ಶಂಕರಘಟ್ಟ, ಏ . 16: ಸರಳತೆ , ಸಜ್ಜನಿಕೆ, ಶಿಸ್ತು, ಪ್ರಾಮಾಣಿಕತೆ, ಆತ್ಮವಿಶ್ವಾಸ, ಆತ್ಮಾಭಿಮಾನದ ಸಂಗಮ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಪ್ರಾಧ್ಯಾಪಕ ವೃತ್ತಿಗೆ ಘನತೆ ತಂದುಕೊಟ್ಟವರು ಎಂದು ಹಿರಿಯ ಸಾಹಿತಿ ಡಾ. ಕುಮಾರಚಲ್ಯ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗವು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸಿದ್ದ ‘ಜಿ.ಎಸ್.ಶಿವರುದ್ರಪ್ಪ: ಮರು ಓದಿನ ನೆಲೆಗಳು’ ಎಂಬ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದರು. ಅಧ್ಯಯನ, ಅಧ್ಯಾಪನ ಮತ್ತು ಸೃಜನಶೀಲತೆಗೆ ಅನನ್ಯ ಕಾಣ್ಕೆ ನೀಡಿದವರು ಜಿಎಸ್ಎಸ್ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ
ಎಲ್. ಎನ್. ಮುಕುಂದರಾಜ್ ಅವರು, ಜಿಎಸ್ಎಸ್ ಕನ್ನಡ ಸಂಸ್ಕೃತಿಗೆ ಹೊಸ ಚಿಂತನೆಗಳನ್ನು ನೀಡಿದವರು ಎಂದು ಹೇಳಿದರು. ಸಾಹಿತಿ ಬಸವರಾಜ ಕಲ್ಗುಡಿ, ಕೇಶವ ಶರ್ಮ, ಹೊಸಳ್ಳಿ ದಾಳೇಗೌಡರು, ಉಮಾಪತಿ,
ಕನ್ನಡ ಭಾರತಿ ನಿರ್ದೇಶಕರಾದ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ , ಡಾ. ಚಂದ್ರಿಕಾ , ಡಾ ನಾಗೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಪ್ರತಿಷ್ಠಾನದ ಡಾ. ಸಾಸ್ವೇಹಳ್ಳಿ ಸತೀಶ್ ಸ್ವಾಗತಿಸಿದರು,
ಡಾ. ನವೀನ್ ಮಂಡಗದ್ದೆ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಶೋಧನಾರ್ಥಿಗಳು, ಸಾಹಿತಿಗಳು ಆಗಮಿಸಿದ್ದರು.
*****
