ಅನುದಿನ ಕವನ-೧೭೫೫, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು,

ಭಯವು ಹಿಮ್ಮೆಟ್ಟುವಾಗ
ತಾಯಿ ಮಡಿಲಂತೆ
ಸಿಗುವ ಬೆಳಕೆಷ್ಟು ಸಖ್ಯ

ಅಜ್ಞಾನದಲ್ಲಿ ಅಲೆಯುವಾಗ
ಜ್ಞಾನ ದೀವಿಗೆಯಂತೆ
ಸಿಗುವ ಬೆಳಕೆಷ್ಟು ಸಖ್ಯ

ಸಾಲುಗಳ ಅಳಿಸುವಾಗ
ಮತ್ತೆ ಚಿತ್ತಾಗದಂತೆ
ಸಿಗುವ ಬೆಳಕೆಷ್ಟು ಸಖ್ಯ

ನೋವುಗಳ ಎಣಿಸುವಾಗ
ಇರಿಸಿಕೊಳ್ಳಲು ಜೇಬಿನಂತೆ
ಸಿಗುವ ಬೆಳಕೆಷ್ಟು ಸಖ್ಯ

ಭರವಸೆಯು ಕುಸಿದಾಗ
ಬೆನ್ನು ತಟ್ಟಿ ಎಬ್ಬಿಸುವಂತೆ
ಸಿಗುವ ಬೆಳಕೆಷ್ಟು ಸಖ್ಯ

ಬದುಕು ಪಯಣಿಸುವಾಗ
ದಾರಿ ತಪ್ಪದಂತೆ
ಸಿಗುವ ಬೆಳಕೆಷ್ಟು
ಸಖ್ಯ ಸಖ್ಯ ಸಖ್ಯ

-ಲೋಕಿ(ಲೋಕೇಶ್ ಮನ್ವಿತಾ),ಬೆಂಗಳೂರು
—–