ಅನುದಿನ ಕವನ-೧೯೨೫, ಕವಯತ್ರಿ:ಮಂಜುಳಾ ಭಾರ್ಗವಿ, ಬೆಂಗಳೂರು

ನಂಬಿ!! ನೋಟವನ್ನಷ್ಟೇ ಮುಟ್ಟಿ ಬಂದೆ.
ಬೇರೆ ಯಾವುದರ ಸ್ಪರ್ಶವೂ ನನಗೆ ನೆನಪಿಲ್ಲ.

ರಾತ್ರಿಯಿಡೀ ಸಂಭಾಷಣೆಯಲ್ಲಿ ತೊಡಗಿದ್ದೆ.
ಚೂರು ವಿಶ್ರಮಿಸುವೆ. ಕನಸಿನ ನೆನಪಿಲ್ಲ.

ಒಡಲಲ್ಲೀಗ ಪ್ರೀತಿಯ ನದಿ ಕದಲುತ್ತಿದೆ.
ಜೀವನ್ಮುಖಿ ಹಾಕಿದ ಹುಟ್ಟ ನೆನಪಿಲ್ಲ.

ಮುಳ್ಳ ಬೇಲಿಗಳನ್ನೆಲ್ಲ ಹೂವಾಗಿಸುವಷ್ಟು
ದಿಟ್ಟ ಪ್ರೇಮಿಯ ಮುಖ ನೆನಪಿಲ್ಲ.

ಇಳೆ ತಂಪು ತನುವಾಗುತ್ತಿದೆ
ಮಳೆ ಸುರಿದ ನೆನಪಿಲ್ಲ.

ನಿದಿರೆಗೆಟ್ಟ ತಾರೇ ಆಗಸದ ತುಂಬೆಲ್ಲ
ನಕ್ಷತ್ರಗಳ ಎಣಿಸಿದ್ದೆ ಲೆಕ್ಕ ನೆನಪಿಲ್ಲ.

ಮಾಯಾವಿ ಕೌದಿ ಹೊದಿಸಿದ್ದು ಯಾರು?
ತೋಳ ತೆಕ್ಕೆ ತಬ್ಬುಗೆಯ ನೆನಪಿಲ್ಲ.

ಮಳೆಯಂತವಳ ಒಡಲಲ್ಲೀಗ
ನೂರು ಕಡಲು ಅಲೆಗಳ ನೆನಪಿಲ್ಲ.


-ಮಂಜುಳಾ ಭಾರ್ಗವಿ, ಬೆಂಗಳೂರು

Leave a Reply

Your email address will not be published. Required fields are marked *