ಗಾಳಿ ಬೀಸಿದೆಡೆ ತೇಲುವ
ಮೋಡಕ್ಕೆ ಜೋತು ಬಿದ್ದ ನಿನಗೆ
ಗುಡುಗು ಸಿಡಿಲಾರ್ಭಟ ಇಲ್ಲದೆ ಕವಿದಲ್ಲೇ ಸುರಿವ ಕಾರ್ಮೊಡದ ನಿಶ್ಚಿತದರಿವಿಲ್ಲ
ನೆನಪಿರಲಿ
ಗಾಳಿ ಯಾವಾಗಲೂ ನಿನ್ನೆಡೆಗೆ ಬೀಸುವುದಿಲ್ಲ
ಇಂದು ಈ ಕ್ಷಣ ನಿನ್ನೆಡೆಗೆ
ಮರುಕ್ಷಣವೆ ದಿಕ್ಕು ಬದಲಿಸುವ ಚಂಚಲತೆ ಗಾಳಿಗೂ ಇದೆ ತೇಲುವ ಮೋಡಕೂ…
ಹಾಗೊಮ್ಮೆ ನಿನ್ನೆಡೆಗೆ ಸಾರಿ
ಸುರಿದ ಮಳೆಗೆ ಕ್ಷಣ ತೋಯ್ದಂತಾದರೂ ಆ ನೆನಪನ್ನೂ ಅಳಿಸುವ
ಗುಪ್ತಗಾಮಿನಿಯೂ ನಿನ್ನೊಳಗೆ ಇಹಳು

ಡಾ.ಭಾರತಿ ಅಶೋಕ್, ಹೊಸಪೇಟೆ
—–
