The post ಅನುದಿನ ಕವನ-೧೯೨೬, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು appeared first on Karnataka Kahale.
]]>2.
ಅಸ್ತವ್ಯಸ್ತ ಬದುಕಿನ ಗದ್ದಲದಲ್ಲೂ
‘ಬದುಕಿದೆ’
ಸಂತೆಯ ಮಹಾಗದ್ದಲದಲ್ಲೂ
ಒಂದು ಮೌನವಿದೆ.
3.
ದೂರದ ಹಕ್ಕಿಯ ಕರೆಗೆ
ಓಗೊಡುವ
ಒಂದು ಮೌನದಲ್ಲಿ ಅರಳಿದೆ
ಕವಿತೆ.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
The post ಅನುದಿನ ಕವನ-೧೯೨೬, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು appeared first on Karnataka Kahale.
]]>The post ಅನುದಿನ ಕವನ-೧೯೨೫, ಕವಯತ್ರಿ:ಮಂಜುಳಾ ಭಾರ್ಗವಿ, ಬೆಂಗಳೂರು appeared first on Karnataka Kahale.
]]>ರಾತ್ರಿಯಿಡೀ ಸಂಭಾಷಣೆಯಲ್ಲಿ ತೊಡಗಿದ್ದೆ.
ಚೂರು ವಿಶ್ರಮಿಸುವೆ. ಕನಸಿನ ನೆನಪಿಲ್ಲ.
ಒಡಲಲ್ಲೀಗ ಪ್ರೀತಿಯ ನದಿ ಕದಲುತ್ತಿದೆ.
ಜೀವನ್ಮುಖಿ ಹಾಕಿದ ಹುಟ್ಟ ನೆನಪಿಲ್ಲ.
ಮುಳ್ಳ ಬೇಲಿಗಳನ್ನೆಲ್ಲ ಹೂವಾಗಿಸುವಷ್ಟು
ದಿಟ್ಟ ಪ್ರೇಮಿಯ ಮುಖ ನೆನಪಿಲ್ಲ.
ಇಳೆ ತಂಪು ತನುವಾಗುತ್ತಿದೆ
ಮಳೆ ಸುರಿದ ನೆನಪಿಲ್ಲ.
ನಿದಿರೆಗೆಟ್ಟ ತಾರೇ ಆಗಸದ ತುಂಬೆಲ್ಲ
ನಕ್ಷತ್ರಗಳ ಎಣಿಸಿದ್ದೆ ಲೆಕ್ಕ ನೆನಪಿಲ್ಲ.
ಮಾಯಾವಿ ಕೌದಿ ಹೊದಿಸಿದ್ದು ಯಾರು?
ತೋಳ ತೆಕ್ಕೆ ತಬ್ಬುಗೆಯ ನೆನಪಿಲ್ಲ.
ಮಳೆಯಂತವಳ ಒಡಲಲ್ಲೀಗ
ನೂರು ಕಡಲು ಅಲೆಗಳ ನೆನಪಿಲ್ಲ.

-ಮಂಜುಳಾ ಭಾರ್ಗವಿ, ಬೆಂಗಳೂರು
The post ಅನುದಿನ ಕವನ-೧೯೨೫, ಕವಯತ್ರಿ:ಮಂಜುಳಾ ಭಾರ್ಗವಿ, ಬೆಂಗಳೂರು appeared first on Karnataka Kahale.
]]>The post ಪ್ರಾಧ್ಯಾಪಕ ವೃತ್ತಿಗೆ ಘನತೆ ತಂದುಕೊಟ್ಟವರು ಜಿ.ಎಸ್.ಎಸ್. -ಡಾ. ಕುಮಾರಚಲ್ಯ appeared first on Karnataka Kahale.
]]>The post ಪ್ರಾಧ್ಯಾಪಕ ವೃತ್ತಿಗೆ ಘನತೆ ತಂದುಕೊಟ್ಟವರು ಜಿ.ಎಸ್.ಎಸ್. -ಡಾ. ಕುಮಾರಚಲ್ಯ appeared first on Karnataka Kahale.
]]>The post ಅನುದಿನ ಕವನ-೧೯೨೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್ appeared first on Karnataka Kahale.
]]>ಬಣ್ಣ ಹಚ್ಚಿಕೊಳ್ಳದೆ ನಟಿಸುವವರ ಕಾಲವಿದು ಎಚ್ಚರವಿರಲಿ
ಸಂತೈಸಿದಂತೆ ಕಂಡರೂ ಒಳಗೆ ಖುಷಿ ಪಡುವವರ ಲೋಕವಿದು ಎಚ್ಚರವಿರಲಿ
ಇಟ್ಟುಕೊಂಡ ಎಲ್ಲ ಭ್ರಮೆಗಳೂ ಕಳಚಿ ಬೀಳುತ್ತವೆ ಒಮ್ಮೆ
ಅಪ್ಪಿಕೊಂಡಂತೆ ಮಾಡಿ ಬೆನ್ನಿಗೆ ಚೂರಿ ಹಾಕುವವರ ಜಗವಿದು ಎಚ್ಚರವಿರಲಿ
ಅಷ್ಟು ಸುಲಭಕ್ಕೆ ಯಾರಿಗೂ ಮನಸಿತ್ತು ಮೋಸ ಹೋಗಬಾರದು
ಜೊತೆ ಇದ್ದಂತೆ ನಟಿಸಿ ಬೇರೊಬ್ಬರ ತೋಳು ಬಳಸುವ ಪ್ರಪಂಚವಿದು ಎಚ್ಚರವಿರಲಿ
ಕಟುಕ ಕಾಸಿನ ಮುಂದೆ ಮನುಷ್ಯತ್ವ ಮಂಡಿಯೂರಿ ಕಣ್ಣೀರಿಡುತ್ತಿದೆ
ಪ್ರೀತಿಗೆ ಜೀವ ಕೊಡುತ್ತೇನೆಂದವರು ಜೇಬು ತಡಕಾಡುವ ಸಂದರ್ಭವಿದು ಎಚ್ಚರವಿರಲಿ
ಎಷ್ಟು ನಟಿಸಿದರೂ ಒಮ್ಮೆ ‘ನಾಗೇಶಿ’ಯ ಮುಂದೆ ಬಯಲಾಗಲೇಬೇಕು ಬಣ್ಣ
ಬೆಳಕೆಂದು ಭಾವಿಸಿದ್ದು ಬದುಕಿಗೆ ಕತ್ತಲಾಗುವ ಆಶ್ಚರ್ಯವಿದು ಎಚ್ಚರವಿರಲಿ

-ನಾಗೇಶ್ ಜೆ. ನಾಯಕ, ಸವದತ್ತಿ
The post ಅನುದಿನ ಕವನ-೧೯೨೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್ appeared first on Karnataka Kahale.
]]>The post ಅನುದಿನ ಕವನ-೧೯೨೩, ಕವಿ: ಚಿದಂಬರ ನರೇಂದ್ರ, ಬೆಂಗಳೂರು appeared first on Karnataka Kahale.
]]>ರಭಸದಿಂದ ಓಡುತ್ತಿರುವ ಕಾರು
ಹತ್ತಿರವಾಗುತ್ತಿರುವಾಗಲೆ
ಅಡ್ಡ ಬರುವ ಹುಂಬ ಬೆಕ್ಕಿನಂತೆ,
ಅವಸರ ಮಾಡಿಕೊಳ್ಳದೇ
ದಾಟುವುದೇ ಇಲ್ಲ ಅವಳು
ಯಾವತ್ತೂ ಏನನ್ನೂ.
ದಾರಿಯಲ್ಲಿ ಯಾರಾದರೂ
ವಿಳಾಸ ಕೇಳಿದರೆ ಬ್ಲಾಂಕ್ ಆಗುತ್ತಾಳೆ
ಎಡ, ಬಲ ಗೊತ್ತಾಗದೇ ತಡವರಿಸುತ್ತಾಳೆ.
ಸುಳ್ಳು ಹೇಳುತ್ತಾಳೆ ಸರಾಗವಾಗಿ
ಪ್ರೀತಿಯ ಸಲಿಗೆಯಲ್ಲಿ,
ಸತ್ಯ ಕೂಡ ಮುಟ್ಟಿ ನೋಡಿಕೊಳ್ಳುವಂತೆ
ಬಿಚ್ಚಿಡುತ್ತಾಳೆ
ಸತ್ಯವಂತರ ಭ್ರಮೆಗಳನ್ನ ವಾದದಲ್ಲಿ.
ಅವಳ ನಖರಾಗಳನ್ನೆಲ್ಲ
ಪಟ್ಟಿ ಮಾಡಿ
ಡೈರಿಯಲ್ಲಿ ಬರೆದಿಡುತ್ತ ಹೋದೆ.
