ಬಳ್ಳಾರಿ ಮಹಾನಗರ ಪಾಲಿಕೆ‌ ನಿವೃತ್ತ ಅಧಿಕಾರಿ ಸಿ. ಯಮನಪ್ಪ ವಿಧಿವಶ

ಸಿ.ಯಮನಪ್ಪ

ಬಳ್ಳಾರಿ, ಏ.17: ಬಳ್ಳಾರಿ ಮಹಾನಗರ ಪಾಲಿಕೆ‌ ಹಾಗೂ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ನಿವೃತ್ತ ಅಧಿಕಾರಿ ಸಿ. ಯಮನಪ್ಪ ಅವರು ಗುರುವಾರ ನಿಧನರಾಗಿದ್ದಾರೆ.

ಅವರಿಗೆ 87 ವರ್ಷವಾಗಿತ್ತು. ಪತ್ನಿ ಜಾನಮ್ಮ, ಪುತ್ರರಾದ ಸಿ. ರವೀಂದ್ರ, ಡಾ. ವೈ. ವಿಶ್ವನಾಥ್, ಸಿ.ಗಂಗಾಧರ್, ಪುತ್ರಿಯರಾದ ಪ್ರೊ. ಸುಲೋಚನಾ ಮತ್ತು ಪ್ರೊ. ಶೋಭ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.

ಗುರುವಾರ ಸಂಜೆ ಕೌಲಬಜಾರ್ ನ ಗುಗ್ಗರಹಟ್ಟಿ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಪಾರ ಬಂಧು ಮಿತ್ರರ ಸಮ್ಮುಖದಲ್ಲಿ ಅಂತಿಮ‌ಸಂಸ್ಕಾರ‌ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಮ್ಮ ತಂದೆ ಸಿ.‌ಯಮನಪ್ಪ ಅವರು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಡಳಿತದಲ್ಲಿ ಕನ್ನಡ ಗರಿಷ್ಟ ಬಳಕೆಗಾಗಿ ಅಂದಿನ ಜಿಲ್ಲಾ‌ಉಸ್ತುವಾರಿ ಸಚಿವ ಎಂ.ಪಿ. ಪ್ರಕಾಶ ಅವರು ಜಿಲ್ಲಾಡಳಿತದ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ವೈ.‌ವಿಶ್ವನಾಥ್ ಸ್ಮರಿಸಿದ್ದಾರೆ.

ಸಂತಾಪ: ಸಿ. ಯಮನಪ್ಪ ಅವರ  ನಿಧನಕ್ಕೆ ಹಿರಿಯ ಸಾಹಿತಿ ಡಾ.‌ವೆಂಕಟಯ್ಯ ಅಪ್ಪಗೆರೆ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಬಳ್ಳಾರಿ ಐಜಿಪಿ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಕೆ.ಮಾರುತಿ, ನಿವೃತ್ತ ಪ್ರಾಚಾರ್ಯ ಡಾ. ಸಿ ಎಚ್ ಸೋಮನಾಥ, ತಹಸೀಲ್ದಾರರಾದ ಹೊನ್ನಮ್ಮ, ಬಳ್ಳಾರಿ ಮೆಡಿಕಲ್ ಕಾಲೇಜ್ ಪ್ರಾಧ್ಯಾಪಕ ಡಾ. ವಿಜಯ್ ಅಪ್ಪಗೆರೆ, ಎಸ್.ಪಿ ಕಚೇರಿಯ ಎಎಸ್ಐ ಸಿ. ಹನುಮಂತಪ್ಪ, ಕಾಡಾ ನಿವೃತ್ತ ಅಧಿಕಾರಿ ಗುರುಸ್ವಾಮಿ, ಸಿಎಂಎಸ್ ಮುಖಂಡ ಸಿ. ನರಸಪ್ಪ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು  ಪ್ರಾರ್ಥಿಸಿದ್ದಾರೆ.