ಅನುದಿನ ಕವನ-೧೯೨೬, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು

1.
ಹಗಲೂ ಇರುಳೂ
ನಿದ್ರಿಸಿದೆ
ಕನಸುಕಂಡೆ, ಕನಸಾಗಿಯೇ
ಉಳಿದೆ.

2.
ಅಸ್ತವ್ಯಸ್ತ ಬದುಕಿನ ಗದ್ದಲದಲ್ಲೂ
‘ಬದುಕಿದೆ’
ಸಂತೆಯ ಮಹಾಗದ್ದಲದಲ್ಲೂ
ಒಂದು ಮೌನವಿದೆ.

3.
ದೂರದ ಹಕ್ಕಿಯ ಕರೆಗೆ
ಓಗೊಡುವ
ಒಂದು ಮೌನದಲ್ಲಿ ಅರಳಿದೆ
ಕವಿತೆ.


-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *