
ಬಳ್ಳಾರಿ, ಜ. 28: ಪ್ರತಿ ವರ್ಷದಂತೆ ‘ಸಂಗಂ ಸಾಹಿತ್ಯ ಪುರಸ್ಕಾರ’ವನ್ನು ನೀಡಲು“ಸಂಗಂ ಟ್ರಸ್ಟ್, ಬಳ್ಳಾರಿ” ನಿರ್ಧರಿಸಿದೆ.
ಈ ಸಲದ ಪುರಸ್ಕಾರವು 2023-25 ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕವನ ಸಂಕಲನ ಪ್ರಕಾರಕ್ಕೆ ಮೀಸಲಿರಿಸಲಾಗಿದೆ. ಪ್ರಶಸ್ತಿಯು 25 ಸಾವಿರ ರೂಪಾಯಿಗಳ ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.
ಆಸಕ್ತ ಬರಹಗಾರರು, ಪ್ರಕಾಶಕರು ತಮ್ಮ ನೆಚ್ಚಿನ ಕವನ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಲು ಸಂಗಂ ಸಂಸ್ಥೆಯ ಅಧ್ಯಕ್ಷರಾದ ಡಾ. ವೈ.ಸಿ. ಯೋಗಾನಂದ ರೆಡ್ಡಿ ಕೋರಿದ್ದಾರೆ.
ನಿಯಮಗಳು : ಕವನ ಸಂಕಲನವು 2023-25 ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರಬೇಕು.
ಕವನ ಸಂಕಲನಗಳ 4 ಪ್ರತಿಗಳನ್ನು ಕಳುಹಿಸಬೇಕು.
ಪ್ರಶಸ್ತಿಗೆ ಕಳುಹಿಸಿದ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ
ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತಪ್ರತಿಗಳಿಗೆ, ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.
ಸಾಹಿತ್ಯ ಪುರಸ್ಕಾರ ಆಯ್ಕೆ ಪ್ರಕ್ರಿಯೆಯ ಕುರಿತು ಸಂಗಂ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಈ ಮೇಲ್ಕಂಡ ವರ್ಷಗಳಲ್ಲಿ ಪ್ರಕಟಗೊಂಡ ಸಂಕಲನಗಳು 05-03-2026 ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.
ಅವಧಿಯ ನಂತರ ಬಂದ ಕೃತಿಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
ಪುಸ್ತಕಗಳನ್ನು ಈ ಕೆಳಕಂಡ ವಿಳಾಸಕ್ಕೆ ರಿಜಿಸ್ಟರ್ ಅಂಚೆಯ ಮೂಲಕ ಕಳುಹಿಸಿಕೊಡತಕ್ಕದ್ದು.
ಕೆ. ಶಿವಲಿಂಗಪ್ಪ ಹಂದಿಹಾಳು
ಮನೆ ಸಂಖ್ಯೆ : 44/C
ಚೇತನಾ ಕ್ಲಿನಿಕ್ ಪಕ್ಕದಲ್ಲಿ,
ಜಿಮ್ ಖಾನಾ ರಸ್ತೆ,
ಪಾರ್ವತಿ ನಗರ, ಬಳ್ಳಾರಿ.
583103.
9980346474
ಹೆಚ್ಚಿನ ಮಾಹಿತಿಗಾಗಿ: ಡಾ. ಗಡ್ಡಿ ದಿವಾಕರ (94483 71009) ಅಥವಾ ವೀರೇಂದ್ರ ರಾವಿಹಾಳ್ (9449622737) ಇವರನ್ನು ಸಂಪರ್ಕಿಸಬಹುದು.
—–
