ಅನುದಿನ ಕವನ-೧೭೧೦, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.

ಮಕ್ಕಳ ಮನಸು ಬಿಳಿ ಹಾಳೆಯಿದ್ದಂತೆ,
ಏನನ್ನು ಬರೆಯುತ್ತೇವೆಯೋ
ಅದು ಗಾಢವಾಗಿ ಮೂಡಿಬಿಡುತ್ತದೆ.
ಒಳ್ಳೆಯದನ್ನೇ ಬರೆಯೋಣ

ಶಿಕ್ಷಕರು ಏನು ಹೇಳುವರೋ
ಮಕ್ಕಳು ಅದನ್ನೇ ನಂಬುತ್ತಾರೆ
ಯಾಕೆಂದರೆ ಶಿಕ್ಷಕರೇ ಅವರಿಗೆ ಆದರ್ಶ
ಸುಳ್ಳು ಹೇಳದಿರೋಣ

ಶಿಕ್ಷಕರು ಏನು ಮಾಡುವರೋ
ಮಕ್ಕಳು ಅದನ್ನೇ ಅನುಸರಿಸುತ್ತಾರೆ
ಯಾಕೆಂದರೆ ಶಿಕ್ಷಕರೇ ಅವರಿಗೆ ಜಗತ್ತು
ಸರಿಯಾಗಿ ನಡೆದುಕೊಳ್ಳೋಣ

ಮಕ್ಕಳ ಮನಸು
ಮಣ್ಣಿನ ಮುದ್ದೆ ಇದ್ದ ಹಾಗೆ
ನಮ್ಮ ನಡೆ, ನುಡಿ, ವರ್ತನೆ
ಅಚ್ಚೊತ್ತುತ್ತವೆ
ಅವರನ್ನು ತಿದ್ದುವ ಮೊದಲು
ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ

ಯಾವತ್ತೂ ಉತ್ತಮ ದಾರಿಯಲ್ಲಿಯೇ ನಡೆಯೋಣ
ಯಾಕೆಂದರೆ ಯಾವಾಗಲೂ ಮಕ್ಕಳನ್ನು ಗುರುಗಳು ಹಿಂಬಾಲಿಸುವುದಿಲ್ಲ
ಗುರುಗಳನ್ನು ಮಕ್ಕಳು ಹಿಂಬಾಲಿಸುವರು ಎಂಬುದನ್ನು ಮರೆಯದಿರೋಣ

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.