ಬೌದ್ಧ ಸಂಪ್ರದಾಯದಂತೆ ಸೋಮಶೇಖರ ಬಣ್ಣದಮನೆ ಪುತ್ರಿ ವಿವಾಹ: ಸಚಿವರಾದ ಸತೀಶ್ ಜಾರಕಿಹೊಳಿ, ಪಿಎಂ ನರೇಂದ್ರಸ್ವಾಮಿ, ಮಾಜಿ ಸಚಿವ ರಾದ ಹೆಚ್. ಸಿ. ಮಹಾದೇವಪ್ಪ, ಆನಂದ್ ಸಿಂಗ್, ಶಾಸಕ ಹೆಚ್ ಆರ್ ಗವಿಯಪ್ಪ, ಎ. ಆರ್. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗಿ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಸಿ. ಸೋಮಶೇಖರ ಬಣ್ಣದಮನೆ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಪುತ್ರಿ ಸಿ. ಸೋನಿಯಾ ಬಣ್ಣದಮನೆ ಮತ್ತು ಕೊಪ್ಪಳದ ಶ್ರೀಮತಿ ಸಿದ್ದಮ್ಮ ಮತ್ತು ಬಾಲಚಂದ್ರಪ್ಪ ಚಾಕರಿ ದಂಪತಿಗಳ ಪುತ್ರ ಡಾ. ನಾಗರಾಜ ಚಾಕರಿ ಅವರ ವಿವಾಹ ಭಾನುವಾರ ನಗರದ ಶ್ರೀ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಬೌದ್ಧ ಸಂಪ್ರದಾಯದಂತೆ ವಿಜೃಂಭಣೆಯಿಂದ ನೆರವೇರಿತು.

ಬೀದರಿನ ಭಂತೇಜಿ ಸಾಸನಸಿರಿ, ಬೆಂಗಳೂರಿನ ಭಂತೇಜಿ ನಾಗರತನ ನೇತೃತ್ವದಲ್ಲಿ ಧಮ್ಮ ವಿವಾಹ ಮಹೋತ್ಸವ ನೆರವೇರಿತು. ಬುದ್ದವಂದನೆ, ತ್ರಿಶರಣ-ಪಂಚಶೀಲ ಸ್ವೀಕಾರ ವಿವಾಹ ಪ್ರತಿಜ್ಞೆ ಹಾಗೂ ಮಂಗಳ ಸೂಕ್ತ ಪಠಣವು ವಿಶೇಷವಾಗಿ ಗಮನಸೆಳೆಯಿತು. ಬಳ್ಳಾರಿಯ ಕಮಲರತ್ನ ಭಂತೇಜಿ ಉಪಸ್ಥಿತರಿದ್ದರು.

ವಿವಾಹ ಸಂಭ್ರಮದ ಗಳಿಗೆಗೆ ಹಿರಿಯ ಸಚಿವರಾದ ಸತೀಶ ಜಾರಕಿಹೊಳಿ, ಪಿಎಂ ನರೇಂದ್ರಸ್ವಾಮಿ, ಮಾಜಿ ಸಚಿವರಾದ ಹೆಚ್. ಸಿ. ಮಹಾದೇವಪ್ಪ, ಆನಂದ್ ಸಿಂಗ್, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಹಿರಿಯ ಶಾಸಕ ಪ್ರಸಾದ್ ಅಬ್ಬಯ್ಯ, ನಗರ ಶಾಸಕ ಹೆಚ್ ಆರ್ ಗವಿಯಪ್ಪ, ಕೊಳ್ಳೆಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ರಾಜಶೇಖರ್ ಇಟ್ನಾಳ, ಕಂಪ್ಲಿ ಶಾಸಕ ಜೆ ಎನ್ ಗಣೇಶ್, ವಿಧಾನ ಪರಿಷತ್ತು ಸದಸ್ಯರಾದ ಎಫ್.ಎಚ್. ಜಕ್ಕಪ್ಪನವರ್, ಡಿಸಿಸಿ ಅಧ್ಯಕ್ಷ, ಮಾಜಿ ಶಾಸಕ ಸಿರಾಜ್ ಶೇಖ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು ಮಾತ್ರವಲ್ಲ ನವ ವಧುವರರಿಗೆ ಶುಭ ಹಾರೈಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದಯ್ಯನಕೋಟೆಯ ಇಳಕಲ್ಲ ವಿಜಯ ಮಹಾಂತೇಶ್ವರ ಶಾಖಾಮಠದ  ಶ್ರೀ ಬಸವಲಿಂಗ ಸ್ವಾಮೀಜಿ,  ಚಿತ್ರದುರ್ಗ ಛಲವಾದಿ ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ನವ ವಧುವರರನ್ನು ಆಶೀರ್ವದಿಸಿದರು.

