👍❤️🧏♂️ ನನ್ನವಳು ಚಂದ್ರಿಕಾ 🧏♂️❤️👍
ಬಾಳಿನಲಿ ಬಂದವಳು,
ಭರವಸೆಯ ತಂದವಳು,
ಸಪ್ತಪದಿಯ ತುಳಿದವಳು,
ಸುಃಖ ದುಃಖಕದು ಸ್ಪಂದಿಸುವವಳು,
ನನ್ನವಳು ಚಂದ್ರಿಕಾ.❤️🧏♂️
ತವರನು ತೊರೆದವಳು,
ಸರ್ವರೊಳು ಬೆರೆತವಳು,
ನಿತ್ಯ ಹರುಷಕದು ಜೊತೆಯಾದವಳು,
ಸುಖ ಸಂಸಾರಕದು ಸ್ಫೂರ್ತಿಯಾದವಳು,
ನನ್ನವಳು ಚಂದ್ರಿಕಾ.❤️🧏♂️
ಮನವರಿತು ನಡೆಯುವಳು,
ಮನೆಯದನು ಬೆಳಗುವವಳು,
ಬಾಳಿನಾಗಸದಿ ಚಂದ್ರಿಕೆಯಾದವಳು,
ಪ್ರತಿ ಹೆಜ್ಜೆಯಲು ಸಮಭಾಗಿಯಾದವಳು,
ನನ್ನವಳು ಚಂದ್ರಿಕಾ.❤️🧏♂️
-ವಿ.ಆರ್. ಮುರಲೀಧರ್, ಬೆಂಗಳೂರು✍️