ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಡಾ.‌ಸಿ. ಎಚ್ ಸೋಮನಾಥ್ ಅವರಿಗೆ ಛಲವಾದಿ ನೌಕರರ ಕಲ್ಯಾಣ ಸಂಘದಿಂದ ಹೃದಯಸ್ಪರ್ಶಿ ಸನ್ಮಾನ

ಬಳ್ಳಾರಿ, ಜು.2: ವಯೋ ನಿವೃತ್ತಿ ಹೊಂದಿದ ಸರಳಾದೇವಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.‌ಎಚ್. ಸೋಮನಾಥ್ ಅವರನ್ನು ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳು ಸನ್ಮಾನಿದ ಕ್ಷಣ ಹೃದಯಸ್ಪರ್ಶಿ ಯಾಗಿತ್ತು.

ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಸೋಮವಾರ ಸಂಜೆ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘ
ಆಯೋಜಿಸಿದ್ದ ಸರಳ, ಅರ್ಥಪೂರ್ಣ ‌ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ, ಶಿಕ್ಷಣ ಇಲಾಖೆಯ ಅಧಿಕಾರಿ ಗೂಳಪ್ಪ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗೂಳಪ್ಪ ಅವರು,31 ವರ್ಷಗಳ ಕಾಲ ಉಪನ್ಯಾಸಕ, ಸಹಾಯಕ, ಸಹ ಮತ್ತು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಡಾ.‌ಸೋಮನಾಥ್‌ ಅವರು ನಮ್ಮ ಸಮಾಜಕ್ಕೆ ಗೌರವ ತಂದಿದ್ದಾರೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಹನುಮಪ್ಪ ಅವರು, ಡಾ. ಸೋಮನಾಥ್ ಅವರು ಸಂಘದ‌ ಗೌರವಾಧ್ಯಕ್ಷರಾಗಿದ್ದು ಸಮಾಜ ಹಾಗೂ ನೌಕರರ ಸಂಘಟನೆಗೆ ತನು, ಮನ ಹಾಗೂ ಧನದಿಂದ‌ ದುಡಿಯುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ ಡಾ.‌ಸೋಮನಾಥ್ ಅವರ ಹೋರಾಟ ಮನೋಭಾವ, ಶೈಕ್ಷಣಿಕ ಸೇವೆ, ವಿದ್ಯಾರ್ಥಿಗಳಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ವಿವರಿಸಿದರು.
1985ರಲ್ಲಿ ಆರಂಭವಾದ ಕಾಲೇಜಿನ 31 ನೇ ಪ್ರಾಚಾರ್ಯರಾಗುವ ಮೂಲಕ ತಳ, ಶೋಷಿತ ಸಮುದಾಯಗಳಿಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ದೇಶದ ಏಳನೇ‌ ಸ್ಥಾನದಲ್ಲಿರುವ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯರಾದ ಎಸ್.ಸಿ-ಎಸ್.ಟಿ ಸಮಾಜದ ಪ್ರಪ್ರಥಮರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕೊಂಡಾಡಿದರು.
ನಗರ ಶಾಸಕರೂ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾ ಭರತ ರೆಡ್ಡಿ ಮತ್ತು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ.‌ಮಾನಯ್ಯ ಅವರು ನೀಡಿದ ಸಹಕಾರ, ಬೆಂಬಲಕ್ಕೆ ಸಂಘದ ಪರವಾಗಿ ಮಂಜುನಾಥ್ ಕೃತಜ್ಞತೆ ಅರ್ಪಿಸಿದರು.
ವಿಶ್ರಾಂತ ಜೀವನ ಸುಖಕರವಾಗಿರಲಿ‌ ಆಶಿಸಿದ ಮಂಜುನಾಥ್, ಪೂರ್ತಿ ಸಮಯವನ್ನು ಸಂಘ ಹಾಗೂ ಶೋಷಿತ ಸಮುದಾಯಗಳ ಪ್ರಗತಿಗೆ ಮೀಸಲಿರಿಸಬೇಕೆಂದು ಕೋರಿದರು.
