ಕರವೇ ಎತ್ತಿನ ಬೂದಿಹಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಅಜಯ್ ನೇಮಕ

ಬಳ್ಳಾರಿ. ಸೆ. 6 : ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ದ ತಾಲೂಕಿನ ಎತ್ತಿನಬೂದಿ ಹಾಳ್ ಗ್ರಾಮ ಘಟಕದ ಅಧ್ಯಕ್ಷರಾಗಿ ಅಜಯ್ ಅವರು ನೇಮಕವಾಗಿದ್ದಾರೆ.

ಭಾನುವಾರ ನಗರದ ಪಾರ್ವತಿ ನಗರದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎತ್ತಿನ ಬೂದಿಹಾಳ್ ಗ್ರಾಮದ ಹಲವು ಕನ್ನಡ ಕಾರ್ಯಕರ್ತರನ್ನು ವೇದಿಕೆಗೆ ಸ್ವಾಗತಿಸಿದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾಧ್ಯಕ್ಷ ಕುರಿಹಟ್ಟಿ ರಾಜಣ್ಣ (ರಾಜಶೇಖರ್ ) ಅವರು  ಅಜಯ್ ಅವರನ್ನು ಗ್ರಾಮ ಘಟಕದ ಅಧ್ಯಕ್ಷ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣ,  ಕನ್ನಡ ನಾಡು ನುಡಿಯ ಬಗ್ಗೆ ಸದಾ ಕಾಳಜಿಯನ್ನು ವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು  ಸಲಹೆ ನೀಡಿದರು.

ರಾಜ್ಯದ ಹಿತಾಸಕ್ತಿಗೆ ಕನ್ನಡ ಭಾಷೆಗೆ ಧಕ್ಕೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಲು ಹಿಂಜರಿಯಬಾರದು ಮತ್ತು ಸಮಾಜದಲ್ಲಿ ಅಮಾಯಕ ಜನರಿಗೆ ಅನ್ಯಾಯವಾದಲ್ಲಿ ನ್ಯಾಯ ಒದಗಿಸಲು ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ಕಾರ್ಯಕರ್ತರು, ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯ ನಿಯಮ ನಿಬಂಧನೆಗಳನ್ನು ತತ್ವ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಸ್ವ ಇಚ್ಛೆಯಿಂದ ವೇದಿಕೆಗೆ ಸೇರ್ಪಡೆಗೊಂಡಿರುವ ಎಲ್ಲರೂ ನಿಯಮ ನಿಬಂಧನೆಗಳನ್ನು ಮೀರದೆ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ವೇದಿಕೆ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು. ಅನ್ಯಾಯ ಕಂಡಲ್ಲಿ ತಕ್ಷಣ ಪ್ರತಿಭಟನೆಗೆ ಮುಂದಾಗಬೇಕು ಎಂದು ನೂತನ ಜಿಲ್ಲಾಧ್ಯಕ್ಷ ಅಜಯ್ ಮತ್ತು ಗ್ರಾಮ ಘಟಕದ ಪದಾಧಿಕಾರಿಗಳಿಗೆ ತಿಳಿಸಿದರು.
ನೂತನ ಅಧ್ಯಕ್ಷ ಅಜಯ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಗೌರವ ಅಧ್ಯಕ್ಷರನ್ನಾಗಿ ನಾಗಭೂಷಣ್, ಉಪಾಧ್ಯಕ್ಷರಾಗಿ ತಳಾರಿ ಬಸಪ್ಪ ಖಜಾಂಚಿಯಾಗಿ ಕೆ ಬಸಪ್ಪ ಇವರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಪಾಧ್ಯಕ್ಷರಾದ ಮಾರಣ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಟಗಿ ಸೂರಿ ರಾಜಶೇಖರ್ ರಾಜು ಉಮೇಶ್ ಜಡೆಪ್ಪ ಮೊಕ ಮಲ್ಲಯ್ಯ ಕಚೇರಿ ಕಾರ್ಯದರ್ಶಿ ನರೇಶ್ ವಿಜಯಕುಮಾರ್ ರಾಮು ಈಶ್ವರ್ ಮತ್ತು ಗ್ರಾಮ ಘಟಕದ ಸದಸ್ಯರಾದ ನಂದೀಶ ಸ್ವಾಮಿ ಗಣೇಶ್ ವಿಜಯ ಭಾಸ್ಕರ್ ನಾಗೇಶ್ ರಾಮಾಂಜನಿ ಭರತ್ ಕುಮಾರ್ ವೀರಭದ್ರ ಸ್ವಾಮಿ ಅನಿಲ್ ನಿಖಿಲ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *