ರಾಷ್ಟ್ರಮಟ್ಟದ ಕನ್ನಡ ಕವಿ ಸಮ್ಮೇಳನಕ್ಕೆ ಡಾ.ಗೋವಿಂದ, ಎಂ.ಅರುಂಧತಿ ಆಯ್ಕೆ

ಹೊಸಪೇಟೆ, ಸೆ. 17: ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಪ್ರತಿಷ್ಠಾನ ಆಯೋಜಿಸಿರುವ  ಅಖಿಲ ಭಾರತ ಆನ್ಲೈನ್ ಕನ್ನಡ ಕವಿ ಸಮ್ಮೇಳನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ಮತ್ತು ಇಳಕಲ್ಲಿನ ಕವಯತ್ರಿ ಎಂ. ಅರುಂಧತಿ ಅವರು ಆಯ್ಕೆಯಾಗಿದ್ದಾರೆ.
ಶನಿವಾರ ಸಂಜೆ ಜರುಗಲಿರುವ ಆನ್ಲೈನ್ ಕವಿಗೋಷ್ಟಿಯಲ್ಲಿ ಕವನ ವಾಚಿಸಲಿರುವ 22 ಜನ ಕವಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ  ಕವಿ ಡಾ. ಗೋವಿಂದ ಮತ್ತು ಎಂ.ಅರುಂಧತಿ ಅವರನ್ನು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಸ.ಚಿ.ರಮೇಶ, ಕುಲಸಚಿವ ಡಾ. ಸುಬ್ಬಣ್ಣರೈ, ಲಲಿತಕಲಾ ನಿಕಾಯದ ಡೀನ್ ಡಾ.ರವೀಂದ್ರನಾಥ, ಮತ್ತು ಸ್ನೇಹ ಬಳಗ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

👆ಎಂ. ಅರುಂಧತಿ, ಇಳಕಲ್ಲು
*****

Leave a Reply

Your email address will not be published. Required fields are marked *