ಒಂದು ಚಂದ್ರನಿರದ ರಾತ್ರಿ
ದೀಪಕ್ಕಾಗಿ ತಡಕಾಡುತ್ತಿದ್ದ ಕೈಗಳಿಗೆ
ಝಗ್ ಎಂದು ಹೊತ್ತಿಕೊಂಡವು
ಡೈರಿಯ ಪುಟಗಳು ;
ಬಿಚ್ಚಿ ಓದುತ್ತಿದ್ದರೆ, ಯಾಕೋ
ಅಟೊಬಯಾಗ್ರಾಫಿಕಲ್ ಅನಿಸುತ್ತಿದೆ
ನನ್ನ ಈ ಬರವಣಿಗೆ.

-ಚಿದಂಬರ ನರೇಂದ್ರ, ಬೆಂಗಳೂರು
—–
The post ಅನುದಿನ ಕವನ-೧೯೨೩, ಕವಿ: ಚಿದಂಬರ ನರೇಂದ್ರ, ಬೆಂಗಳೂರು appeared first on Karnataka Kahale.
]]>The post ಅನುದಿನ ಕವನ-೧೯೨೨, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು appeared first on Karnataka Kahale.
]]>
ಬ್ರೆಡ್ಡಿಗೆ ಸವರಿ ಉಳಿದ ಬೆಣ್ಣೆಯನ್ನು
ಚಾಕುವಿನಿಂದ ನೇರವಾಗಿ
ನಾಲಿಗೆಗೆ ತಾಕಿಸಿ ಸೆಳೆಯುವುದು
ಅವಳಿಗೆ ಅಭ್ಯಾಸ..
ಯಾವತ್ತೂ ಯಾವ ಚಾಕುವೂ ಅವಳ
ಸೀಳುವ ಧೈರ್ಯ ತೋರಿಲ್ಲ
ಎನ್ನುವುದೂ ನಿಜ.
ಅವಳು ಇಡೀ ಬದುಕನ್ನು
ಹನಿಹನಿಯಾಗಿ ಬದುಕಿದ್ದೂ ಹೀಗೆ.
ಬದುಕಿನ ಅಸೂಯೆ, ಪೊಸೆಸಿವ್ ನೆಸ್,
ಪ್ರೀತಿ, ಹಿಂಸೆ, ಎಲ್ಲವನ್ನೂ
ನವಿರಾಗಿ ಚುಚ್ಚಿ ಅದಕ್ಕೊಂದಿಷ್ಟು
ಕಿರಿಕಿರಿ ಉಂಟು ಮಾಡುತ್ತಾಳೆ.
ಆಗಾಗ ಬೆಂಕಿಕಡ್ಡಿ ಗೀರಿ ಉರಿಯುವವರೆಗೂ
ಬೆರಳಲ್ಲಿ ಹಿಡಿದು ನೋಡುತ್ತಾಳೆ.
ಇನ್ನೇನು ಸುಟ್ಟುಬಿಡುವ ಹೊತ್ತಲ್ಲಿ
ಅಷ್ಟು ಹೊತ್ತು ಉರಿದ ಕಡ್ಡಿಗೂ,
ಒಂದು ಘನತೆಯ ವಿದಾಯ ಕೋರುವಂತೆ
ನಿಧಾನವಾಗಿ, ಎಸೆಯದೇ ಕೆಳಗಿಡುತ್ತಾಳೆ.
ಮಂಚದ ಕಾಲಿಗೋ, ಗೋಡೆಯಂಚಿಗೋ
ಕಿರುಬೆರಳು ಹೊಡೆಸಿಕೊಳ್ಳುವಷ್ಟೇ
ಸಲೀಸಾಗಿ ಆಗಾಗ ವಾಸ್ತವ
ಅಪ್ಪಳಿಸುತ್ತದೆ. ಒಂದಷ್ಟು ಹೊತ್ತು
ನೋವಿಗೆ ನಲುಗಿ ಕೂರುವವಳು
ಮತ್ತೆ ಎದ್ದು ನಿಲ್ಲುತ್ತಾಳೆ..
ಬದುಕನ್ನು ಟೀಸ್ ಮಾಡುವ ಕಲೆ
ತುಂಬ ಮೊದಲೇ ಕಲಿತುಬಿಟ್ಟಿದ್ದಾಳೆ.
