ಅನುದಿನ ಕವನ-೧೬೯೭, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ. ಶಿವಮೊಗ್ಗ, ಕವನದ ಶೀರ್ಷಿಕೆ:ಸೈನಿಕನಾದರೂ….

ಸೈನಿಕನಾದರೂ….

ಅವನು ಅವಳ ಅಪ್ಪ
ಅವನು ಅವಳ ಮಗ
ಅವನು ಅವರ ಸೋದರ
ಅವನು ಅವಳ ಗಂಡ
ಅವನು ಅವಳ ಪ್ರೇಮಿ
ಅವನು ಅವರ ಗೆಳೆಯ
ಅವನು ಮಾವ ಭಾವ
ಅವನಾದರೂ ಹೊಡೆದಾಡಿ
ಯಾಕೆ ಸಾಯಬೇಕು?

ಈ ಭೂಮಿ ನೀನು ಬೆವರು
ಹರಿಸಿ ಗಳಿಸಿದ್ದೆನು?
ದೇಶ ಕಾಯುವುದೆಂದರೇನು?
ಮಾತಿಗೆ ಮಾತು ಬೆಳೆಯುವುದೆಂದರೇನು?
ಕಂಡ ಕಂಡವರ ಮೇಲೆ
ಹಾಯುವುದೆಂದರೇನು?
ಕಂಡ ಕಂಡವರ
ಸಾಯಿಸುವುದೆಂದರೇನು?
ಏನು? ಏನು?


-ಸವಿತಾ ನಾಗಭೂಷಣ, ಶಿವಮೊಗ್ಗ
—–