
ಬೆಂಗಳೂರು: ಕನ್ನಡ ಕೃತಿಗಳ ವೈವಿಧ್ಯಮಯ ಮುದ್ರಣದಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ನಾಡಿನ ಧೀಮಂತರಲ್ಲಿ ಒಬ್ಬರಾದ ಮುದ್ರಣೋದ್ಯಮಿ ಸ್ವ್ಯಾನ್ ಪ್ರಿಂಟರ್ಸ್ ಮಾಲೀಕರಾದ ಸ್ವ್ಯಾನ್ ಕೃಷ್ಣಮೂರ್ತಿ ಅವರಿಗೆ ನಾಗನೂರು ರುದ್ರಾಕ್ಷಿಮಠದ ಸೇವಾರತ್ನ ಪ್ರಶಸ್ತಿ ಲಭಿಸಿದೆ.
ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವ ನಿಮಿತ್ತ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಈ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರತಿಷ್ಠಿತ ಸೇವಾರತ್ನ ಪ್ರಶಸ್ತಿ ದಿನಮಾನದ ಶ್ರೇಷ್ಠ ಸ್ವ್ಯಾನ್ ಕೃಷ್ಣಮೂರ್ತಿ ಅವರಿಗೆ ಸಂದಿರುವುದು ಸಂತೋಷದ ಸಂಗತಿ ಎಂದು ಲೇಖಕ, ಸಂಶೋಧಕ ಬೆಳಗಾವಿಯ ಪ್ರಕಾಶ ಗಿರಿಮಲ್ಲನವರ ಹರ್ಷ ವ್ಯಕ್ತಪಡಿಸಿದ್ದಾರೆ. ಅಭಿನಂದನೆ: ಕಳೆದ ಮೂರು ದಶಕಗಳಿಂದ ಕನ್ನಡ ಮುದ್ರಣ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಕೃಷ್ಣಮೂರ್ತಿ ಅವರಿಗೆ ಪ್ರಕಾಶ ಗಿರಿಮಲ್ಲನವರ ಮತ್ತು ಪ್ರಕಾಶಕ, ಸಾಂಸ್ಕೃತಿಕ ಸಂಘಟಕ ಮತ್ತು ಹಿರಿಯ ಪತ್ರಕರ್ತ ಬಳ್ಳಾರಿಯ ಸಿ.ಮಂಜುನಾಥ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕನ್ನಡ ಕೃತಿಗಳ ವೈವಿಧ್ಯಮಯ ಮುದ್ರಣದಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ನಾಡಿನ ಧೀಮಂತರಲ್ಲಿ ಒಬ್ಬರಾಗಿರುವ ಸ್ವ್ಯಾನ್ ಕೃಷ್ಣಮೂರ್ತಿ ಅವರಿಗೆ ಇನ್ನೂ ಇಂತಹ ನೂರಾರು ಪ್ರಶಸ್ತಿಗಳು ದೊರೆಯಲೆಂದು ಪ್ರಕಾಶ ಗಿರಿಮಲ್ಲನವರ ಆಶಿಸಿದ್ದಾರೆ.
