ಉರಿದ ಕುಲುಮೆ
ತಿರುಗಾಡುತ್ತಿದೆ ಭವ್ಯ ಭೂಮಿಯಲಿ ಅತಂತ್ರದ ಕುಲುಮೆ
ಸ್ವಚ್ಛ ಝಳಕೆ ಸುತ್ತುತಿದೆ
ಆದರೂ ಕೊನೆಯರಿಯದ ನಿಲುವು ಬರಿಗಾಲಿನ ಬೆಂಕಿಯೊಳು ನಡೆಯುತ್ತಿದೆ
ಬಿಟ್ಟಿರುವ ಭುವ ಭಿಕ್ಷೆಗೆ
ಎಲ್ಲಿಲ್ಲದ ಹಗರಣದ ಹಾರಾಟ
ಬಿಸಿಲು ಕುದುರೆಯ ಮಾಧುರ್ಯಕೆ ಎಡರಿಲ್ಲದೆ ಕನಸ ಕಮರಿಕೆ….
ಬಾಳ ಬುತ್ತಿಗೆ ಕರುಣೆಇಲ್ಲದ
ಕತ್ತಲು ಜ್ಯೋತಿಗೆ ಹೆದರುತ್ತಿದೆ
ನೆರೆಹಾವಳಿಯ ಪರಿಮಳಕೆ
ಮಡಕೆ ಮುಗುಚಿ ನಾಚಿದೆ…
ಎಲ್ಲವೂ ಅಘೋರ ಆದರೂ
ಕುತಂತ್ರಗಳ ಮಾರ್ಮನ್ಯಕೆ
ಎದೆಯ ಕುತ್ತು ನೋವ ಸಹಿಸದೆ ಸಾಯುತಿದೆ…
ಕಾಲೆಳತದ ನದಿ ಪ್ರತಿ ಓಣಿಯಲ್ಲಿ ರಭಸದಿ ಹರಿಯುತಿದೆ.
ಇದಕೆ ತಡೆಗಟ್ಟುವ ಒಡ್ದು
ಇಲ್ಲ. ಆದರೂ ಅಂಗಡಿ
ಬಾಳೆ ತೆಂಗು ತರಕಾರಿಯ
ತರಬಾಳು ಕುಂತು ವಿಚಿತ್ರ
ಸೂಚುತ್ತಿದೆ…
ಬಿಡುವಿಲ್ಲದ ಬದುಕಿಗೆ
ರಾಜಕೀಯದ ಹರಟೆ
ಕುಹಕ ಎಬ್ಬಿಸಿ ತಾಂಡವಾಡುತಿದೆ…
ಕ್ಷಣಿಕದ ನೆಲೆಗೆ
ಮನದ ನೆಲೆ ಜೋರೊಳು ಅರಚುತ್ತಿದೆ…
ಭವ್ಯ ಭಾರತ ಕುಲುಮೆಯೊಳು
ಚಕ್ರ ನಿಲುವಿಲ್ಲದೇ ಮಂಕಾಗಿದೆ ಇದೇ ನಾ
ಸಹಜ ಜನ್ಮದ ಮರ್ಮ….
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