ಜಾನಪದ ಸಂಕ್ರಾಂತಿ ಉತ್ಸವ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಚಾಲನೆ

ಬಳ್ಳಾರಿ, ಜ.12: ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿರುವ ಜಾನಪದ ಸಂಕ್ರಾಂತಿ ಉತ್ಸವದ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ಚಾಲನೆ ನೀಡಿದರು.


ನಗರದ ಶ್ರೀ ಕುಮಾರಸ್ವಾಮಿ ದೇವಸ್ಥಾನದ ಬಳಿ ಇರುವ ಕನಕ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಜಾನಪದ ಪರಂಪರೆಯನ್ನು ಬಿಂಬಿಸುವ ಹಲವು ಕಲಾ ತಂಡಗಳೊಂದಿಗೆ ಗಣ್ಯರು ಹೆಜ್ಜೆ ಹಾಕಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನ ಗೌಡ, ಸದಸ್ಯರಾದ ಕರೇಗೌಡ, ಗಂಗಾವತಿ ವೀರೇಶ್, ಡಿ. ವಿಶ್ವನಾಥ್,  ಬಜ್ಜಪ್ಪನವರ ಅಮರೇಶ್, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ. ಮಂಜುನಾಥ,
ಪ್ರಾಚಾರ್ಯರಾದ ಪಿ.ಸುಜಯೀಂದ್ರ ಗೌತಮ್, ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಕೆ.ಸಿ ಸಜ್ಜನ್, ಪರಿಷತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಅಶ್ವರಾಮು ಮತ್ತು ಸಂಘಟನಾ ಕಾರ್ಯದರ್ಶಿ ಹೇಮಾ ಮಂಜುನಾಥ, ವೀವಿ ಸಂಘ, ಪರಿಷತ್ತಿನ ಪದಾಧಿಕಾರಿಗಳು, ಜನಪದ ಪ್ರಿಯರು ಭಾಗವಹಿಸಿದ್ದರು.


******

Leave a Reply

Your email address will not be published. Required fields are marked *