ನಿನಗಿಂತ ಸಾವೇ ವಾಸಿ ಬಿಡು,
ನಿನ್ನ ಬದಲು ಅದನ್ನೇ ಪ್ರೀತಿಸಬೇಕಿತ್ತು
ಎಂದು ಅಸೂಯೆ ಹುಟ್ಟಿಸುತ್ತಾಳೆ.
ಪೊಸೆಸಿವ್ ಆದ ಬದುಕು ಅವಳನ್ನು
ಮತ್ತೆ ತೆಕ್ಕೆಗೆ ಸೆಳೆದುಕೊಂಡು
‘ನಾನೇ ಹೆಚ್ಚು ಇಷ್ಟ ಎಂದು ಹೇಳು’
ಎಂದು ಮುದ್ದಿಸುತ್ತಲೇ ಇನ್ನಷ್ಟು ಹಿಂಸಿಸುತ್ತದೆ.

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
The post ಅನುದಿನ ಕವನ-೧೯೨೨, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು appeared first on Karnataka Kahale.
]]>The post ಅನುದಿನ ಕವನ-೧೯೨೧, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಲಯದ ನಾದ appeared first on Karnataka Kahale.
]]>ಕೆಂಪು ಬಸ್ಸಿನ ವೇಗದಿ
ಕನಸ ಕಾಣುತಿದೆ
ಭಂಡಾಯದ ಹೊಗೆ..
ವಿಚಿತ್ರ ತರ್ಕದ ಕೋಟುಗಳ
ನಡುವೆ ಬಂದಿಯಾಗಿದೆ
ಅಲುಗಾಡುವ ಹಸಿರ ಹುಲ್ಲು…
ಭಾವನೆಯ ಒಡಾಟಕೆ
ಹೊರಾಟವಿಲ್ಲದ ಮೂಕ ಪಕ್ಷಿಗಳು ಬೆಂಚುಗಳಲಿ
ತಲೆಬಾಗಿವೆ….
ಇದಕೆ ಸೋತ ಷರಟುಗಳು
ಮುಗಿಲ ನೋಡುತ
ತಲೆ ಚಚ್ಚಿಕೊಳ್ಳುತಿವೆ…
ಸಾಮಾಜಿಕ ಸ್ವತಂತ್ರ ಬೇಡಿಯಲಿ ಕಪ್ಪು ಕರಗಿ
ಸೆರಗ ಹೃದಯವ ಮಂಥನ
ಮಾಡುತಿದೆ….
ಅಳಿದು ಹೋದ ಕೆರೆ ಕುಂಟೆಗಳಲಿ
ಕೋಮು ಗಲಭೆಯ ಕುಂಟೆ ಬಿಲ್ಲೆ?
ಇದಕೆ ನಕ್ಕು ಹೊರ ನುಗ್ಗಿವೆಯಲ್ಲಾ ಮೋರಿ ನೀರಿನ
ಲಯದ ನಾದ….
ಆದರೂ ಏಟು ಕೊಡುತ್ತಿದೆಯಲ್ಲ ಮುಳ್ಳ ಬೇಲಿ,,ಬಡ ಶ್ರೇಣಿಯ ಬೆನ್ನಿಗೆ?
ಅನ್ಯತಾ ಮನದ ಗಿಡಮರಗಳು ಗಿರಕಿ ಹೊಡೆಯುತಿವೆ….
ಯಾವ ಉಯ್ಯಾಲೆಯಲಿ
ಹುಡುಕೋಣ ಸ್ವಚ್ಚ ಪನ್ನೀರ
ಹನಿಯನು?…
ಗುಹೆಯ ಕತ್ತಲೆಗೆ
ಪಂಜಿನ ಬೆಳಕು ಕಣ್ನೀರಿಡುತಿದೆ.
ನಡೆದು ಬಂದ ಕಪ್ಪು ದಾರಿಯ
ಜೊತೆಗೆ ,ಸಂವತ್ಸರಗಳೆಲ್ಲಾ
ಕಳಚಿದವು..
ಕಂಡ ಕನಸ ಮನಸಿಗೆ
ಮತ್ಸರದ ಬೆಂಕಿ
ಕಿಡಿ ಹಚ್ಚಿ ವ್ಯಂಗ್ಯತೆಯ ಸೂಚಿಸಿದೆ..
ಆದರೂ ಮತ್ತೆ ಮತ್ತೆ ಎಬ್ಬಿಸುತಿದೆಯಲ್ಲ ಬೂದಿಯಲ್ಲಡಗಿದ ಮುದದ
ಬಯಕೆ……

-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
The post ಅನುದಿನ ಕವನ-೧೯೨೧, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಲಯದ ನಾದ appeared first on Karnataka Kahale.
]]>The post ಅನುದಿನ ಕವನ-೧೯೨೦, ಕವಿ: ಸಿದ್ದು ಜನ್ನೂರು, ಚಾಮರಾಜನಗರ appeared first on Karnataka Kahale.
]]>ಎತ್ತ ಹೊರಳಿದರೂ ಕಣ್ಣು
ನಿನ್ನ ಹುಡುವುದೆ ಕಾಯಕ
ಮರೆವು
ನೋವು
ಒಂದೇ ಎರಡೆ ಛೇ…ತೂ…
ಎನಿಸುವಷ್ಟು ಕುದಿವ ಕೋಪ
ಒಬ್ಬಂಟಿ ಪದ್ಯಕ್ಕೆ ನೂರು ನೆಪ
ಏನು ಹೇಳಲಿ ಇನ್ನೂ
ನನ್ನ ನಿನ್ನ ನಡುವೆ ಇರುವ ಮುನಿಸಿನ ಬಗ್ಗೆ…
ಕಾದು ನಿಂತಾಗ
ಬಾಗಿಲ ಸದ್ದು ಕಿರ್ ಎಂದರೂ ಸಾಕು
ನೀನೆ ಬಂದೇ ಏನೋ ಅಂದುಕೊಂಡು
ನನಗೆ ನಾನೇ ಗೊಣಗಿಕೊಳ್ಳುವಾಗ
ಹಲ್ಲಿ ಸುಮ್ಮನೆ ಲೋಚಗುಟ್ಟಿದರೆ
ಶುಭ ಸೂಚನೆಗಿಂತ ಅಶುಭವೆ ಹೆಚ್ಚೆಂದು
ನನಗೆ ನಾನೇ ಬೈದುಕೊಳ್ಳುತ್ತೇನೆ
ರಾತ್ರಿಗೆ ಹಚ್ಚಿಟ್ಟ ಹಣತೆಗಳ ನಡುವೆ
ಇರುಳ ಬೇದಿಸಿ ನೀನೂ ಬರಬಹುದೆಂದು
ನಾನು ಈಗಲೂ ಕಾಯುತ್ತಿದ್ದೇನೆ….

-ಸಿದ್ದು ಜನ್ನೂರ್, ಚಾಮರಾಜನಗರ
—–
The post ಅನುದಿನ ಕವನ-೧೯೨೦, ಕವಿ: ಸಿದ್ದು ಜನ್ನೂರು, ಚಾಮರಾಜನಗರ appeared first on Karnataka Kahale.
]]>The post ಅನುದಿನ ಕವನ-೧೯೧೯, ಕವಯತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಕಳಿಸದೇ ಹೋದ ಸಂದೇಶ appeared first on Karnataka Kahale.
]]>ಕೆಲವೊಮ್ಮೆ ಬಹಳ ಯೋಚಿಸಿ
ಬರೆದ ಸಂದೇಶಗಳು ಹಾಗೇ
ಉಳಿದು ಹೋಗಿಬಿಡುತ್ತವೆ .
ಆ ಕ್ಷಣದಲ್ಲಿ ಹೇಳಬೇಕಿದ್ದ
ಅನೇಕ ವಿಷಯಗಳು
ಆ ಕ್ಷಣದ ಆಸೆ, ಪ್ರೀತಿ, ಕೋಪ ,
ಹತಾಶೆ ಹೀಗೆ ಹಲವಾರು ಭಾವಗಳು
ಮತ್ತೆ ಮತ್ತೆ ಅದನ್ನೇ ಓದುತ್ತೇವೆ
ಕಳಿಸಬೇಕೋ, ಬೇಡವೋ
ಬಗೆಹರಿಯದ ದ್ವಂದ್ವ.
