ಅನುದಿನ ಕವನ-೧೯೩, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಹೊಟ್ಟೆಪಾಡು, (ಚಿತ್ರ ಮಾಹಿತಿ: ಮನಂ)

🖕ಧರಣೀಪ್ರಿಯೆ, ದಾವಣಗೆರೆ ಜು.12ರಂದು ಹಿರಿಯ ಪೊಲೀಸ್ ಅಧಿಕಾರಿ, ಸಾಹಿತಿ ಶ್ರೀ ಮನಂ(ಎಂ.ನಂಜುಂಡಸ್ವಾಮಿ, ಐಪಿಎಸ್) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮನಕಲುಕುವ ಭಾವಚಿತ್ರ ಗಮನಿಸಿದ ಕವಯತ್ರಿ ದಾವಣಗೆರೆಯ ಧರಣೀಪ್ರಿಯೆ ಅವರು ಭಾಮಿನಿ ಷಟ್ಪದಿಯಲ್ಲಿ “ಹೊಟ್ಟೆಪಾಡು” ಹೆಸರಿನಲ್ಲಿ ಅರ್ಥಪೂರ್ಣ ಕವಿತೆ ರಚಿಸಿದ್ದಾರೆ. ಹೊಟ್ಟೆಪಾಡು ಕವಿತೆ…

ಅನುದಿನ ಕವನ-೧೯೨ ಕವಿ: ಟಿಪಿ.ಉಮೇಶ್, ಹೊಳಲ್ಕೆರೆ. ಕವನದ ಶೀರ್ಷಿಕೆ: ಕವಿತೆಯೇ….

  ಕವಿತೆಯೇ… ಹೊಗಳಿಕೆ ನೆಪದಲ್ಲಿನ ಬರೀ ಸುಳ್ಳು; ಸುಳ್ಳಿನ ಮುಸುಕಿನಲ್ಲಿಹ ಉರಿ ಸತ್ಯ! * ಬರೆದಾಗ ಮನದ ಒತ್ತಡ ದಿಗಿಲುಗಳು ಸ್ಖಲನಗೊಂಡಂತಾಗಿ ಮೈಮನಗಳು ಅರ್ಧ ಮುದ; ಓದಿಕೊಂಡ ನೀನು ನಡು ಬಗ್ಗಿಸಿ ಕೆಳ ತುಟಿ ಕಚ್ಚಿ ಬಿರುಗಣ್ಣಲಿ ಗದರಿಸಿದಾಗಲೇ ಪೂರ್ಣ ಹದ!…

ಅನುದಿನ ಕವನ-೧೯೧, ಕವಿ: ಮನಂ (ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು), ಕವನದ ಶೀರ್ಷಿಕೆ:ಒಲವು ಇಷ್ಟು ಬೇಗ ಮೂಡಬಾರದಿತ್ತು…, ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಒಲವು ಇಷ್ಟು ಬೇಗ ಮೂಡಬಾರದಿತ್ತು ಒಲವು ಮೂಡುವ ಗಳಿಗೆ ಸುಂದರ ಬಲು ಸುಂದರ ಬಲು ಮಧುರ ಒಲವು ಅರಳುವ ಚೆಲುವು ಸುಂದರ ಬಲು ಸುಂದರ ಬಲು ಮಧುರ ಒಲವು ಇಷ್ಟು ಬೇಗ ಮೂಡಬಾರದಿತ್ತು ಒಂದರ ನಂತರ ಒಂದಾಗಿ ಬರುವ ಸುಂದರ ಕನಸುಗಳಂತೆ…

ಅನುದಿನ ಕವನ-೧೯೦ ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯೌವನದಲ್ಲಿ…..

  ಯೌವನದಲ್ಲಿ…. ***** ಈಗ ನನ್ನ ಚಿತ್ತ ಬರೀ ಭೋರ್ಗರೆವ ಪ್ರೇಮ ವಾರಿಧಿ ಕಲ್ಪ ನೆಯ ಚಂದಿರ ವಯೋಭೂಮಿಕೆಯ ಮೇಲೆ ತುಷಾರದ ಹನಿಗಳನ್ನು ಎರಚಿ ಮೂಡಿ ಬಂದಾಗ ಧುಮ್ಮಿಕ್ಕುವ ವಾಗ್ವೀಚಿಕೆಗಳು ನಿನ್ನಲ್ಲಿ ಕಾಮನೆ ಮೂಡಿಸಬಹುದು ಕನಸುಗಳ ಕೊನರಿಸಬಹುದು ಆದರೆ ಗೆಳತೀ ನಿನಗೆ…

‘ಸಾಲೀ ಮಾಮಾ’:ಡಾ. ಅರ್ಜುನ ಗೊಳಸಂಗಿ

ಇಂದು (ಜು.10) ಸಂಶೋಧಕ, ಅತ್ತುತ್ತಮ ಸಂಘಟಕ, ಉಪನ್ಯಾಸಕ,ಸಾಹಿತಿ, ವಾಗ್ಮಿ ಡಾ. ಅರ್ಜುನ ಗೊಳಸಂಗಿ ಅವರ ಹುಟ್ಟುಹಬ್ಬ. ದಸಾಪ ಸಂಘಟನೆ ಹಾಗೂ ಜನಪರ‌ ಚಿಂತನೆಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿರುವ ಡಾ.‌ಗೊಳಸಂಗಿ ಅವರ ಕುರಿತು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಸದಾಶಿವ ದೊಡ್ಡಮನಿ ಅವರು…

ಅನುದಿನ ಕವನ-೧೮೯, ಕವಿ: ಎ.ಎನ್. ರಮೇಶ್, ಗುಬ್ಬಿ ಕವನದ ಶೀರ್ಷಿಕೆ:ವ್ಯರ್ಥ ವ್ಯರ್ಥ..!