ಹಿರಿಯ ಚಿಂತಕ, ಸಾಹಿತಿ ಪ್ರೊ. ರಹಮತ್ ತರಿಕೇರಿ, ಕನ್ನಡ‌ ವಿವಿ ಪ್ರಾಧ್ಯಾಪಕ ಪ್ರೊ.‌ಚಿನ್ನಸ್ವಾಮಿ ಸೋಸಲೆ, ವಿಶ್ರಾಂತ ಪ್ರಾಧ್ಯಾಪಕ ಡಾ. ಚಲುವರಾಜು, ಸಹಾಯಕ ಕುಲಸಚಿವ ಜಿ. ಶಿವಕುಮಾರ್, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಡಿಸಿಸಿ ಉಪಾಧ್ಯಕ್ಷ ಗಾದಿಗನೂರು ಹಾಲಪ್ಪ, ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಕುರಿ ಶಿವಮೂರ್ತಿ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಹೊಸಪೇಟೆಯ ಹಿರಿಯ ಕಿರಿಯ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ವಿವಾಹದ ಅರತಕ್ಷತೆಯಲ್ಲಿ ಪಾಲ್ಗೊಂಡು ನವ ವಧುವರರನ್ನು ಹಾರೈಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹೋರಾಟಗಾರರಾದ ಬೆಳಗಾವಿಯ ಅರವಿಂದ ಘಟ್ಟಿ, ಸಿಎಂಎಸ್ ರಾಜ್ಯ ಉಪಾಧ್ಯಕ್ಷ ಸಿ.‌ನರಸಪ್ಪ, ಜೈ ಭೀಮ್ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದ  ಲಿಂಗೇಶ್, ಪ್ರಧಾನ ಕಾರ್ಯದರ್ಶಿಯಾದ ದಾಸ್ ಪ್ರಕಾಶ್, ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ತುಮಕೂರು, ಪ್ರೊ. ಸುಭಾಷ್ ನಾಟೇಕರ್,  ನಿವೃತ್ತ ಎಸ್ಪಿ  ದಾವಣಗೆರೆ ಜಿಲ್ಲಾ ಸಿಎಂಎಸ್ ಅಧ್ಯಕ್ಷ ರುದ್ರಮುನಿ, ಬಳ್ಳಾರಿ, ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರಾದ ಮಹಾವೀರ್ ಮೋಗ, ರಾಯಚೂರು ಅಧ್ಯಕ್ಷರಾದ  ಶಿವರಾಜ್ ಜಾನೇಕಲ್, ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಚನ್ನು ಕಟ್ಟಿಮನಿ, ಕೂಡ್ಲಿಗಿಯ ಉಮೇಶ್, ಹರಪನಹಳ್ಳಿ ಗುಂಡಗತ್ತಿ ಕೊಟ್ರಪ್ಪ, ಕಮಲಾಪುರದ ಸಣ್ಣೀರಪ್ಪ, ಬಳ್ಳಾರಿ ಜಿಲ್ಲಾ ಸಿಎಂಎಸ್ ಅಧ್ಯಕ್ಷ ಸಿ.  ಶಿವಕುಮಾರ್,  ಸಮಾಜದ ನ್ಯಾಯವಾದಿಗಳು, ಹಿರಿಯ, ಕಿರಿಯ ಅಧಿಕಾರಿಗಳು, ಗಣ್ಯರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

*****

 

Leave a Reply

Your email address will not be published. Required fields are marked *