ಅನುದಿನ ಕವನ-೧೮೫೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಮತ್ತೇನಿಲ್ಲ…!

ಮತ್ತೇನಿಲ್ಲ…!

ನನ್ನ ನಿನ್ನ ನಡುವೆ
ಪ್ರೀತಿಯ ಹೊರತು ಮತ್ತೇನಿಲ್ಲ…

ಮೋಹ ವ್ಯಾಮೋಹ
ಇವುಗಳ ಹೊರತಾಗಿ
ನನ್ನ ನಿನ್ನ ನಡುವೆ ಇರುವುದು
ಅಚ್ಚುಕಟ್ಟಾದ ಪ್ರೀತಿಯೇ ಹೊರತು ಮತ್ತೇನಿಲ್ಲ…

ಆಕಾಶದ ನೀಲಿಯಂತೆ
ನನ್ನೊಳಗೆ ಅಚಲವಾಗಿ ನೆಲೆ ನಿಂತ ನಿನ್ನ
ಎಂದಿಗೂ ಬಿಟ್ಟು ಕೊಡದೆ
ನೀಲಿ ಶಾಹಿಯಾಗಿ ಬರೆದುಕೊಂಡು ಕಾಯುವ
ನನ್ನ ನಿನ್ನ ನಡುವೆ ಇರುವುದು
ಸುಂದರ ಪ್ರೀತಿಯೇ ಹೊರತು ಮತ್ತೇನಿಲ್ಲ…

ಆಗೊಮ್ಮೆ ಈಗೊಮ್ಮೆ
ಹೃದಯದ ಮಾತು ನವಿರಾಗಿ
ತನಗೆ ತಾನೇ ನಿನ್ನೇಸರ ಹೇಳಿ
ತುಟಿಗೆ ನಾಚಿಕೆಯ ಪರಿಮಳ
ಸಿಂಪಡಿಸಿ ನಿನ್ನ ಕರೆಯುವಾಗ
ಸುತ್ತಣ ಲೋಕ ನಿಶ್ಯಬ್ದವಾಗಿ
ಝೇಂಕರಿಸಿ ನಿಂತಲ್ಲೇ ನಿಂತು ನೋಡುವಾಗ
ನನ್ನ ನಿನ್ನ ನಡುವೆ ಮೂಡುವುದು
ಸಾವಿಲ್ಲದ ಪ್ರೀತಿಯೇ ಹೊರತು ಮತ್ತೇನಿಲ್ಲ…
-ಸಿದ್ದು ಜನ್ನೂರ್, ಚಾಮರಾಜನಗರ
—–

Leave a Reply

Your email address will not be published. Required fields are marked *