ವಿ ಎಸ್ ಕೆ‌ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ
‌ರಾಜೇಂದ್ರ ಪ್ರಸಾದ್‌ ಅವರು ಮಾತನಾಡಿ, ಹೋರಾಟಗಾರರಾಗಿರುವ ಡಾ. ಸೋಮನಾಥ್ ಅವರಿಗೆ ಸಂಘದ ವತಿಯಿಂದ ಅಭಿನಂದನಾ ಗ್ರಂಥ ಸಲ್ಲಿಸುವ ಮೂಲಕ ಗೌರವಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಖಜಾಂಚಿ ರಮೇಶ್ ಸಿ ಸುಗ್ನಳ್ಳಿ ಮಾತನಾಡಿ, ಡಾ.‌ಸೋಮನಾಥ್ ಅವರ ವಿಶ್ರಾಂತ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಸಿಎಂಎಸ್ ಜಿಲ್ಲಾಧ್ಯಕ್ಷ ಸಿ. ಶಿವಕುಮಾರ್, ಸಂಘದ ಕ್ರಿಯಾಶೀಲ ಮುಖಂಡ ಸಿ.‌ಹನುಮಂತಪ್ಪ(ಟೈಗರ್) ಮತ್ತಿತರರು ಮಾತನಾಡಿದರು.
ವಿವಿಧ ಸಂಘಟನೆಗಳ
ಮುಖಂಡರಾದ 72ರ ಹರೆಯದ ಸುಂಕಣ್ಣ, ಸಿ. ಹನುಮೇಶ್, ಶಂಕರ್ ನಂದಿಹಾಳ್, ಶ್ರೀನಿವಾಸ್‌ ಮಹಾರಾಜ್, ಬೈಲೂರು ಲಿಂಗಪ್ಪ, ಗೋನಾಳ್ ಮಾನಯ್ಯ, ರಾಮಕೃಷ್ಣ, ತಾಳೂರು ರಂಗಪ್ಪ, ಸಂಗನಕಲ್ಲು ತಿಪ್ಪೇಸ್ವಾಮಿ,
ಕಲ್ಯಾಣ ಸಂಘದ ಹಿರಿಯ ಸದಸ್ಯರಾದ ಸಿ. ಹರಿದಾಸಪ್ಪ, ಎಎಸ್ಐ ಕಂಪ್ಲಿ ತಿಪ್ಪಣ್ಣ, ನಿವೃತ್ತ ಎಸ್.ಐ ಶಂಕರಪ್ಪ, ಪೊಲೀಸ್ ಇಲಾಖೆಯ ನಿವೃತ್ತ ಅಧೀಕ್ಷಕ  ಮಾರುತಿ ಕುರುವಳ್ಳಿ,  ನಿವೃತ್ತ ಎಎಸ್ಐ ಸಿ.‌ಸುರೇಶ್, ಪದಾಧಿಕಾರಿಗಳಾದ ಸಿ. ಎಸ್. ಲಕ್ಷ್ಮಿಕಾಂತಯ್ಯ, ಮಂಜುನಾಥ್, ಪ್ರೊ.‌ಎ ಎಸ್ ಬಸವರಾಜ್ ತೆಕ್ಕಲಕೋಟೆ, ವಿಲಾಸ್ ಮಾನಕರ್, ಸಿ. ನಾಗರಾಜ್ ಚಾಗನೂರು, ಅಧ್ಯಾಪಕ ಸಿ.‌ತಿಪ್ಪೇಸ್ವಾಮಿ, ಭೀಮರಾವ್ ಐಎಎಸ್ ಸ್ಟಡಿ ಸರ್ಕಲ್ ಮುಖ್ಯಸ್ಥ ಶೇಖರ್‌ ಕುರವಳ್ಳಿ, ಪಿಸಿ ವೀರೇಶ್ ಸಿ, ಕೊರ್ಲಗುಂದಿ ರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಆತ್ಮೀಯ ಸನ್ಮಾನ: ತಮ್ಮ ಭಾವಚಿತ್ರ ಇರುವ ಫೋಟೊ ಕೇಕ್ ಕತ್ತರಿಸಿ ಸಂಭ್ರಮಿಸಿದ ಡಾ.‌ಸೋಮನಾಥ್ ಅವರನ್ನು ಸಂಘದ ಪದಾಧಿಕಾರಿಗಳು ಶಾಲು, ಮೈಸೂರು ಪೇಟಾ, ಭವ್ಯ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ವಿವಿಧ ಸಂಘಟನೆಗಳ‌ಮುಖಂಡರು ಸತ್ಕರಿಸಿದರು.
—–