ಬಳ್ಳಾರಿ: ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ಸಂಸ್ಥೆ ಶಿಕ್ಷಕರ ದಿನಾಚರಣೆಯನ್ನು ಶನಿವಾರ ನಗರದ ಲಯನ್ಸ್ ಸೇವಾ ಸದನದ ಟಿ.ವಿ. ಬದ್ರಿ ಮೆಮೋರಿಯಲ್ ಸಭಾಗಂಣದಲ್ಲಿ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಆಯ್ದ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಿಕ್ಷಕರು ಸಮಾಜದ ನಿರ್ಮಾತೃಗಳಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಸೇವೆಯಲ್ಲಿ ತೊಡಗಿಸಿಕೊಳ್ಳಲು, ಸಮಾಜದ ಹಿತೈಷಿಗಳು ಹಾಗೂ ಸೇವಾಭಿಮಾನಿಗಳು ತಮ್ಮ ಪ್ರೋತ್ಸಾಹ, ಸಹಕಾರ ಮತ್ತು ದೇಣಿಗೆಯ ಮೂಲಕ ಕೈಜೋಡಿಸಬೇಕೆಂದು ವಿನಂತಿಸಲಾಯಿತು. ಸಮಾಜ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಲು ಹಾಗೂ ಸಹಕಾರ ನೀಡಲು ಇಚ್ಛಿಸುವವರು ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯನ್ನು ಸಂಪರ್ಕಿಸುವಂತೆ ಕೋರಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಮಲ್ಲಿಕಾರ್ಜುನ ಎಸ್.ಬಿ., ಅಧ್ಯಕ್ಷರು, ಲಯನ್ ಕಲ್ಯಾಣ ಚಕ್ರವರ್ತಿ ಎ., ಕಾರ್ಯದರ್ಶಿ ಹಾಗೂ ಲಯನ್ ಅಕ್ಕಿ ಶರಣ ಬಸವ, ಖಜಾಂಚಿ, ಕ್ಲಬ್‌ನ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
