ಅನುದಿನ ಕವನ-೧೮೧೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಹಾದು ಹೋದ ಬೆಳಕು
ಕತ್ತಲೆ ಸರಿಸಿ
ಬದುಕ ಹರಸಿ
ಹಾದು ಹೋದ ಬೆಳಕು…
ಈ ಜೀವನ ಜೀವನ ಬದಲಾಯಿಸಿ…

ಯಾರು ಬಲ್ಲವರು ಯಾರು ತಿಳಿದವರು
ಜೀವನ ಮುಗಿಯದ ಕವಿತೆ…ಏ…
ಯಾರೋ ಹೆತ್ತವರು ಯಾರೋ ಹೊತ್ತವರು
ನಿನಗಿದೆ ನಿನ್ನದೆ ಚರಿತೆ…ಏ…
ಮುಗಿಯದ…ಬಾಳೊಂದು ಮೌನಗೀತೆ
ಬೆಳಗಿದ…ಬೆಳಕಿಗೆ ನಾ ಸೋತೆ….


-ಸಿದ್ದು ಜನ್ನೂರ್, ಚಾಮರಾಜನಗರ
—–