ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ವರ್ಗಾವಣೆ, ಮನೀಷ್ ಕರ್ಬೀಕರ್ ರಿಗೆ ಅಧಿಕಾರ ಹಸ್ತಾಂತರ

ಬಳ್ಳಾರಿ: ಬಳ್ಳಾರಿ ವಲಯದ ಪೊಲೀಸ್ ಮಹಾನೀರಿಕ್ಷಕ (ಐಜಿಪಿ) ಎಂ.ನಂಜುಂಡಸ್ವಾಮಿ ಅವರು ಬೆಂಗಳೂರಿಗೆ ವರ್ಗವಾಗಿದ್ದಾರೆ.
ನಂಜುಂಡಸ್ವಾಮಿ(ಮನಂ) ಅವರು ಶನಿವಾರ ಕಲಬುರಗಿ ಈಶಾನ್ಯ ವಲಯದ ಐಜಿ ಮನೀಶ್ ಕರ್ಬೀಕರ್ ಅವರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಐಜಿಪಿ ಮನಂ ಅವರನ್ನು ಸರಕಾರ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾ ನಿರೀಕ್ಷಕರನ್ನಾಗಿ ವರ್ಗಾಯಿಸಿದೆ.
ಸಾಹಿತಿ,ಸಂಶೋಧಕರರೂ ಆಗಿರುವ ಮನಂ ಅವರು 2019ರ ಫೆ.23ರಂದು ಬಳ್ಳಾರಿ ವಲಯದ ಐಜಿಪಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ಎರಡು ವರ್ಷ ಮೂರು ತಿಂಗಳುಗಳ ಕಾಲ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ನೂತನ ವಿಜಯನಗರ ಜಿಲ್ಲೆಗಳಲ್ಲಿ ಜನಾನುರಾಗಿಯಾಗಿದ್ದರು. ವಿಶೇಷವಾಗಿ ಸಾಹಿತ್ಯ, ಸಂವಿಧಾನದ ಮಹತ್ವ ಸಾರುವ, ಯುವಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿ-ಯುವ ಜನರಲ್ಲಿ ಸ್ಪೂರ್ತಿ ತುಂಬುತ್ತಿದ್ದರು. ಹೀಗಾಗಿ ಸಾಕಷ್ಟು ಸಂಖ್ಯೆಯ ಯುವ ಜನರು ಮನಂ ಅವರ ಅಭಿಮಾನಿಗಳಾಗಿದ್ದಾರೆ ಮಾತ್ರವಲ್ಲ ಹಲವರು ತಮ್ಮ ಕೈಗಳು, ಎದೆಯ ಮೇಲೆ ಮನಂ ಹೆಸರು ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
*****

Leave a Reply

Your email address will not be published. Required fields are marked *