ಭಾರತ ರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ತಳ‌ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು -ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ

ದಾವಣಗೆರೆ, ಜು.27:  ತಳ, ಶೋಷಿತ ಸಮುದಾಯಗಳು ಶಿಕ್ಷಣದ ಮೂಲಕವೇ ಉನ್ನತ ಸ್ಥರಕ್ಕೆ ಏರಬೇಕು ಎಂಬುದು ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.‌ಎಚ್.‌ಸಿ.‌ಮಹದೇವಪ್ಪ ಅವರು ತಿಳಿಸಿದರು.       ಅವರು ನಗರದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಛಲವಾದಿ‌ ಮಹಾಸಭಾ ಆಯೋಜಿಸಿದ್ದ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.      ಬಾಬಾ ಸಾಹೇಬರ ಆಶಯದಂತೆ ಎಲ್ಲರೂ ಶಿಕ್ಷಣವನ್ನೇ ಬದುಕಿನ ಆದ್ಯತೆಯಾಗಿಸಿಕೊಳ್ಳಬೇಕೆಂದು ಹೇಳಿದರು.           

ಕಾರ್ಯಕ್ರಮವನ್ನು ರಾಜ್ಯ ಗೃಹ ಸಚಿವ ಡಾ.‌ಜಿ. ಪರಮೇಶ್ವರ್ ಅವರು‌ ಉದ್ಘಾಟಿಸಿದರು.                      ಈ ಅರ್ಥಪೂರ್ಣ ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಶ್ರೀ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ವಹಿಸಿದ್ದರು.

    ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಹಿರಿಯ ಮುಖಂಡ ಎಫ್ ಎಚ್ ಜಕ್ಕಪ್ಪನವರ್,  ಸಿಎಮ್ ಎಸ್ ಜಿಲ್ಲಾಧ್ಯಕ್ಷ ರುದ್ರಮುನಿ, ಚಿತ್ರದುರ್ಗದ ಮುಖಂಡರಾದ ಹೆಚ್ ಸಿ‌ ನಿರಂಜನ‌ಮೂರ್ತಿ ಮತ್ತಿರರು ಉಪಸ್ಥಿತರಿದ್ದರು.