ಬಳ್ಳಾರಿ, ನ.18: ನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಪ್ರಭಾರಿ ಕುಲಸಚಿವರಾಗಿ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವಜೀತ ಮೆಹತಾ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ರಾಜ್ಯದ ವಿವಿಧ ವಿವಿಗಳಲ್ಲಿ ಖಾಲಿ ಇರುವ ಆಡಳಿತ ವಿಭಾಗದ ಕುಲಸಚಿವರ ಹುದ್ದೆಗೆ ಹಲವು ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಗಳನ್ನು ನೇಮಕ ಮಾಡಿದ್ದು,
ವಿಶ್ವಜೀತ ಮೆಹತಾ ಅವರನ್ನು ಬಳ್ಳಾರಿ ವಿಎಸ್ ಕೆ ವಿವಿಯ ಪ್ರಭಾರಿ ಕುಲಸಚಿವರನ್ನಾಗಿ ನೇಮಿಸಿದೆ.
ವಿಶ್ವಜೀತ ಮೆಹತಾ ಅವರು ಶೀಘ್ರದಲ್ಲೇ ಆಡಳಿತ ವಿಭಾಗದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ದೃಢಪಡಿಸಿವೆ.
*****
