ನೇರ ಮೊಳೆಗೆ ಸುತ್ತಿಗೆಯಿಂದ ಹೊಡೆಯುವಂತೆ, ಅಂಕುಡೊಂಕು ಮೊಳೆಗೆ ಪೆಟ್ಟು ಹಾಕುವ ತಂಟೆಗೆ ಯಾರೂ ಹೋಗುವುದಿಲ್ಲ !
ಅದೇ ರೀತಿ ಸಾದಾಸೀದಾ ಇರುವ ಸ್ವಭಾವದವರಿಗೆ ಯಾವಾಗಲೂ ನೋವು ಕೊಡುವಂತೆ ವಕ್ರ ಬುದ್ಧಿಯವರನ್ನು ಛೇಡಿಸಲಾರರು !
ಹೀಗಾಗಿಯೇ ಯಾವಾಗಲೂ ಸಾದಾಸೀದಾ ಜನರಿಗೆ ಹೆಚ್ಚಾಗಿ ಅಪಮಾನವಾಗುವುದು ನಾವು ಕಾಣುತ್ತೇವೆ, ಏಕೆಂದರೆ ಅವರು ಎಂದಿಗೂ ವಿರೋಧಿ ಮನೋಭಾವದವರಲ್ಲ, ವಕ್ರ ಸ್ವಭಾವದವರಲ್ಲ, ಬೇರೆಯವರು ಕೊಟ್ಟ ಕಷ್ಟವನ್ನು ನಮ್ಮ ಹಣೆಬರಹ ಎಂದು ಅನುಭವಿಸುತ್ತಾರೆ, ದ್ವೇಷಿಸುವುದು ಅವರಿಗೆ ಬರುವುದೇ ಇಲ್ಲ! ಇದರಿಂದಾಗಿಯೇ ಜನರು ಅದನ್ನು ಅವರು ವೀಕ್ನೇಸ್ ಎಂದು ತಿಳಿದು ಅವರಿಗೆ ಮತ್ತೆಮತ್ತೇ ಪೆಟ್ಟು ನೀಡುವುದುಂಟು!
ಯಾರೇ ಆಗಲಿ ಕೊಚ್ಚೆಯಲ್ಲಿ ಕಲ್ಲು ಒಗೆಯುವುದಿಲ್ಲ, ತಿಳಿ ನೀರಿನಲ್ಲಿಯೇ ಕಲ್ಲು ಎಸೆಯುತ್ತಾರೆ! ಈ ಉದಾಹರಣೆಗಳಿಂದ ತಿಳಿಯುವದನೆಂದರೆ ಒಳ್ಳೆಯನದ ಬಳಕೆಯಾಗುವುಂತೆ ಕೆಟ್ಟದ್ದು ಆಗುವುದಿಲ್ಲ!
ಹಣ್ಣು ಬಿಡದ ಗಿಡ ಕಲ್ಲು ಪೆಟ್ಟಿಗೆ ಗುರಿಯಾಗುವುದಿಲ್ಲ, ಹಣ್ಣಿದ್ದ ಗಿಡಕ್ಕೆ ಜನರು ಸತತವಾಗಿ ಕಲ್ಲು ಒಗೆಯುವುದು!
ಹೀಗಾಗಿ ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ ಹಾಗಂತ ಕೆಟ್ಟತನವೂ ಸರಿಯಲ್ಲ!
ಜೀವನದಲ್ಲಿ ನಮ್ಮ ಗೌರವಕ್ಕೆ ಧಕ್ಕೆಯಾಗದಂತೆ ಇರುವಷ್ಟು ಸ್ವಾರ್ಥ ನಮ್ಮಲ್ಲಿ ಇರಲೇ ಬೇಕು! ಏಕೆಂದರೆ ಒಳ್ಳೆಯತನ , ಮುಗ್ಧತನ ಸುಲಭವಾಗಿ ಬಳಕೆಯಾಗುತ್ತವೆ!
ಅತಿಯಾದ ಭಾವನೆಗಳನ್ನು ಹೊಂದಿದವನೇ ಭಾವುಕನಾಗುವುದು, ಹೀಗಾಗಿ ಅಂಥವರಿಗೆ ಪೆಟ್ಟು ಜಾಸ್ತಿ, ಭಾವನೆಗಳ ಮಹತ್ವ ಗೊತ್ತಿಲ್ಲದವರಿಗೆ ಹತ್ತು ಕೊಟ್ಟರೆ ಒಂದು ಕಡೆಗೆ ಇಪ್ಪತ್ತು ಕೊಟ್ಟರೆ ಮತ್ತೊಂದು ಕಡೆಗೆ ಎನ್ನುವಂತಹ ಸ್ವಭಾವ! ಅಂದರೆ ಅವಕಾಶ ಸಿಕ್ಕಿಲ್ಲೆಲ್ಲಾ ನುಸುಳುತ್ತಾರೆ ಅಂತ ಅರ್ಥ!
ಹೀಗಾಗಿ ಸಾದಾ ಸೀದಾ ಜನರಿಗೆ ನೋವು ಸಿಕ್ಕರೆ ಅವರೇನೋ ಕಷ್ಟ ಪಟ್ಟು ಆ ನೋವನ್ನು ತಮ್ಮ ಕರ್ಮದ ಫಲವೆಂದು ತಿಳಿದು ಹೇಗೋ ತಡೆದುಕೊಳ್ಳ ಬಹುದು.. .. ಆದರೆ ದೇವ ನ್ಯಾಯಾಲಯದಲ್ಲಿ ನೋವು ಕೊಟ್ಟವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ!

-ಸ್ನೇಹಾ ಆನಂದ್, ಬೆಂಗಳೂರು🌻
