ಅನುದಿನ ಕವನ-೧೬೯೩, ಕವಿ: ವೈ.ಜಿ. ಅಶೋಕ‌ಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ:

ಹೂವಿಲ್ಲದ ಹಾಸಿಗೆ

ಮೈ ತುಂಬಲು
ಒಡವೆಯಿದೆ
ಮನೆಯೊಡತಿ
ಮನೆಯೊಳಿಲ್ಲ…

ಅವನೋ ಬರಿ ಮೈ ದಾಸ
ದಾಸವಾಳ ಗಿಡದಂತೆ ಮಡದಿ
ಮನೆ ತುಂಬಾ ಹೂಗಳು…

ಮಲ್ಲಿಗೆ ಸಂಪಿಗೆಯರು
ಊರ ತುಂಬ ಘಮಲು
ಕಿತ್ತು ಮುಡಿಯುವವರಿಗೆ ಬರವಿಲ್ಲ

ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು
ಕೇಳುವವರು ಗತಿಯಿಲ್ಲ

ಆದರೂ ನಿತ್ಯ ದಿಕ್ಕೆಟ್ಟು ಹರಿಯುತಿಹರು
ದಿನವೂ ಸೂರ್ಯ ಚಂದ್ರರು ಸರದಿ ಮುಗಿಸಿಹರು…

ಹೂವಿಲ್ಲದ ಹಾಸಿಗೆ
ಮೊಗ್ಗುಗಳು ಮೊಳಕೆಯೊಡೆಯಲಿಲ್ಲ


-ವೈ.ಜಿ. ಅಶೋಕಕುಮಾರ್, ಬೆಂಗಳೂರು
—–