“ಒಮ್ಮೆ ಕಣ್ಣರಳಿಸಿ ಸುತ್ತಲ ಜನಗಳನ್ನು. ನೋಡಿದರೆ.. ಸೂಕ್ಷ್ಮವಾಗಿ ನಿಮ್ಮ ಸುತ್ತಮುತ್ತಲ ಜೀವನಗಳನ್ನು ಅವಲೋಕಿಸಿ ನೋಡಿದರೆ.. ಈ ಕವಿತೆಯಲ್ಲಿರುವ ತರಹದ ವ್ಯಕ್ತಿ, ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಅಷ್ಟೇ ಏಕೆ ಏಷ್ಟೋಬಾರಿ ನಮ್ಮದೇ ಬದುಕಿನ ವಿವಿಧ ಮಜಲುಗಳಲ್ಲಿ ನಾವೇ ಹೀಗೆ ವರ್ತಿಸಿರುತ್ತೇವೆ. ಹಾಗಾಗಿ ಇದು ನಮ್ಮ…

ಅನುದಿನ‌ ಕವನ-೧೮೮, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕಾವ್ಯ ಪ್ರಕಾರ: ಗಜಲ್ , ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಗಝಲ್ ********* ನನ್ನ ಮನದ ಹೊಸಿಲಿನಲ್ಲಿ ನಸು ನಾಚುತ ಹೃದಯದೊಳಗೆ ಅಡಿಯಿಟ್ಟ ಹೃದಯೇಶ್ವರಿ ನೀನು // ನನ್ನ ಬಾಳ ಬಾಂದಳದ ಮೊದಲ ಪುಟದಲ್ಲಿ ಹೊಸ ಅಧ್ಯಾಯ ಬರೆದ ಅರ್ಧಾಂಗಿ ನೀನು // ನನ್ನ ಮನೆ – ಮನವನರಿತು ಮರು ಮಾರ್ನುಡಿಯದೇ ಸಹ್ಯದಲಿ…

ಕರ್ನಾಟಕದ ಮೊದಲ ತೃತೀಯ ಲಿಂಗಿಗಳ ಸಂಶೋಧನೆ ‘ಅಂಚಿಕೃತರಲ್ಲಿಯೇ ಅಂಚಿಕೃತರಾದ ಉತ್ತರ ಕರ್ನಾಟಕದ ತೃತೀಯ ಲಿಂಗಿಗಳ ಅಧ್ಯಯನ’

ಧಾರವಾಡ: ಶೋಷಿತ ತೃತೀಯ ಲಿಂಗಿಗಳ ಬದುಕು, ಹೋರಾಟದ ಕುರಿತಂತೆ ಕನ್ನಡದಲ್ಲಿ ಕತೆ, ಕಾದಂಬರಿ, ಆತ್ಮಕಥನಗಳು ಪ್ರಕಟವಾಗಿವೆ. ಚಲನ‌ಚಿತ್ರವೂ ಬಂದಿದೆ. ಆದರೆ ಮೊದಲ ಬಾರಿಗೆ ತೃತೀತ ಲಿಂಗಿಗಳ‌ ಕುರಿತ ಸಂಶೋಧನಾ ಅಧ್ಯಯನ ನಡೆದು ನಾಡಿನ ವಿಶ್ವವಿದ್ಯಾಲಯವು ಈ ಮಹಾಪ್ರಬಂಧಕ್ಕೆ ಪಿಎಚ್.ಡಿ 2018ರಲ್ಲಿಯೇ ಪದವಿ…

ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ವೀರೇಂದ್ರ ಹೆಗ್ಗಡೆರವರ ಜತೆ ಸಚಿವ ಎ. ಬಸವರಾಜ ಮಾತುಕತೆ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಎ.ಬಸವರಾಜ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. (ಚಿತ್ರ ಕೃಪೆ:ಆನ್ ಲೈನ್)

ಅನುದಿನ‌ಕವನ-೧೮೭, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ನಿವೇದನೆ

  ನಿವೇದನೆ ಅಂದು ನಿನ್ನನು ಕಂಡಾಗಲೆಲ್ಲಾ ಎದುರಿನಲ್ಲಿ ನೂರು ಚೂರಿಗಳು ಚುಚ್ಚುತಿದ್ದವು ಹೃದಯದಲ್ಲಿ ಇಂದು ಯಾಕೋ ನಿನ್ನನು ಕಂಡರೂ ಎದುರಿನಲ್ಲಿ ಏನೂ ಆಗಲೇ ಇಲ್ಲ ಈ ಹೃದಯದಲ್ಲಿ ನಿನ್ನನು ಕಂಡಾಗಲೆಲ್ಲಾ ನೂರು ನೆನಪು ಕಾಡುತಿದ್ದವು ನೂರು ನೋವು ಆಗುತಿದ್ದವು ಹೃದಯದಲ್ಲಿ ಈಗ…