ಪ್ರೀತಿ ಎಂದರೆ…
ಪ್ರೀತಿ ಎಂದರೆ
ಒಂದು ಪದ್ಯದ ನಂಟಿನಷ್ಟೆ
ಪರಿಶುದ್ಧ ಕನವರಿಕೆಯ ಸಾಲೊಂದರ ಮುಂಗಾರು…
ಮೋಡಗಳು ಸಾಗುವ ತಿಳಿ ಮುಗಿಲ
ಆಗಸದ ಹೊಂಬಣ್ಣದ ನೀಲಗಡಲು
ಭುವಿಗೆ ಬೀಳುವ ಹನಿಗಳ ಸಾಂಗತ್ಯ
ನದಿಯಾಗಿ,ಹೊಳೆಯಾಗಿ ಹರಿಯುವ ನೀರಿನಂತೆ…
ಮಂಜು ಮುಸುಕಿದ ವಾತಾವರಣ
ಬೆಟ್ಟಸಾಲುಗಳ ಮನಮೋಹಕ ದೃಶ್ಯ
ಕಣ್ಕಟ್ಟಿ ಮುಗಿಲಬ್ಬಿನಿಂತ ಹಸಿರ ಪಚ್ಚೆ
ಗಿಡ ಮರಗಳ ನಂಟಿಗೆ ಈಗಾ ಮುಗಿಲ ಮುಟ್ಟಿದ ಮಾತು
ವಾವ್…! ಎಲ್ಲವೂ ಈಗಾ ನಿನ್ನಂತೆ ಆಪ್ತ…
ಪ್ರತಿ ಸಂಜೆಗೊಂದು ಇಂತ ನೋಟ
ಯಾವ ಕವಿಗೂ ಸಿಗದಷ್ಟು
ಬಾಯಾರಿದ ಬಯಕೆಗೀಗ ತಂಗಾಳಿ ನೀನಾದ
ಆಕಾಶ ದೀಪದ ತುಂಬಾ ಹಬ್ಬಿನಿಂತ ಮೋಡ ಸಂತೆಗೆ ಪ್ರವಾಸಿಗನೆದೆಗಿಳಿವ ತವಕ…
-ಸಿದ್ದು ಜನ್ನೂರ್, ಚಾಮರಾಜನಗರ
—–