
ದಾವಣಗೆರೆ: ಇಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ರೂಹಿನಾಜ್ ಖಾನಮ್ ಅವರು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶೌಕತ್ ಅಲಿ.ಆರ್.ಎ ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಸಿಂತೆಸಿಸ್ ಅಂಡ್ ಅಫ್ಲೀಕೇಷನ್ಸ್ ಆಫ್ 1,4- ಬೆಂಝೋ ಡೈಓಕ್ಸಾನ್ 6- ಅಮೈನ್ ಅಂಡ್ 5,6,7,8- ಟೇಟ್ರ ಹೈಡ್ರೋ 2- ನ್ಯಾಫ್ಥೈಲ್ಅಮೈನ್ ಬೇಸೆಡ್ ಅಝೋಡೈಸ್” (Studies on Synthesis and Application of 1,4- Benzodioxan 6- Amine and 5,6,7,8- Terahydro-2 Naphthylamine based Azo Dyes) ಎಂಬ ವಿಷಯವಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗಕ್ಕೆ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ರೂಹಿನಾಜ್ ಖಾನಮ್ ಅವರು ದಾವಣಗೆರೆಯ ನಿವೃತ್ತ ಶಿಕ್ಷಕರಾದ ಜುಭೇದ ಬಾನು ನರಗುಂದ್ಕರ್ ಮತ್ತು ಸಿರಾಜ್ ಅಹಮದ್ ಖಾನ್ ದಂಪತಿಯ ಪುತ್ರಿಯಾಗಿದ್ದಾರೆ.
