ಅನುದಿನ‌ ಕವನ-೧೬೭೮, ಯುವ ಕವಿ:ತರುಣ್ ಎಂ ಆಂತರ್ಯ, ಟಿ. ನಾಗೇನಹಳ್ಳಿ, ಕವನದ ಶೀರ್ಷಿಕೆ: ನನ್ನ ಪ್ರೇಮಿಯಾಗಲು ಬಿಡು

ನನ್ನ ಪ್ರೇಮಿಯಾಗಲು ಬಿಡು

ನನ್ನನ್ನು ಹೀಗೆ ಕೊಳೆಯಲು ಬಿಡು
ಹೃದಯದಲ್ಲಿರುವ ಪ್ರೇಮ ಮಣ್ಣಲಿ ಬೆರೆತು
ಮೊಳಕೆಯೊಡೆದು ಮರವಾಗಿಯಾದರು
ನಿನಗೆ ನೆರಳ‌ನೀಡಬಲ್ಲೆ

ನನ್ನನ್ನು ಮಳೆಯಾಗಲು ಬಿಡು
ಹೆಪ್ಪುಗಟ್ಟಿದ ಮೋಡದಂತೆ
ಧಾರಾಕಾರವಾಗಿ ಸುರಿದು
ಬರಡಾದ ನಿನ್ನೊಲವ
ಅರೆ ಕ್ಷಣದಲ್ಲಿ ತಣಿಸಬಲ್ಲೆ

ನನ್ನನ್ನು ಕಡಲಾಗಲು ಬಿಡು
ಅನುರಾಗದ ಅಲೆಗಳಂತೆ
ತೀರವಾದ ನಿನ್ನಪ್ಪಳಿಸಿ
ಕೊಂಡೊಯ್ದು ನನ್ನೊಂದಿಗೆ
ಏಕಾಂತದಿ ಭೋರ್ಗರೆಯಬಲ್ಲೆ

ನನ್ನನ್ನು ಹಣತೆಯಾಗಲು ಬಿಡು
ನಿನ್ನಾವರಿಸಿರುವ ಅಪನಂಬಿಕೆಯ
ಅಂಧಕಾರ ಸುಟ್ಟು
ಬೆಳಕಾಗಿ ಪ್ರಜ್ವಲಿಸಬಲ್ಲೆ

ನನ್ನನ್ನು ಪ್ರೇಮೀಯಾಗಲು ಬಿಡು
ಮನದಲಿ ಕೊಂಚ ಜಾಗಕೊಡು
ಕೊನೆಯುಸಿರಿರೊವರೆಗು
ಈ ಪಡಪೋಸಿ ಬದುಕ
ನಿನ್ನೊಲವಿಗಾಗೆ ಮಿಡಿದು ಕಳೆಯ ಬಲ್ಲೆ

-ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ✍️