ಸಮೃದ್ಧ ಕನ್ನಡ ಭಾಷೆ ಬಳಸಿದರೆ ಸಂವರ್ಧನೆ ಆಗುವುದು -ಹಿರಿಯ ಸಾಹಿತಿ ಗೊರುಚ

ಶಂಕರಘಟ್ಟ, ಡಿ.16: ಕನ್ನಡ  ಭಾಷೆಗೆ ಸಮೃದ್ಧವಾದ ಇತಿಹಾಸವಿದೆ. ಹಣ ಬಳಸಿದರೆ ಖರ್ಚಾಗುತ್ತದೆ. ಭಾಷೆ ಬಳಸಿದರೆ ಸಂವರ್ಧನೆ ಆಗುತ್ತದೆ ಎಂದು ಖ್ಯಾತ, ಹಿರಿಯ ಸಾಹಿತಿ ಡಾ. ಗೊರು ಚನ್ನಬಸಪ್ಪ ಅವರು ಹೇಳಿದರು.  ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.              ಪ್ರತಿ ವ್ಯಕ್ತಿಯಲ್ಲಿಯೂ . ಸಂಸ್ಕಾರವಿರುತ್ತದೆ. ಇದಕ್ಕೆ ಜಾನಪದ ತಳಹದಿ. ಜಾನಪದ ಜೀವನ ಉಸಿರಾಗಬೇಕು ಎಂದು ತಿಳಿಸಿದರು.                                          ಮಾನಸಿಕ ದೌರ್ಬಲ್ಯದಿಂದ ಸಾಧನೆ ನಾಶವಾಗುವುದು. ಮನದೃಢತೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡಭಾರತಿ ನಿರ್ದೇಶಕ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಪ್ರಶಾಂತ ನಾಯಕ, ಪ್ರೊ ಬಸವರಾಜ ನೆಲ್ಲಿಸರ ಉಪಸ್ಥಿತರಿದ್ದರು. ಡಾ.ಪುರುಷೋತ್ತಮ ಪ್ರಾರ್ಥನೆ ಸಲ್ಲಿಸಿದರು.ಡಾ.ನವೀನ್ ಮಂಡಗದ್ದೆ ನಿರೂಪಿಸಿದರು.