ಕಳಿಸಿ ಪ್ರಯೋಜನವಾಗದು
ಎನಿಸಿದಾಗ ಮತ್ತೆ ಅದ
ಅಳಿಸಿಹಾಕುವ ಕಾಯಕ
ಕಾರಣ ವಿವರಿಸುವುದು ಕಷ್ಟವೇ
ಕಳಿಸಬೇಕಿದ್ದದ್ದು ಯಾವುದೋ
ಸಣ್ಣ ವಿಷಯವೆಂದಲ್ಲಾ…
ಅಷ್ಟೆಲ್ಲಾ ಭಾವನೆಗಳ ಬಸಿದು
ಬರೆದು ಹಾಕಿದಾಗ , ಅತ್ತ ಕಡೆ
ಇದನ್ನು ಉಪೇಕ್ಷಿಸಿಬಿಟ್ಟರೆ !
ಅನುಭವಕ್ಕೆ ಮಾತ್ರ ನಿಲುಕುವ
ಸೂಕ್ಷ್ಮ ವಿಷಯಗಳಿವು ಬಿಡಿಸಿ
ಹೇಳಲಾರದಂಥವು. ಕೆಲವೊಮ್ಮೆ
ಮಾತಿನಲ್ಲಿ ಹಂಚಿಕೊಂಡ ನೂರು
ವಿಷಯಗಳಿಗಿಂತ , ಕಳಿಸದೇ
ಅಳಿಸಿಹಾಕಿದ ಕೆಲವು
ಆತ್ಮವನ್ನೇ ತೆರೆದಿಡುವಂಥವು …

-ರೂಪ ಗುರುರಾಜ, ಬೆಂಗಳೂರು
The post ಅನುದಿನ ಕವನ-೧೯೧೯, ಕವಯತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಕಳಿಸದೇ ಹೋದ ಸಂದೇಶ appeared first on Karnataka Kahale.
]]>The post ಅನುದಿನ ಕವನ-೧೯೧೮, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ ಲಹರಿ appeared first on Karnataka Kahale.
]]>ಕಾವ್ಯಲಹರಿ..!
ಭಾವದ ಕುಲುಮೆಯಲ್ಲಿ
ಪದಗಳು ಹೊರಳಿ
ನರಳಿ ಅರಳಬೇಕು
ಸುಂದರ ಸುಮಧುರ
ಅಪೂರ್ವ ಕವಿತೆಗಳಾಗಿ
ಮಿನುಗಿ ಹೊಳೆಯಬೇಕು.!
ಅರಿವಿನ ಒಲುಮೆಯಲ್ಲಿ
ಶಬ್ಧಗಳು ಬಾಗಿ
ಮಾಗಿ ಬೀಗಬೇಕು
ಜ್ವಲಿಸಿ ಪ್ರಜ್ವಲಿಸಿ
ಅಕ್ಷರ ಪ್ರಣತೆಗಳಾಗಿ
ಬೆಳಗುತ್ತ ಬೆಳಕಾಗಬೇಕು.!
ಅನುಭವದ ಚಿಲುಮೆಯಲ್ಲಿ
ಚಿಂತನೆಗಳು ಮಿಂದು
ನೆನೆದು ಶುಭ್ರವಾಗಬೇಕು.
ನಿರ್ಮಲ ನಿಷ್ಕಲ್ಮಶ
ಚೈತನ್ಯದ ಒರತೆಗಳಾಗಿ
ಹರಿದು ಹಸಿರಾಗಬೇಕು.!
ಸತ್ಯಗಳ ನಿಲುಮೆಯಲ್ಲಿ
ತತ್ವಗಳು ಸಾತ್ವಿಕವಾಗಿ
ತಾತ್ವಿಕವಾಗಿ ದೃಢವಾಗಬೇಕು..
ದಿಟ್ಟವಾಗಿ ದಟ್ಟವಾಗಿ
ಸತ್ವಯುತ ಸಮತೆಗಳಾಗಿ
ಸ್ಫುರಿದು ಸಾಕಾರವಾಗಬೇಕು.!
ಜೀವದ ನಲುಮೆಯಲ್ಲಿ
ಸ್ವರಗಳು ಸುಸ್ವರಗಳಾಗಿ
ನಾದವಾಗಿ ನಿನಾದವಾಗಬೇಕು..
ಹೃದ್ಯವಾಗಿ ಪದ್ಯವಾಗಿ
ಮಧುಮಧುರ ಗೀತೆಗಳಾಗಿ
ಮಾರ್ದನಿಸಿ ಝೇಂಕಾರವಾಗಬೇಕು.!

-ಎ.ಎನ್.ರಮೇಶ್. ಗುಬ್ಬಿ.
The post ಅನುದಿನ ಕವನ-೧೯೧೮, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ ಲಹರಿ appeared first on Karnataka Kahale.
]]>