ಶಿಕ್ಷಕರ ದಿನಾಚರಣೆ ಶುಭಾಶಯಗಳೊಂದಿಗೆ,
—–
ತಾಯಿಲ್ಲದೆ ಮಗು ಭೂಮಿಗೆ ಬಂದಿದ್ದದರೂ ಹೇಗೆ ?
ಶಿಕ್ಷಕರಿಲ್ಲದೆ ನಾವು ಬೆಳೆದಿದ್ದದರು ಹೇಗೆ ?
ಖಾಲಿ ಹಾಳೆಯಲ್ಲಿ ಅಕ್ಷರದ ಬೀಜವ ಬಿತ್ತಿದವರು.
ನನ್ನ ಈ ಬದುಕಿಗೆ ತಿರುವನ್ನು ಕೊಟ್ಟವರು.
ಸಾಧನೆಗೆ ಸದಾ ಸ್ಪೂರ್ತಿಯಾಗಿರುವರು.
ಅವರೇ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ….ರತ್ನಮ್ಮ
ಗುರು ಒಂದು ಬರೀ ಪದವಲ್ಲ ಶಕ್ತಿ ಎಂದು ಎಲ್ಲರಿಗೂ ತಿಳಿದಿರುವ ವಿಷಯವಲ್ವಾ . ಆದರೂ ಏನೋ ಗೊತ್ತಿಲ್ಲ ಯಾವ ವಿದ್ಯಾರ್ಥಿ ತನ್ನ ಶಿಕ್ಷಕರನ್ನು ದ್ವೇಷಿಸುವುದನ್ನು ನಾನು ಕಂಡಿಲ್ಲ ಹಾಗೂ ಕೇಳಿಲ್ಲ ಕೂಡ. ಬಹುಶಃ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದರೆ ಅವರನ್ನು ಬಯಕೊಳ್ಳಬಹುದು ಆದರೂ ನಮಗೆ ನಮ್ದೇ ತಪ್ಪು ಎಂದು ತಿಳಿಯುತ್ತೆ ಅಲ್ವಾ. ಶಿಕ್ಷಕರು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳು. ಅವರು ನಮಗೆ ಜ್ಞಾನವನ್ನು ನೀಡುವವರು, ನೈತಿಕ ಮೌಲ್ಯಗಳನ್ನು ಕಲಿಸುವವರು ಮತ್ತು ಭವಿಷ್ಯದತ್ತ ದಾರಿ ತೋರಿಸುವವರು. ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ ಮತ್ತು ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ವಿಷಯವನ್ನು ಸುಲಭವಾಗಿ ತಿಳಿಸುವುದು.ಶಿಸ್ತಿನೊಂದಿಗೆ ಬೆಳೆಯಲು ಮಾರ್ಗದರ್ಶನ ನೀಡುವುದು.ವಿದ್ಯಾರ್ಥಿಗಳ ಆಸಕ್ತಿಗಳನ್ನು ಗುರುತಿಸಿ ಬೆಳೆಸುವುದು.
ಉತ್ತಮ ಸಮಾಜವನ್ನು ನಿರ್ಮಿಸಲು ಮೌಲ್ಯಾಧಾರಿತ ಶಿಕ್ಷಣ ನೀಡುವುದು.
ನಮ್ಮ ಜೀವನ ರೂಪಿಸುವಲ್ಲಿ ಅನೇಕರು ತಮ್ಮದೇ ಅದ ಕೊಡುಗೆ ನೀಡಿದರು ಕೂಡ ನಮಗೆ ಒಬ್ಬ ಶಿಕ್ಷಕರು ಮಾತ್ರ ಗಾಢವಾದ ಪ್ರಭಾವ ಬೀರುತ್ತಾರೆ ಅಲ್ವಾ ಅವರೇ ನಮ್ಮ ಅಚ್ಚುಮೆಚ್ಚಿನ ಶಿಕ್ಷಕರು. ನನ್ನ ಪ್ರೌಢಶಾಲೆಯ ಸಮಾಜ ಶಿಕ್ಷಕಿ ರತ್ನ ಮ್ಮ ಮೇಡಂ. ಇವರೊಂದಿಗೆ ಎಲ್ಲ ಗುರುಗಳು ಪಾತ್ರ ಕೂಡ ಇದೆ. ಆದರೂ ಆಂಗ್ಲದಲ್ಲಿ ಫಸ್ಟ್ ಇಂಪ್ರೆಷನ್ ಇಸ್ ಬೆಸ್ಟ್ ಇಂಪ್ರೆಶನ್ ಅನ್ನೋ ತರ ಇವರು ನನಗೆ. ನಮ್ಮ ಬದುಕಿಗೆ ಬೆಳಕು ಅದವರ ಬಗ್ಗೆ ಒಂದು ಪುಟದಲ್ಲಿ ಬರೆಯಿರಿ ಎಂದರೆ ಯಾರಿದನ್ನು ಸಾಧ್ಯವಿಲ್ಲ.ಇದೆ ಪ್ರಶ್ನೆ ಪ್ರಶ್ನೆ ಪತ್ರಿಕೆಯಲ್ಲಿ ಬಂದ್ದಿದಾರೆ ಬರಿಯಬಹುದಿತ್ತು ಏಕೆಂದರೆ ಅದು ಅಂಕಕ್ಕೆ ಮಾತ್ರ ಸೀಮಿತ ಅಲ್ವಾ ಆದರೆ ಇದು ಬದುಕು ಹೇಗೆಂದು ಬಣಿಸಲಿ ನೀವೆ ಹೇಳಿ.
