ಅನುದಿನ ಕವನ-೧೬೩೭, ಕವಿ: ಡಾ. ಬಿ ಎಂ‌ ಪುಟ್ಟಯ್ಯ, ವಿದ್ಯಾರಣ್ಯ, ಹಂಪಿ

ದುಡಿಮೆಯಿಂದ ಬಳಲಿದ
ಮೂಳೆ ಚಕ್ಕಳದ
ಸಂಕಟದಲಿ
ಉದುರಿದ
ಬೆವರ ಹನಿಗಳು
ಅದೆಷ್ಟು ಸುಂದರ!
ಎಂದು ವರ್ಣಿಸಿದಿರಿ.

ಸುಸ್ತಾಗಿ
ಅಯ್ಯೊ !
ಎಂದಾಗ
ಮುಖವೆಷ್ಟು ಅಂದ!
ಎಂದು ಹೊಗಳಿದಿರಿ.

ನಮ್ಮನ್ನು
ಹಿಂಡಿ ಹಿಂಡಿ
ಹಿಪ್ಪೆ ಮಾಡಿ
ನಮ್ಮ ಸಮಾಧಿಯ ಮೇಲೆ
ನಿಮ್ಮ ಸೌಂದರ್ಯದ
ಬಂಗಲೆ ಕಟ್ಟಿದಿರಿ.

ಕಲೆ ಎಂದಿರಿ.
ಹೌದು!
ಹೌದು!
ನಿಮ್ಮ ಕಲೆ!
ನಮ್ಮ ಕೊಲೆ!

ಡಾ.ಬಿ ಎಂ ಪುಟ್ಟಯ್ಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