚಿ
ನಿನ್ನ ತುಟಿಗಳು
ಧೀರ್ಘ ಚುಂಭನ ಪ್ರಾಪ್ತಿರಸ್ತು
ಎಂಬ ವರವೊಂದನ್ನು ದಯಪಾಲಿಸಿದೆ .
ಇನ್ನೇನಿದ್ದರೂ ಹರಕೆ ಫಲಪ್ರದವಾಗಲು
ನೀನು ಸಹಕರಿಸಬೇಕಷ್ಟೆ .

********
ನಿನ್ನ ತುಟಿಗಳ ಬಣ್ಣಕ್ಕೆ
ಮಾರುಹೋದ ಚಂದ್ರ
ತಾನೂ ಕೂಡ
ಮೊನ್ನೆ ಕೆಂಪಾಗಾಗಿಬಿಟ್ಟಿದ್ದ .

********
ಯಾವುದಕ್ಕೂ
ನಿನ್ನ ತುಟಿಗಳನ್ನು
ದುಂಬಿಗಳಿಂದ
ಮರೆ ಮಾಡಿಯೇ ಇಟ್ಟಿರು .
ಯಾಕೆಂದರೆ …?
ಜಗತ್ತಿನ ಎಲ್ಲಾ ಹೂವುಗಳನ್ನು
ಇವುಗಳು ಇನ್ನಿರುವುದು ವ್ಯರ್ಥವೆಂದು
ಕೊಲೆ ಮಾಡಿಬಿಡುವ ಅಪಾಯವಿದೆ .

*********
ಒಂದು ವೇಳೆ
ನಿನ್ನ ತುಟಿಗಳೇನಾದರೂ
ದುಂಬಿಗಳ ಕಣ್ಣಿಗೆ ಬಿದ್ದರೆ
ಅವನ್ಯಾವನಿಗೊ ದಕ್ಕಿದ ಭಾಗ್ಯ
ನಮಗೆ ದಕ್ಕಲಿಲ್ಲವಲ್ಲ ಎಂದು
ಜೀವನದಲ್ಲಿ ಜಿಗುಪ್ಸೆ ಬಂದು
ಸಾರಸಗಟಾಗಿ ಆತ್ಮಹತ್ಯೆ
ಮಾಡಿಕೊಂಡುಬಿಡುತ್ತವೆ .

*********
ನಿನ್ನ ಹೂದುಟಿಯ
ಜೇನು ಕುಡಿಯುವ
ಸಲುವಾಗಿಯೆ
ನನ್ನ ತುಟಿಗಳು
ದುಂಬಿಯಾಗಿ
ಮಾರ್ಪಾಟಾಗುವ
ಮಾಯಾವಿ ಕಲೆ
ಕಲಿತುಬಿಟ್ಟಿದೆ.

-ಶ್ರೀ …….., ಬೆಂಗಳೂರು
—–