ಹೃದಯದ ಮಾತುಗಳು ಅಷ್ಟು
ಸುಲಭಕ್ಕೆ ಮುಗಿಯುವುದಲ್ಲ.
ದಶಕಗಳಿಂದ ಬಾಕಿ ಇದ್ದಷ್ಟು..
ಗಂಟೆಗಟ್ಟಲೇ ಹರಿಯುತ್ತವೆ.
ಮೋಡ ಕವಿದಿದ್ದೇ ನೆಪವೆಂಬಂತೆ
ಕೊನೆಗೆದ್ದು ಹೊರಟಾಗಲೂ..
ಮತ್ತೆ ಕರೆದ ಹಾಗೆ..
ಕೇಳದೇ ಮರೆತ ಇನ್ನೊಂದು ಪ್ರಶ್ನೆಗೆ
ದನಿಯಾಗುವ ಹಾಗೆ.
ಮಂದಹಾಸ ಮೂಡಿದ್ದು,
ಕೇಳಿದ ಪ್ರಶ್ನೆಗಲ್ಲ.
ಉತ್ತರ ಇಬ್ಬರಿಗೂ ಗೊತ್ತಿತ್ತು ಎಂದು.
ಕವಿದ ಮೋಡ ಈಗ ಮಳೆಯಾಗಲೇಬೇಕಿದೆ.
ಹೆಜ್ಜೆ ಮರೆತವಳು ತುಸು ನೆನೆಯಲೂಬೇಕಿದೆ.
-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
—–