
ಹೊಸಪೇಟೆ: ನಗರದ ಉಕ್ಕಡಕೇರಿಯ ಟಂಗೂರಿ ಪಾರ್ವತಮ್ಮ ಶನಿವಾರ ರಾತ್ರಿ ನಿಧನರಾದರು. ಅವರಿಗೆ 77 ವರ್ಷವಾಗಿತ್ತು. ಮೃತರು ಅಕ್ಕ, ಪುತ್ರ ಮೆಕ್ಯಾನಿಕಲ್ ಎಂಜಿನಿಯರ್ ಟಂಗೂರಿ ಪ್ರಕಾಶ್, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ನಗರದ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