ಒಬ್ಬ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿಯಾಗಬೇಕಾದರೆ ಅವರಲ್ಲಿರಬೇಕಾದ ಗುಣಗಳನ್ನು ಗುಣಿಸಿದವರು. ನಮಗೆ ಧೈರ್ಯ ತುಂಬಿದವರು. ಪ್ರೋತ್ಸಾಹ ನೀಡಿದವರು. ಸಾಧಕನಿಗಿರಬೇಕಾದ ಎಲ್ಲಾ ಗುಣಲಕ್ಷಣಗಳನ್ನು ಬೋಧಿಸಿದರು.
ನನ್ನಲ್ಲಿ ಐಎಎಸ್ ಎಂಬ ಬೀಜವನ್ನು ಬಿತ್ತಿದವರು. ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿದವರು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿದವರು. ನಮ್ಮಲ್ಲಿರುವ ಅಜ್ಞಾನವನ್ನು ಕಳೆದವರು. ನಮಗೆ ಇತಿಹಾಸ ಕಲಿಸುವುದರ ಮೂಲಕ ನಾವು ಹೇಗೆ ಇತಿಹಾಸ ಸೃಷ್ಟಿಸಬೇಕೆಂದು ತಿಳಿಸಿದವರು. ಅಜ್ಞಾನವನ್ನು ಅಳಿಸಿದವರು ಅಕ್ಷರ ಎನ್ನುವ ಬುತ್ತಿಯನ್ನು ಉಣಬಡಿಸಿದವರು . ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ ಏಕೆಂದರೆ ಅವರಲ್ಲಿ ಜ್ಞಾನವಿದ್ದರೂ ಅವರು ಅದೇ ವೃತ್ತಿಯಲ್ಲಿ ಮುಂದುವರೆದು ತಮ್ಮ ಜ್ಞಾನವನ್ನು ತಮ್ಮ ವಿದ್ಯಾರ್ಥಿಗಳಿಗೆ ದಾರೆಯೆರೆದು ಅವರನ್ನು ಸಾಧಕರನ್ನಾಗಿ ಇಡೀ ಪ್ರಪಂಚಕ್ಕೆ ಪರಿಚಯಿಸುವ ಏಕೈಕ ವ್ಯಕ್ತಿ ಶಿಕ್ಷಕ . ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆಗ ತಾಲೂಕು ಮಟ್ಟ ಜಿಲ್ಲಾ ಮಟ್ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ನೀಡಲಾಗುತ್ತದೆ. ಆಗ ಅವರಿಗೆ ಎಷ್ಟು ಸಂತೋಷವಾಗುತ್ತೋ ಅದು ನನಗೆ ಗೊತ್ತಿಲ್ಲ ಆದರೆ ತಮ್ಮ ವಿದ್ಯಾರ್ಥಿ ಬಾನೆತ್ತರಕ್ಕೆ ಬೆಳೆದರೆ ಅಂದರೆ ಅವರು ಸಾಧಕರಾಗಿ ಆ ಗುರುಗಳ ಮುಂದೆ ಬಂದು ನಿಂತರೆ ,ಆ ಖುಷಿಯ ಮುಂದೆ ಇನ್ನೇನು ಬೇಡ ಅವರಿಗೆ . ತಾಯಿಲ್ಲದೆ ಮಗು ಭೂಮಿಗೆ ಬಂದಿದ್ದದರು ಹೇಗೆ ? ಶಿಕ್ಷಕರಿಲ್ಲದೆ ನಾವು ಬೆಳೆದಿದ್ದದರು ಹೇಗೆ ? ನನ್ನನ್ನು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸಲು ಅಕ್ಷರ ಬೋಧಿಸಿದ ನನ್ನೆಲ್ಲ ಗುರುಗಳಿಗೆ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-ಆರ್ ಎಸ್ ರಾಜೇಶ್ವರಿ,ಗುಡುದೂರು, ಬಳ್ಳಾರಿ ಜಿ.
—–